ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 20 ವರ್ಷಗಳಿಂದ ಮಗುವಿನಂತೆ ಸಲಹಿದ್ದ ಅಶ್ವತ್ಥ ಮರವನ್ನು ಕಡಿದ ದುಷ್ಕರ್ಮಿಗಳು; ಬಿಕ್ಕಿಬಿಕ್ಕಿ ಅತ್ತ 85 ವರ್ಷದ ವೃದ್ಧೆ

Miscreants cut down the peepal tree: ಮಹಿಳೆಯೊಬ್ಬರು ಎರಡು ದಶಕಗಳಿಗಿಂತ ಹಿಂದೆ ಅಶ್ವತ್ಥ ಸಸಿಯನ್ನು ನೆಟ್ಟು ಅದಕ್ಕೆ ನೀರುಣಿಸಿ ಪೋಷಿಸಿದ್ದರು. ಇದೀಗ ಆ ಮರವನ್ನು ತಮ್ಮ ಲಾಭಕ್ಕಾಗಿ ಯಾರೋ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಇದರಿಂದ ನೊಂದ ವೃದ್ಧೆ ಬಿದ್ದಿರುವ ಮರದ ಬಳಿ ಬಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮಗುವಿನಂತೆ ಸಾಕಿ ಸಲಹಿದ್ದ ಅಶ್ವತ್ಥ ಮರ ಕಡಿದ ದುಷ್ಕರ್ಮಿಗಳು

-

Priyanka P Priyanka P Oct 12, 2025 9:03 PM

ರಾಯ್‌ಪುರ: ಎರಡು ದಶಕಗಳಿಗೂ ಹೆಚ್ಚು ಕಾಲ ಪೋಷಿಸಿದ ಅಶ್ವತ್ಥ ಮರವನ್ನು ಅಕ್ರಮವಾಗಿ ಕಡಿದ ನಂತರ 85 ವರ್ಷದ ಮಹಿಳೆಯೊಬ್ಬರು ಕಣ್ಣೀರು ಹಾಕಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಛತ್ತೀಸ್‌ಗಢದ (Chhattisgarh) ಖೈರಾಗರ್ ಜಿಲ್ಲೆಯ ಸಾರಾ ಗೊಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಡಿಯೋಲಾ ಬಾಯಿ ಸುಮಾರು 20 ವರ್ಷಗಳ ಹಿಂದೆ ತಮ್ಮ ಅಂಗಳದಲ್ಲಿ ಒಂದು ಸಣ್ಣ ಅಶ್ವತ್ಥ ಸಸಿಯನ್ನು ನೆಟ್ಟು ಮಗುವಿನಂತೆ ಪೋಷಿಸಿದ್ದರು. ಅವರು ನಿಯಮಿತವಾಗಿ ಅದಕ್ಕೆ ನೀರುಣಿಸುತ್ತಿದ್ದರು.

ಇದೀಗ ಆ ಮರವನ್ನು ಯಾರೋ ಕಡಿದು ಹಾಕಿದ್ದಾರೆ. ಲಾಭಕ್ಕಾಗಿ ಮರವನ್ನು ಕತ್ತರಿಸಲಾಗಿದೆ ಎಂದು ಹೇಳಲಾಗಿದೆ. ಮರವನ್ನು ಕಡಿದ ದೃಶ್ಯವನ್ನು ನೋಡಿದ ಆ ವೃದ್ಧೆ ಕಾಂಡದ ಪಕ್ಕದಲ್ಲಿ ನೆಲಕ್ಕೆ ಬಿದ್ದು, ತಡೆಯಲಾಗದೆ ಅತ್ತಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಹಂಚಿಕೊಂಡಿರುವ ವಿಡಿಯೊದಲ್ಲಿ ಮಹಿಳೆಯೊಬ್ಬರು ಮರದ ಬುಡದ ಬಳಿ ತಲೆ ಚಚ್ಚಿಕೊಂಡು ಅಳುತ್ತಿರುವುದನ್ನು ಕಾಣಬಹುದು.

ಇದು ತುಂಬಾ ಹೃದಯ ವಿದ್ರಾವಕ ದೃಶ್ಯ. 20 ವರ್ಷಗಳ ಹಿಂದೆ ತಾನು ನೆಟ್ಟಿದ್ದ ಅಶ್ವತ್ಥ ಮರವನ್ನು ಕಡಿದ ನಂತರ ವೃದ್ಧ ಮಹಿಳೆಯೊಬ್ಬರು ತುಂಬಾ ಅಳುತ್ತಿದ್ದಾರೆ. ಇದು ಛತ್ತೀಸ್‌ಗಢದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ ಅಂತಾ ಕಿರಣ್ ರಿಜಿಜು ಎಕ್ಸ್‌ನಲ್ಲಿ ಬರೆದಿದ್ದಾರೆ.

ವಿಡಿಯೊ ವೀಕ್ಷಿಸಿ:



ಅಕ್ಟೋಬರ್ 5ರ ಬೆಳಗ್ಗೆ, ಖೈರಾಗಢದ ಇಮ್ರಾನ್ ಮೆಮನ್ ಮತ್ತು ಅವನ ಸಹಚರರು ಮರ ಕಡಿಯಲು ಪ್ರಯತ್ನಿಸಿದಾಗ, ಗ್ರಾಮಸ್ಥರು ಮಧ್ಯಪ್ರವೇಶಿಸಿ ಅವರನ್ನು ತಡೆದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮರುದಿನ ಬೆಳಗ್ಗೆ ನೋಡಿದಾಗ ಮರವನ್ನು ಕಡಿದು ಬೀಳಿಸಲಾಗಿತ್ತು. ಈ ಸಂಬಂಧ ಖೈರಾಗಢ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 298 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶ) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಬಿಜೆಪಿ ಕಾರ್ಯಕರ್ತನಿಗೆ ಸೀರೆ ಉಡಿಸಿ ಅಪಮಾನ- ಸ್ವಪಕ್ಷದವರ ಕುಕೃತ್ಯದ ವಿಡಿಯೊ ವೈರಲ್‌

ಪ್ರಕರಣ ಸಂಬಂಧ ಖೈರಗಢ್-ಚುಯಿಖಾದನ್-ಗಂಡೈ (ಕೆಸಿಜಿ) ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಖೈರಗಢ್ ಎಸ್‌ಎಚ್‌ಒ ಅನಿಲ್ ಶರ್ಮಾ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಮೆಮನ್ ಇತ್ತೀಚೆಗೆ ಖರೀದಿಸಿದ ಜಮೀನಿನ ಮುಂಭಾಗದಲ್ಲಿರುವ ಸರ್ಕಾರಿ ಭೂಮಿಯನ್ನು ಬಯಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಲಾಲ್‌ಪುರದ ಪ್ರಕಾಶ್ ಕೋಸ್ರೆ ಅವರ ಸಹಾಯವನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಮರವನ್ನು ಕತ್ತರಿಸಲು ಕಟಿಂಗ್ ಯಂತ್ರವನ್ನು ಬಳಸಿದರು. ಕೃತ್ಯದ ನಂತರ, ಇಬ್ಬರೂ ಖೈರಾಗಢಕ್ಕೆ ಓಡಿಹೋಗಿ, ಕತ್ತರಿಸುವ ಯಂತ್ರವನ್ನು ನದಿಗೆ ಎಸೆದು ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ಯಂತ್ರವನ್ನು ಪತ್ತೆಹಚ್ಚಲು ಡೈವರ್‌ಗಳನ್ನು ನಿಯೋಜಿಸಲಾಗಿದೆ.