ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಮಾನ್ಯ ಜನರ ಕಷ್ಟ ಅರಿಯಲು ಭಿಕ್ಷುಕನ ವೇಷ ಧರಿಸಿ ಬೀದಿಗೆ ಇಳಿದ ಮುಂಬೈಯ ಬಿಜೆಪಿ ಶಾಸಕ: ವಿಡಿಯೊ ವೈರಲ್

Viral Video: ಅತ್ಯಂತ ಶ್ರಿಮಂತ ಬಿಜೆಪಿ ಶಾಸಕರೊಬ್ಬರು ಭಿಕ್ಷುಕನ ವೇಷ ಧರಿಸಿ ಮುಂಬೈಯ ಬೀದಿಗೆ ಇಳಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ದಿನವಿಡೀ ಅಲ್ಲಿದ್ದ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ, ಸಿಕ್ಕ ಆಹಾರವನ್ನೇ ಅವರು ಸೇವಿಸಿದ್ದಾರೆ. ಪ್ರಸಿದ್ಧ ರಾಜಕಾರಣಿಯಾಗಿದ್ದರೂ, ಸುತ್ತಮುತ್ತಲ ಜನರಿಗೆ ಅವರು ಯಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಈ ವಿಶಿಷ್ಟ ಪ್ರಯೋಗದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ರಸ್ತೆ ಬದಿಯಲ್ಲಿ ಕುಳಿತಿರುವುದು ಮತ್ತು ಜನರಲ್ಲಿ ಭಿಕ್ಷೆ ಬೇಡುವುದು ಕಂಡುಬಂದಿದೆ.

ಭಿಕ್ಷುಕನ ವೇಷ ಧರಿಸಿ ಬೀದಿಯಲ್ಲಿ ಓಡಾಡಿದ ಮುಂಬೈ ಶಾಸಕ: ವಿಡಿಯೊ ನೋಡಿ

ಮುಂಬೈ ಬಿಜೆಪಿ ಶಾಸಕ ಪರಾಗ್ ಶಾ (ಸಂಗ್ರಹ ಚಿತ್ರ) -

Profile
Pushpa Kumari Sep 14, 2026 6:48 PM

​ಮುಂಬೈ, ಸೆ. 14: ಶ್ರಿಮಂತ ಬಿಜೆಪಿ ಶಾಸಕರೊಬ್ಬರು ಭಿಕ್ಷುಕನ ವೇಷ ಧರಿಸಿ ಮಹಾರಾಷ್ಟ್ರದ ಮುಂಬೈ ಬೀದಿಯಲ್ಲಿ ಸುತ್ತಾಡಿದ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ. ದಿನವಿಡೀ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ, ಸಿಕ್ಕ ಆಹಾರವನ್ನೇ ಸೇವಿಸಿದ್ದಾರೆ. ಪ್ರಸಿದ್ಧ ರಾಜಕಾರಣಿಯಾಗಿದ್ದರೂ ಅವರ ಸುತ್ತಮುತ್ತಲ ಜನರಿಗೆ ಅವರು ಯಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಈ ವಿಶಿಷ್ಟ ಪ್ರಯೋಗದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ರಸ್ತೆ ಬದಿಯಲ್ಲಿ ಕುಳಿತಿರುವುದು ಮತ್ತು ಭಿಕ್ಷೆ ಬೇಡುವುದು ಕಂಡುಬಂದಿದೆ.

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ 3,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದ ಮುಂಬೈ ಬಿಜೆಪಿ ಶಾಸಕ ಪರಾಗ್ ಶಾ, ಇತ್ತೀಚೆಗೆ ಘಾಟ್‌ಕೋಪರ್‌ನ ಬೀದಿಗಳಲ್ಲಿ ಭಿಕ್ಷುಕನ ವೇಷದಲ್ಲಿ ಸಮಯ ಕಳೆದಿದ್ದಾರೆ. ಸಂಪೂರ್ಣ ಈ ವೇಷದಲ್ಲೆ ಅವರು ದಿನ ಕಳೆದಿದ್ದಾರೆ.

ವಿಡಿಯೊ ನೋಡಿ:



ತಮ್ಮ ಸಂಪತ್ತು ಮತ್ತು ರಾಜಕೀಯ ಸ್ಥಾನಮಾನದಿಂದ ಸಿಗುವ ಸವಲತ್ತುಗಳಿಲ್ಲದೆ ಬದುಕುವುದು ಹೇಗಿರುತ್ತದೆ ಎಂಬುದನ್ನು ಅರಿಬಯಲು ಶಾ ಈ ವೇಷ ಧರಿಸಿದ್ದಾರೆ. ತಾನು ಐಷಾರಾಮಿ ಜೀವನದಲ್ಲಿ ಬದುಕುತ್ತಿದ್ದರೂ ಕಾರ್‌, ಭದ್ರತಾ ಸಿಬ್ಬಂದಿಯನ್ನು ಬದಿಗಿಟ್ಟು ಸಂಪೂರ್ಣ ಸರಳ ಜೀವನವನ್ನು ಕಳೆದಿದ್ದಾರೆ. ಜೈನ ಧರ್ಮದ 'ಚಾತುರ್ಮಾಸ'ದ ಅವಧಿಯಲ್ಲಿ, ಜೈನ ಆಧ್ಯಾತ್ಮಿಕ ಗುರು ನಮ್ರಮುನಿ ಮಹಾರಾಜ್ ಈ ಸಲಹೆ ನೀಡಿದ್ದು ಇದರ ಮೇರೆಗೆ ಈ ಕಾರ್ಯವನ್ನು ಕೈಗೊಂಡಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!

ಮುಖಕ್ಕೆ ಕಪ್ಪು ಬಣ್ಣದ ಮೇಕಪ್ ಮತ್ತು ಹಳೆಯ ಉಡುಪುಗಳನ್ನು ಧರಿಸಿದ್ದ ಶಾಸಕರನ್ನು ಸಾವಿರಾರು ಜನರ ನಡುವೆ ಯಾರೂ ಗುರುತಿಸಲಿಲ್ಲ. ಈ ಪ್ರಯೋಗವು ಕೇವಲ ವೇಷಧಾರಣೆಗೆ ಸೀಮಿತವಾಗಿರಲಿಲ್ಲ. ನಂತರ ಶಾ ತಮ್ಮ ವೇಷವನ್ನು ಬದಲಾಯಿಸಿ ತಾವು ಭೇಟಿಯಾಗಿದ್ದ ಸ್ಥಳಗಳಿಗೆ ಸಾಮಾನ್ಯ ಉಡುಪಿನಲ್ಲಿ ಮರಳಿ ತೆರಳಿ, ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ‌.

ಸಾಮಾನ್ಯ ಜನರ ಕಷ್ಟ, ಬಡತನ ಮತ್ತು ಅನುಕಂಪದ ನಿಜವಾದ ಅರ್ಥವನ್ನು ಅರ್ಥ ಮಾಡಿಕೊಳ್ಳಲು ಈ ಅನುಭವ ತನಗೆ ನೆರವಾಯಿತು ಎಂದು ಬರೆದು ಶಾಸಕರು ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.