Viral Video: ಡೋರ್ ಬೆಲ್‌ಗೂ ಬಂತು ಕ್ಯೂಆರ್ ಕೋಡ್; ಇಲ್ಲಿದೆ ನೋಡಿ ಸ್ಮಾರ್ಟ್ ವಿಡಿಯೊ
Viral Video: ಕ್ಯೂಆರ್ ಕೋಡ್ ಬಳಕೆ ಅಧಿಕವಾಗುತ್ತಿದೆ. ಇದೀಗ ಮನೆಯ ಬಾಗಿಲಿಗೂ ಕ್ಯೂಆರ್ ಕೋಡ್ ಅಳವಡಿಸಿರುವ ದೃಶ್ಯ ನೆಟ್ಟಿಗರಿಗೆ ಆಶ್ಚರ್ಯ ಉಂಟು ಮಾಡಿದೆ. ವಿಡಿಯೊದಲ್ಲಿ ಮಹಿಳೆಯು ಕ್ಯೂಆರ್ ಕೋಡ್ ಬಳಸಿ ಡೋರ್ ಬೆಲ್ ತೆರೆಯುವ ದೃಶ್ಯವನ್ನು ನೋಡಬಹುದು. ಸದ್ಯ ಈ ದೃಶ್ಯ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

QR Code-Based Calling Bell

ನವದೆಹಲಿ: ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಜಗತ್ತು ಫುಲ್ ಸ್ಮಾರ್ಟ್, ಡಿಜಿಟಲ್ ಆಗುತ್ತದೆ. ಅದರಲ್ಲೂ ಕ್ಯೂಆರ್ ಕೋಡ್ (QR Code) ಬಂದ ಮೇಲೆ ಕಾರ್ಡ್, ಕ್ಯಾಶ್ಗಳಿಗಿಂತ ಹೆಚ್ಚಾಗಿ ಫೋನ್ ಪೇ, ಗೋಗಲ್ ಪೇಗೆ ಜನರು ಅವಲಂಬಿತರಾಗಿದ್ದಾರೆ. ಇಂದು ಪ್ರತಿಯೊಂದರಲ್ಲೂ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಬಂದಿದೆ. ಫೋನ್ ಪೇಯಲ್ಲಿ ಕ್ಯೂಆರ್ ಕೋಡ್ ಮಾತ್ರವಲ್ಲದೇ, ಸ್ಮಾರ್ಟ್ ವಾಚ್ , ಎಲೆಕ್ಟ್ರಿಕ್ ವಸ್ತುಗಳಲ್ಲೂ ಕ್ಯೂಆರ್ ಕೋಡ್ ಬಂದಿದೆ (Viral Video). ಇದೀಗ ಮನೆಯ ಡೋರ್ ಬೆಲ್‌ನಂತೆಯೆ ಕಾರ್ಯ ನಿರ್ವಹಿಸಲು ಕೂಡ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಯಾಗಿದೆ. ಮಹಿಳೆಯೊಬ್ಬಳು ಕ್ಯೂಆರ್ ಕೋಡ್ ಬಳಸಿ ಡೋರ್ ಬೆಲ್ ಮಾಡಿರುವ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೀಗ ಮನೆಯ ಬಾಗಿಲಿಗೂ ಕ್ಯೂಆರ್ ಕೋಡ್ ಅಳವಡಿಸಿರುವ ದೃಶ್ಯ ನೆಟ್ಟಿಗರಿಗೆ ಆಶ್ಚರ್ಯ ಉಂಟು ಮಾಡಿದೆ. ವಿಡಿಯೊದಲ್ಲಿ ಮಹಿಳೆಯು ಕ್ಯೂಆರ್ ಕೋಡ್ ಬಳಸಿ ಡೋರ್ ಬೆಲ್ ತೆರೆಯುವ ದೃಶ್ಯವನ್ನು ನೋಡಬಹುದು. ಡೋರ್ ಬಾಗಿಲು ತೆರೆಯಲು ಯಾವುದೆ ಸ್ವಿಚ್ ಇರುವ ಬದಲು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಅನ್ನು