ಬ್ಲಿಂಕಿಟ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡಿದ ಸಂಸದ ರಾಘವ ಚಡ್ಡಾ: ವಿಡಿಯೊ ನೋಡಿ!
Viral Video: ಸಂಸದ ರಾಘವ ಚಡ್ಡಾ ನೀತಿ ಚರ್ಚೆಗಳಿಂದ ಸ್ವಲ್ಪ ದೂರ ಸರಿದು 'ಡೆಲಿವರಿ ಬಾಯ್' ರೂಪದಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ದಿನನಿತ್ಯದ ಡೆಲಿವರಿ ಏಜೆಂಟ್ ಗಳ ದೈನಂದಿನ ಹೋರಾಟ ಗಳನ್ನು ಅರ್ಥಮಾಡಿಕೊಳ್ಳಲು ಅವರು ಈ ಕೆಲಸ ಮಾಡಿದ್ದಾರೆ. ರಾಘವ ಚಡ್ಡಾ ಅವರು ಬ್ಲಿಂಕಿಟ್ ಸಂಸ್ಥೆಯ ಡ್ರೆಸ್ ಧರಿಸಿ ಸ್ಕೂಟರ್ ಮೇಲೆ ಕುಳಿತು ಆರ್ಡರ್ ಪೂರೈಸಲು ತೆರಳುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ಲಿಂಕಿಟ್ ಡೆಲಿವರಿ ರೈಡರ್ ಆದ ಸಂಸದ ರಾಘವ ಚಡ್ಡಾ -
ನವದೆಹಲಿ,ಡಿ.12: ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ ಅವರು ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರನ್ನು ತಮ್ಮ ಮನೆಗೆ ಊಟಕ್ಕಾಗಿ ಆಹ್ವಾನಿಸದ ವಿಚಾರ ಭಾರೀ ಸುದ್ದಿಯಾಗಿತ್ತು. ಇದೀಗ ಅವರು ನೀತಿ ಚರ್ಚೆಗಳಿಂದ ಸ್ವಲ್ಪ ದೂರ ಸರಿದು 'ಡೆಲಿವರಿ ಬಾಯ್' ರೂಪದಲ್ಲಿ ಕಾಣಿಸಿ ಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ದಿನನಿತ್ಯದ ಡೆಲಿವರಿ ಏಜೆಂಟ್ ಗಳ ದೈನಂದಿನ ಹೋರಾಟ ಗಳನ್ನು ಅರ್ಥಮಾಡಿಕೊಳ್ಳಲು ಅವರು ಈ ಕೆಲಸ ಮಾಡಿದ್ದಾರೆ. ರಾಘವ ಚಡ್ಡಾ ಅವರು ಬ್ಲಿಂಕಿಟ್ ಸಂಸ್ಥೆಯ ಡ್ರೆಸ್ ಧರಿಸಿ ಸ್ಕೂಟರ್ ಮೇಲೆ ಕುಳಿತು ಆರ್ಡರ್ ಪೂರೈಸಲು ತೆರಳುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಸಣ್ಣ ಕ್ಲಿಪ್ ವೊಂದನ್ನು ಚಾಡ್ಡಾ ಅವರು ಶೇರ್ ಮಾಡಿದ್ದು ಅವರು ಬ್ಲಿಂಕಿಟ್-ಬ್ರಾಂಡ್ ಟಿ-ಶರ್ಟ್ ಮತ್ತು ಜಾಕೆಟ್ ಧರಿಸುವುದ ರೊಂದಿಗೆ ಪ್ರಾರಂಭವಾಗುತ್ತದೆ. ಅವರು ಸಾಮಾನ್ಯ ಡೆಲಿವರಿ ಪಾರ್ಟ್ ನರ್ ಜೊತೆಗೆ ಸ್ಕೂಟರ್ ಮೇಲೆ ಕುಳಿತು ಆರ್ಡರ್ ಪೂರೈಸಲು ಅಂಗಡಿಯಿಂದ ವಸ್ತುಗಳನ್ನು ಸಂಗ್ರಹಿಸುವುದು, ಟ್ರಾಫಿಕ್ ನಡುವೆ ಹೋಗುವ ದೃಶ್ಯ ಕಂಡು ಬಂದಿದೆ. ಚಾಡ್ಡಾ ಅವರು ಆರಂಭ ದಿಂದ ಅಂತ್ಯದವರೆಗೆ ಡೆಲಿವರಿ ರೈಡರ್‌ನ ದಿನಚರಿಯ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ:
Away from boardrooms, at the grassroots. I lived their day.
— Raghav Chadha (@raghav_chadha) January 12, 2026
Stay tuned! pic.twitter.com/exGBNFGD3T
ತಮ್ಮ ಈ ಅನುಭವದ ಬಗ್ಗೆ ಬರೆದುಕೊಂಡಿರುವ ಚಡ್ಡಾ, ಬೋರ್ಡ್ ರೂಮ್‌ಗಳಿಂದ ದೂರ ಬಂದು ಈ ಬದುಕನ್ನು ಅನುಭವಿಸಿದೆ. ಶೀಘ್ರದಲ್ಲೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವೆ ಎಂದು ತಿಳಿಸಿದ್ದಾರೆ. ಗಿಗ್ ಕಾರ್ಮಿಕರು ಅನುಭವಿಸುವ ಒತ್ತಡ, ಕಡಿಮೆ ಆದಾಯ ಮತ್ತು ಸಾಮಾಜಿಕ ಭದ್ರತೆಯ ಕೊರತೆಯನ್ನು ಹತ್ತಿರದಿಂದ ನೋಡುವುದು ಈ ಸಾಹಸದ ಮುಖ್ಯ ಉದ್ದೇಶ ಎಂದಿದ್ದಾರೆ.
ಸದ್ಯ ಈ ಕ್ಲಿಪ್ ಆನ್‌ಲೈನ್‌ನಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ, ಅನೇಕ ಬಳಕೆದಾರರು ಸಂಸದ ರನ್ನು ವಾಕ್ಚಾತುರ್ಯಕ್ಕಿಂತ ನೇರ ಅನುಭವವನ್ನು ಆರಿಸಿಕೊಂಡಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇತರರು ಈ ಅನುಭವದಿಂದ ಅವರು ಯಾವ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಲು ಕಾಯುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬ್ಲಿಂಕಿಟ್ ವಿತರಣಾ ಅಧಿಕಾರಿಯೊಬ್ಬರ ಆದಾಯದ ಕುರಿತಾದ ವಿಡಿಯೊವೊಂದು ವೈರಲ್ ಆಗಿದ್ದುರಾಘವ ಚಡ್ಡಾ ಅವರು ಸಂಸತ್ತಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಕೆಲಸಗಾರರಿಗೆ ಸರಿಯಾದ ಸಂಬಳವಿಲ್ಲದಿರುವುದು, ದಿನಕ್ಕೆ 12-14 ಗಂಟೆಗಳ ಕಾಲ ದುಡಿಯಬೇಕಾದ ಅನಿವಾರ್ಯತೆ ಇರುವ ಬಗ್ಗೆ ಮಾತನಾಡಿದ್ದರು. ಈ ಹಿಂದೆ ಅವರು ಡೆಲಿವರಿ ಸಿಬ್ಬಂದಿಯನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಸಮಸ್ಯೆಗಳನ್ನು ಆಲಿಸಿದ್ದರು. ಈಗ ಸ್ವತಃ ಅವರೇವ ಕೆಲಸ ಮಾಡಿ ಅನುಭವ ಪಡೆದಿದ್ದುಸಾರ್ವಜನಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.