Viral Video: ಹೆಂಡ್ತಿ ತವರಿಗೆ ಹೋಗಿದ್ದಾಳೆ ಎಂದು ಆಟೋದಲ್ಲಿ ಬಿಸ್ಕೆಟ್ ಹಂಚಿದ ಚಾಲಕ!
ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ಆಟೋ ಚಾಲಕನೊಬ್ಬ ಖುಷಿಯಾಗಿ ಅದನ್ನು ಚೀಟಿಯೊಂದರಲ್ಲಿ ಬರೆದು ತನ್ನ ಆಟೋ ಸೀಟಿನ ಹಿಂದೆ ಅಂಟಿಸಿದ್ದಾನೆ. ಇದನ್ನು ನೋಡಿದ ಪ್ರಯಾಣಿಕರೊಬ್ಬರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್(Viral Video) ಆಗಿದೆ.
ಬಹುತೇಕ ಗಂಡಂದಿರಿಗೆ ಪತ್ನಿ ತವರು ಮನೆಗೆ ಹೋಗುತ್ತಾಳೆ ಅಂದ್ರೆ ಸಾಕು ಅದೋನೋ ಸಂಭ್ರಮ. ಹೆಂಡ್ತಿ ಮನೆಯಲ್ಲಿ ಇಲ್ಲದಿದ್ದರೆ ತಮಗಿಷ್ಟ ಬಂದ ರೀತಿಯಲ್ಲಿ ಇರಬಹುದಲ್ಲವೇ ಎಂಬುದು ಅವರ ಲೆಕ್ಕಚಾರ. ಇದೀಗ ಅಂತಹದ್ದೇ ಒಬ್ಬ ಗಂಡ ಹೆಂಡ್ತಿ ತವರು ಮನೆಗೆ ಹೋಗಿದ್ದಾಳೆಂಬ ಖುಷಿಗೆ ಅದೆಷ್ಟರ ಮಟ್ಟಿಗೆ ಸಂಭ್ರಮ ಪಟ್ಟಿದ್ದಾನೆಂದರೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಅವನದ್ದೇ ಚರ್ಚೆ. ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿ "ಹೆಂಡತಿ ತವರಿಗೆ ಹೋಗಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ" ಎಂದು ಚೀಟಿ ಬರೆದು ಅದನ್ನು ಆಟೋದ ಸೀಟಿಗೆ ಅಂಟಿಸಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಸಾಲದೆನ್ನುವಂತೆ ಹೆಂಡತಿ ತವರಿಗೆ ಹೋಗಿದ್ದಕ್ಕೆ ಖುಷಿಯಾಗಿ ಆತ ತನ್ನ ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬಿಸ್ಕೇಟ್ ಹಂಚಿದ್ದಾನಂತೆ.
ಆಟೋ ಚಾಲಕನ ಸೀಟಿನ ಹಿಂದೆ ಬರೆದ ಈ ಪೋಸ್ಟ್ ಅನ್ನು ಗಮನಿಸಿದ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಬಿಸ್ಕೇಟ್ ಪ್ಯಾಕ್ ವಿತರಣೆ ಮತ್ತು ಟಿಪ್ಪಣಿಯನ್ನು ಒಳಗೊಂಡಿರುವ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ 'ಸ್ಮೈಲ್' ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. "ಇಷ್ಟೊಂದು ಖುಷಿ?" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ವಾಹ್, ಅವನು ತನ್ನ ಸ್ವಾತಂತ್ರ್ಯವನ್ನು ಆನಂದಿಸುತ್ತಿದ್ದಾನೆ" ಎಂದು ಇನ್ನೊಬ್ಬರು ಹೇಳಿದ್ದಾರೆ.
