Viral Video: ಅಪ್ಪ ಅಮ್ಮನ ಕಣ್ತಪ್ಪಿಸಿ ಈ ಮಕ್ಕಳು ಮಾಡಿದ್ದೇನು ಗೊತ್ತಾ? ಪೋಷಕರನ್ನು ಅರೆಸ್ಟ್ ಮಾಡಿ ಎಂದ ನೆಟ್ಟಿಗರು!
ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಐವರು ಸ್ನೇಹಿತರೊಂದಿಗೆ ಮಹೀಂದ್ರಾ ಎಕ್ಸ್ ಯುವಿ 700 ಕಾರನ್ನು ಚಲಾಯಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅಪ್ರಾಪ್ತನೊಬ್ಬ ಕಾರು ಚಲಾಯಿಸಿದ್ದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ ಮತ್ತು ಅವರ ಬೇಜವಾಬ್ದಾರಿಯುತ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಮುಂಬೈ: ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಐವರು ಸ್ನೇಹಿತರೊಂದಿಗೆ ಮಹೀಂದ್ರಾ ಎಕ್ಸ್ ಯುವಿ 700 ಕಾರನ್ನು ಚಲಾಯಿಸಿದ ವಿಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದು ರಸ್ತೆ ಸುರಕ್ಷತೆ ಮತ್ತು ಪೋಷಕರ ಬೇಜವಾಬ್ದಾರಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಈ ವಿಡಿಯೊ ನೋಡಿ ನೆಟ್ಟಿಗರು ಆತನ ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.ಥಾಣೆಯ ನ್ಯೂ ಹೊರೈಜನ್ ಶಾಲೆಯ ಹೊರಗೆ ಆನಂದ್ ನಗರದ ಕವೇಸರ್ ಬಳಿ ಅನೂಪ್ ಕೆಮ್ಕರ್ ಎಂಬಾತ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾನೆ. ಶಾಲಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿ, ಮಹೀಂದ್ರಾ ಎಕ್ಸ್ ಯುವಿ ಕಾರಿನಲ್ಲಿ ತನ್ನ 5 ಮಂದಿ ಸಹಪಾಠಿಗಳೊಂದಿಗೆ ರಸ್ತೆಯಲ್ಲಿ ಸಂಚಾರ ಮಾಡಿದ್ದಾನೆ. ಕ್ಯಾಶುಯಲ್ ಉಡುಪನ್ನು ಧರಿಸಿದ ಒಬ್ಬರನ್ನು ಹೊರತುಪಡಿಸಿ ಅಲ್ಲಿದ್ದ ಉಳಿದ ಮಕ್ಕಳು ಸಮವಸ್ತ್ರದಲ್ಲಿದ್ದರು ಎನ್ನಲಾಗಿದೆ.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ತೋರಿಸುವ ಬೇಜವಾಬ್ದಾರಿತನದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇಲ್ಲಿ ಕೆಲವು ಮಕ್ಕಳು ಸನ್ ರೂಫ್‍ನಿಂದ ಹೊರಗೆ ಕೂಡ ಬಂದಿದ್ದಾರೆ.ಕಾರಿನಲ್ಲಿ ಸುಮಾರು 5-6 ವಿದ್ಯಾರ್ಥಿಗಳು ಇದ್ದರು. ಏನಾದರೂ ಅನಾಹುತವಾದರೆ ಇದಕ್ಕೆ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಬೇಕು' ಎಂದು ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿ ಆಗ್ರಹಿಸಿದ್ದಾರೆ.
ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಕಾರು ಚಲಾಯಿಸಿದ ದೃಶ್ಯ ಇಲ್ಲಿದೆ ನೋಡಿ...
ಈ ವೈರಲ್ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಡ್ರೈವಿಂಗ್ ಬಗ್ಗೆ ಸಲಹೆ ನೀಡುವವರು ಇಲ್ಲದೆ ಪೋಷಕರು ಮಕ್ಕಳನ್ನು ರಸ್ತೆಯಲ್ಲಿ ಕಾರನ್ನು ತೆಗೆದುಕೊಳ್ಳಲು ಹೇಗೆ ಅನುಮತಿ ನೀಡಿದರು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಪ್ರಾಪ್ತ ವಯಸ್ಕರು ವಾಹನ ಚಲನೆ ಮಾಡುವುದರಿಂದ ಉಂಟಾಗುವ ಅಪಾಯಗಳನ್ನು ಒತ್ತಿಹೇಳುತ್ತಾ ನೆಟ್ಟಿಗರು ಈ ವಿಷಯದಲ್ಲಿ ಪೊಲೀಸ್ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಕ್ಕಳ ಅಜಾಗರೂಕ ಕೃತ್ಯವನ್ನು ಖಂಡಿಸಿ ನೆಟ್ಟಿಗರು ಈ ಪೋಸ್ಟ್ ಅನ್ನು ಎಲ್ಲೆಡೆ ಶೇರ್ ಮಾಡಿದ್ದಾರೆ. "ಇದು ಅತ್ಯಂತ ಅಸುರಕ್ಷಿತವಾಗಿದೆ" ಎಂದು ಒಬ್ಬರು ಬರೆದಿದ್ದಾರೆ. “ಈ ಪೋಸ್ಟ್ ಅನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಮಕ್ಕಳನ್ನು ಅರೆಸ್ಟ್ ಮಾಡಿ” ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು “ ಮಕ್ಕಳಿಗೆ ರಸ್ತೆಯಲ್ಲಿ ಕಾರು ಚಲಾಯಿಸಲು ಅನುಮತಿ ನೀಡಿದ ಪೋಷಕರನ್ನು ಅರೆಸ್ಟ್ ಮಾಡಿ” ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Bomb Threats : ಪರೀಕ್ಷೆ ತಪ್ಪಿಸಲು ಶಾಲಾ ಮಕ್ಕಳು ಮಾಡಿದ ಕಿತಾಪತಿ ಏನ್ ಗೊತ್ತಾ? ಇವ್ರ ಕೃತ್ಯಕ್ಕೆ ಪೊಲೀಸರೇ ಶಾಕ್!
ಮಕ್ಕಳು ಮಾಡುವ ಕಿತಾಪತಿ ಒಂದಾ ಎರಡಾ....ಇತ್ತೀಚೆಗೆ ಶಾಲಾ ಮಕ್ಕಳು ಪರೀಕ್ಷೆ ತಪ್ಪಿಸಲು ಎರಡು ಶಾಲೆಗಳಿಗೆ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ.ಈ ಹಿನ್ನೆಲೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಕೌನ್ಸೆಲಿಂಗ್ ಗೆ ಒಳ ಪಡಿಸಿದ್ದರು. ಕೌನ್ಸೆಲಿಂಗ್ ಸಮಯದಲ್ಲಿ, ವಿದ್ಯಾರ್ಥಿಗಳು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡರು . ತಾವು ಪರೀಕ್ಷೆಗೆ ಓದಿಕೊಂಡಿರಲಿಲ್ಲ. ಅದಕ್ಕಾಗಿ ಏನಾದರೂ ಮಾಡಿ ಪರೀಕ್ಷೆ ನಿಲ್ಲಿಸಬೇಕೆಂದು ಉಪಾಯ ಮಾಡಿ ಬೆದರಿಕೆ ಇಮೇಲ್ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.ಘಟನೆಯ ಬಗ್ಗೆ ಪೊಲೀಸರು ವಿದ್ಯಾರ್ಥಿಗಳ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.