ಒಳಗೆ ಸೇರಿದರೆ ಗುಂಡು ಮಂಗನೂ ಆಗುವುದು ಮಾನವ! ಇಂಡೋನೇಷ್ಯಾದ ಬೀಚ್‌ನಲ್ಲಿ ಬಾಟಲ್ ಹಿಡಿದು ಬಿಯರ್ ಹೀರಿದ ಕೋತಿಗಳು
Viral Video: ಇಂಡೋನೇಷ್ಯಾದ ಜಕಾರ್ತದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕಡಲ ತೀರದಲ್ಲಿ ಪ್ರವಾಸಿಗರು ಎಸೆದು ಹೋಗಿದ್ದ ಬಿಯರ್ ಬಾಟಲಿಗಳನ್ನು ಹಿಡಿದು ಕೋತಿಗಳು ಕುಡಿಯುತ್ತಿರುವ ದೃಶ್ಯ ಕಂಡು ಬಂದಿದೆ. ಪ್ರವಾಸಿಗರು ತೋರುವ ಇಂತಹ ಬೇಜವಾಬ್ದಾರಿಯ ವರ್ತನೆಯಿಂದ ವನ್ಯ ಜೀವಿಗಳ ಆರೋಗ್ಯಕ್ಕೆ ಬಹಳಷ್ಟು ಪೆಟ್ಟು ಬೀಳುತ್ತಿದೆ ಎಂದು ಅರಣ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂಡೋನೇಷ್ಯಾದ ಬೀಚ್‌ನಲ್ಲಿ ಬಿಯರ್ ಕುಡಿದ ಮಂಗಗಳು -
ಜಕಾರ್ತ, ಜೂ. 24: ಇತ್ತೀಚೆಗೆ ಪ್ರವಾಸಿಗರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಕಾಡುತ್ತಿದೆ ಎನ್ನುವ ಹಲವು ದೂರು ಕೇಳಿ ಬರುತ್ತಿದೆ. ಕೆಲವೊಮ್ಮೆ ಪ್ರವಾಸಿ ಸ್ಥಳದಲ್ಲಿ ನಾಗರಿಕರು ಜವಾಬ್ದಾರಿ ಇಲ್ಲದೆ ಎಸಗುವ ಕೃತ್ಯಗಳು ಪರಿಸರ, ವನ್ಯ ಜೀವಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂಡೋನೇಷ್ಯಾದ ಜಕಾರ್ತದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಕಡಲ ತೀರದಲ್ಲಿ ಪ್ರವಾಸಿಗರು ಎಸೆದು ಹೋಗಿದ್ದ ಬಿಯರ್ ಬಾಟಲಿಗಳನ್ನು ಹಿಡಿದು ಕೋತಿಗಳು ಕುಡಿಯುತ್ತಿರುವ ದೃಶ್ಯವೊಂದು (Viral News) ಕಂಡು ಬಂದಿದೆ. ಪ್ರವಾಸಿಗರು ತೋರುವ ಇಂತಹ ವರ್ತನೆ ವನ್ಯ ಜೀವಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಅರಣ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂಡೋನೇಷ್ಯಾದ ಲೊಂಬೋಕ್ ದ್ವೀಪದಲ್ಲಿ ಈ ಘಟನೆಯನ್ನು ಸೆರೆ ಹಿಡಿಯಲಾಗಿದೆ. ಪಶ್ಚಿಮ ನುಸಾ ಟೆಂಗಾರಾದ ಕುಟಾದಲ್ಲಿರುವ ಕಡಲತೀರದ ಬಳಿ ಕುಳಿತಿದ್ದ ಎರಡು ಮಂಗಗಳು ಬಿಯರ್ ಬಾಟಲಿಗಳನ್ನು ಹಿಡಿದು ಹೀರುತ್ತಿರುವುದು ಕಂಡು ಬಂದಿದೆ. ಈ ದೃಶ್ಯ ನೋಡಲು ತಮಾಷೆ ಎನಿಸಿದರೂ ಪ್ರಾಣಿಗಳ ಮೇಲೆ ಉಂಟಾಗುವ ಆರೋಗ್ಯ ಸಮಸ್ಯೆ ಬಗ್ಗೆ ಆತಂಕ ಮೂಡಿದೆ.
ವಿಡಿಯೊ ನೋಡಿ:
Monkeys Crash Happy Hour: Cheeky Primates Spotted Chugging Beer on Indonesian Island
— Isabella (@Isabella_im38) June 23, 2026
In a scene straight out of a wildlife comedy, two bold monkeys were caught on camera enjoying an impromptu happy hour in Kuta, on Indonesia’s Lombok island. The footage, shared by Fox News, shows… pic.twitter.com/MCcqA962n9
ವೈರಲ್ ಆದ ವಿಡಿಯೊದಲ್ಲಿ, ಮಂಗಗಳು ಕಲ್ಲಿನ ಮೇಲೆ ಕುಳಿತಿರುವುದು ಕಾಣಿಸುತ್ತಿದೆ. ಇದರಲ್ಲಿ ಎರಡು ಕೋತಿಗಳು ತಲಾ ಒಂದೊಂದು ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಕುಡಿಯುತ್ತಿವೆ. ಅದರಲ್ಲಿ ಒಂದು ಹಸಿರು ಮತ್ತು ಮತ್ತೊಂದು ಕಂದು ಬಣ್ಣದ ಬಾಟಲಿಯಾಗಿದ್ದು, ಮಂಗಗಳು ಮನುಷ್ಯರಂತೆಯೇ ಬಿಯರ್ ಹೀರಿವೆ.
ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು
ಕ್ಲೇರ್ ಹ್ಯಾನ್ಸೆನ್ ಎಂಬವರು ತಮ್ಮ ಪ್ರವಾಸದ ವೇಳೆ ಈ ದೃಶ್ಯ ಸೆರೆಹಿಡಿದಿದ್ದಾರೆ. ಪ್ರವಾಸಿಗರು ಎಸೆಯುವ ಕಸದ ಡಬ್ಬಿಗಳು, ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳು ಪ್ರಾಣಿಗಳಿಗೆ ಮಾರಕವಾಗುತ್ತಿವೆ ಎಂದು ಕೆಲವರು ಕಿಡಿಕಾರಿದ್ದಾರೆ. ಇತ್ತೀಚೆಗೆ ಪ್ರಕೃತಿ ರಮಣೀಯತೆಯಿಂದ ಕೂಡಿದ ಕರ್ನಾಟಕದ ಮಹಾದೇಶ್ವರ ಬೆಟ್ಟದಲ್ಲಿ ಕೂಡ ಭಕ್ತರು ಬೇಜವಾಬ್ದಾರಿಯಿಂದ ತೋರಿರುವ ವಿಡಿಯೊವೊಂದು ವೈರಲ್ ಆಗಿತ್ತು. ಪ್ರವಾಸಿಗರು ಎಲ್ಲೆಂದರಲ್ಲಿ ಎಸೆದು ಹೋಗಿದ್ದ ಪ್ಲಾಸ್ಟಿಕ್ ಕಸದ ರಾಶಿಯ ನಡುವೆ ಆನೆಯೊಂದು ಆಹಾರ ಹುಡುಕುತ್ತ ನಿಂತಿತ್ತು. ಈ ದೃಶ್ಯ ಮಾನವ ಕ್ರೂರತೆಗೆ ಹಿಡಿದ ಕನ್ನಡಿ ಎಂದು ಹಲವರು ಕಿಡಿಕಾರಿದ್ದರು.