ಕೆಲವು ನೆಟ್ಟಿಗರು ಇದು ವೈರಲ್ ಆಗಿರುವುದರಿಂದ ಅವನಿಗೆ ತೊಂದರೆಯಾಗಬಹುದು ಎಂದು ತಿಳಿಸಿದ್ದಾರೆ. ಯಾಕೆಂದರೆ ಈ ವಿಚಾರ ಆತನ ಹೆಂಡತಿಗೆ ತಿಳಿದರೆ ಅವರ ಸಂಬಂಧ ಹಾಳಾಗಬಹುದು ಎಂದು ಕೆಲವರು ಹೇಳಿದ್ದಾರೆ. "ನೀವು ಅವನ ಜೀವನವನ್ನು ಹಾಳು ಮಾಡಿದ್ದೀರಿ, ಈ ಬಡ ವ್ಯಕ್ತಿ ಸಂತೋಷವಾಗಿದ್ದನು, ಈಗ ಅದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ, ಅವನ ಹೆಂಡತಿಗೆ ಈ ಬಗ್ಗೆ ತಿಳಿದರೆ ಅವನು ಆಟೋದಲ್ಲಿ ಮಾತ್ರ ಮಲಗಬೇಕಾಗುತ್ತದೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಇದು ಓಯೋ ರೂಂ ಅಲ್ಲ... ʻರೋಮ್ಯಾನ್ಸ್ʼ ಮಾಡಿದರೆ ಹುಷಾರ್ ಎಂದ ಆಟೋ ಚಾಲಕ; ತಮಾಷೆ ಮಾಡಿದ ನೆಟ್ಟಿಗರು!
ಕೆಲವು ದಿನಗಳ ಹಿಂದೆಯಷ್ಟೇ ಆಟೋದಲ್ಲಿ ನೋ ರೊಮ್ಯಾನ್ಸ್ ಎಂದು ಬರೆದು ಅಂಟಿಸಿರುವ ಫೊಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಕೆಲವೊಂದು ಆಟೋ ಡ್ರೈವರ್ ತಮ್ಮ ಆಟೋದಲ್ಲಿ ಪ್ರಯಾಣಿಕರಿಗೆ ಓದುವುದಕ್ಕೆ ಪುಸ್ತಕ ಇಟ್ಟುಕೊಂಡಿರುವುದು, ಇನ್ನು ಕೆಲವೊಂದು ಆಟೋಡ್ರೈವರ್ ಯಾವುದ್ಯಾವುದೋ ಜಾಹೀರಾತು ಹಾಕಿಕೊಂಡಿರುವುದನ್ನು ನೀವು ನೋಡಿರಬಹುದು. ಆದರೆ ಈತ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಚ್ಚರಿಕೆಯ ನಿಯಮಗಳಿರುವ ಪ್ರಿಂಟ್ ಬೋರ್ಡ್ ಅನ್ನು ಆಟೋದ ಹಿಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಸರಿಯಾಗಿ ಕಾಣುವಂತೆ ಡ್ರೈವರ್ ಸೀಟಿನ ಹಿಂಭಾಗದಲ್ಲಿ ಅಂಟಿಸಿದ್ದಾರೆ. ಈ ಸಂದೇಶದಲ್ಲಿ, ಚಾಲಕ ತನ್ನ ಪ್ರಯಾಣಿಕರಿಗೆ ರೋಮ್ಯಾನ್ಸ್ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ಮತ್ತು ಪ್ರಯಾಣಿಕರನ್ನು ಗೌರವದಿಂದ ಇರುವಂತೆ ಕೇಳಿಕೊಂಡಿದ್ದಾರೆ. "ಎಚ್ಚರಿಕೆ!! ರೋಮ್ಯಾನ್ಸ್ ಮಾಡುವ ಹಾಗೇ ಇಲ್ಲ. ಇದು ಕ್ಯಾಬ್ ನಿಮ್ಮ ಖಾಸಗಿ ಸ್ಥಳ ಅಥವಾ ಓಯೋ ಅಲ್ಲ ಎಂದು ಪೋಸ್ಟ್ ಅನ್ನು ಅಂಟಿಸಿದ್ದಾನೆ.