ಅಳವಡಿಸಲಾಗಿದೆ. ಈ ಮೂಲಕ ಇದನ್ನು ಸ್ಕ್ಯಾನ್ ಮಾಡಿದಾಗ ವಿಡಿಯೊ ಕಾಲ್ ಮೂಲಕ ಕರೆ ಹೋಗಲಿದೆ. ಸದ್ಯ ಈ ದೃಶ್ಯ ನೋಡಿದ ನೆಟ್ಟಿಗರೇ ಒಂದು ಕ್ಷಣ ಶಾಕ್ ಆಗಿದ್ದು, ಜನರೀಗ ಫುಲ್ ಸ್ಮಾರ್ಟ್ ಆಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಒಂದು ಸ್ಮಾರ್ಟ್ ಡೋರ್ ಬೆಲ್ ಎನ್ನುವುದು ಸ್ಕ್ಯಾನಿಂಗ್ ಆಧಾರಿತ ವ್ಯವಸ್ಥೆ ಆಗಿದ್ದು ಆ್ಯಪ್ ಮೂಲಕ ಕಾರ್ಯನಿರ್ವಹಿಸಲಿದೆ. ಇದನ್ನು ನಿಮ್ಮ ಮನೆ ಬಾಗಿಲಿಗೆ ಜೋಡಿಸಿದರೆ ಯಾರೇ ವ್ಯಕ್ತಿ ಬಂದರೂ ಇದಕ್ಕೆ ಸ್ಕ್ಯಾನ್ ಮಾಡಬಹುದು. ತನ್ನ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ವಿಡಿಯೊ ಕಾಲ್ ಮೂಲಕ ಕಾಲ್ ಹೋಗಲಿದ್ದು, ಮನೆಗೆ ಯಾರು ಬಂದಿದ್ದಾರೆ ಎನ್ನುವುದನ್ನು ಮೊದಲೇ ತಿಳಿಯಬಹುದು. ಈ ಮೂಲಕ ಸ್ಕ್ಯಾನ್ ಮಾಡಿದ್ದ ಸಂದರ್ಭದಲ್ಲಿ ಮನೆಯೊಳಗಿನ ವ್ಯಕ್ತಿಗೆ ನೇರವಾಗಿ ವಿಡಿಯೊ ಕಾಲ್ ಕನೆಕ್ಟ್ ಆಗುತ್ತದೆ. ಆನ್‌ಲೈನ್ ಫುಡ್ ಮತ್ತು ಇತರ ಡೆಲಿವರಿ ರಿಸಿವ್ ಮಾಡುವ ಸಂದರ್ಭದಲ್ಲಿ ಕ್ಯೂಆರ್ ಕೋಡ್ ಮೂಲಕ ಡೆಲಿವರಿ ಬಾಯ್ ಕಾಲ್ ಮಾಡಿದರೆ ಸುಲಭವಾಗಿ ವ್ಯವಹರಿಸಲು ಈ ವ್ಯವಸ್ಥೆ ಅನುಕೂಲ ಆಗಲಿದೆ.
ಇದನ್ನು ಓದಿ:Viral Video: ಚಲಿಸುತ್ತಿದ್ದ ರೈಲಿನಲ್ಲಿ ಸ್ಟಂಟ್ ಮಾಡಿ ಜಾರಿಬಿದ್ದ ವ್ಯಕ್ತಿ; ಇದೆಂಥಾ ಹುಚ್ಚುತನ...? ವಿಡಿಯೊ ನೋಡಿ
ವಿನ್ಶಿ ಬನ್ಸಾಲೆ ಎನ್ನುವ ಮಹಿಳೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಸ್ಮಾರ್ಟ್ ಡೋರ್ ಬೆಲ್ ಬಳಕೆ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದು, ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಇದೊಂದು ಸ್ಮಾರ್ಟ್ ಐಡಿಯಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ಸ್ಮಾರ್ಟ್ ಯುಗದಲ್ಲಿ ಏನನ್ನೂ ಮಾಡಬಹುದು ಎಂದು ಹೇಳಿದ್ದಾರೆ.