ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಬೆಂಗಳೂರಿಗರ ಆತ್ಮೀಯತೆಗೆ ಕೊನೆಯಿಲ್ಲ": ಆಟೋ ಚಾಲಕನ ಸೌಹಾರ್ದಯುತ ಮಾತಿಗೆ ಫಿದಾ ಆದ ಅಮೆರಿಕನ್ ಪ್ರವಾಸಿ!

Viral Video: ಅಮೆರಿಕನ್ ಯೂಟ್ಯೂಬರ್ ಹಾಗೂ ರಿಕ್ಷಾ ಚಾಲಕರ ನಡುವೆ ನಡೆದ ಮಾತುಕತೆ ಯೊಂದು ಇಂಟರ್ನೆಟ್ ನಲ್ಲಿ ಜನರ ಮನ ಗೆದ್ದಿದೆ. "ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿ ಕೊಳ್ಳುವುದು ಸುಲಭ" ಎಂಬ ಶೀರ್ಷಿಕೆಯೊಂದಿಗೆ ಅಮೆರಿಕನ್ ಪ್ರವಾಸಿ ಈ ವಿಡಿಯೊ ಶೇರ್ ಮಾಡಿದ್ದಾರೆ.

ಆಟೋಚಾಲಕ ಹಾಗೂ ವಿದೇಶಿ ಪ್ರವಾಸಿಯ ಸ್ನೇಹಪರ ಸಂಭಾಷಣೆಗೆ ನೆಟ್ಟಿಗರು ಫಿದಾ!

ಆಟೋ ಚಾಲಕನ ಸೌಹಾರ್ದಯುತ ಮಾತಿಗೆ ಫಿದಾ ಆದ ಅಮೆರಿಕನ್ ಪ್ರವಾಸಿ -

Profile
Pushpa Kumari Jul 15, 2026 1:02 PM

ಬೆಂಗಳೂರು,ಜು.15: ಭಾರತದ ಶ್ರೀಮಂತ ಸಂಸ್ಕ್ರತಿ ಹಾಗೂ ಇಲ್ಲಿನ ಅತಿಥಿ ಸತ್ಕಾರಕ್ಕೆ ಅನೇಕ ವಿದೇಶಿಗರು ಪಿಧಾ ಆಗಿದ್ದಾರೆ. ಇಲ್ಲಿನ ಜನರು ಆರೈಕೆ ಮಾಡುವ ರೀತಿ ನಿಜಕ್ಕೂ ಅದ್ಬುತ ಎಂದು ಬಣ್ಣಿಸಿದ ವಿದೇಶಿಗರು ಇದ್ದಾರೆ. ಈ ನಡುವೆ ಅಮೆರಿಕನ್ ಯೂಟ್ಯೂಬರ್ ಹಾಗೂ ರಿಕ್ಷಾ ಚಾಲಕರ ನಡುವೆ ನಡೆದ ಮಾತುಕತೆಯೊಂದು ಇಂಟರ್ನೆಟ್ ನಲ್ಲಿ ಜನರ ಮನ ಗೆದ್ದಿದೆ. "ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ" ಎಂಬ ಶೀರ್ಷಿಕೆಯೊಂದಿಗೆ ಅಮೆರಿಕನ್ ಪ್ರವಾಸಿ ಈ ವಿಡಿಯೊ ಶೇರ್ (Viral News) ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇದ್ದ ವಿದೇಶಿ ಪ್ರವಾಸಿಯೂ ರಿಕ್ಷಾ ಚಾಲಕನ ಹೊತೆ ಚಿಕ್‌ಪೇಟ್‌ಗೆ ಸವಾರಿ ಮಾಡಲು ಕೇಳಿ ಕೊಳ್ಳುತ್ತಾನೆ.‌ ಆದರೆ ಚಾಲಕ ಶಾಲಾ ಮಕ್ಕಳ ಪಿಕಪ್ ಇದೆ ಎಂದು ನಯವಾಗಿ ತಿಳಿಸಿ ಈ ವಿನಂತಿಯನ್ನು ನಿರಾಕರಿಸುತ್ತಾನೆ. ಆದರೆ ಅದು ಅವರ ಈ ಸಂಭಾಷಣೆಗೆ ಮಾತ್ರ ಅಂತ್ಯವಾಗಿರಲಿಲ್ಲ. ಅವರಿಬ್ಬರ ಸ್ನೇಹಪರ ಮಾತುಕತೆ ಈಗ ಜನಪ್ರಿಯತೆ ಗಳಿಸಿದೆ.

ವಿಡಿಯೋ ನೋಡಿ:

ಕ್ರಿಸ್ ಅವರು ಆಟೋ ಚಾಲಕನನ್ನು ಚಿಕ್ಕಪೇಟೆಗೆ ಕರೆದೊಯ್ಯಬಹುದೇ ಎಂದು ಕೇಳುವು ದರೊಂದಿಗೆ ವೀಡಿಯೊ ಪ್ರಾರಂಭವಾಗಿದೆ. ಆದರೆ ಚಾಲಕ ನಿರಾಕರಿಸಿದ್ದು ಇಂದು ಶನಿವಾರ ಆಗಿರುವುದರಿಂದ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಬೇಕಾಗುತ್ತದೆ ಎಂದು ವಿವರಿಸಿದ್ದಾನೆ. ಆದರೆ ಚಾಲಕನಿಗೆ ಸರಿಯಾಗಿ ಇಂಗ್ಲಿಷ್ ಬಾರದೇ ಇರುವ ಕಾರಣ "ಇಂದು ಶನಿವಾರ ಶಾಲಾ ಪಿಕಪ್" ಎಂದು ಹೇಳುತ್ತಾನೆ‌

Viral Video: ಹುಚ್ಚು ಪ್ರೀತಿ! ರೈಲು ನಿಲ್ದಾಣದಲ್ಲಿ ​ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ

​ಅಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ, ಕ್ರಿಸ್ ಅವರಿಗೆ ಮುಂದೆ ಆಟೋಗಳು ಸಿಗುವ ಬಗ್ಗೆ ದಾರಿ ತೋರಿಸುವುದಲ್ಲದೆ, ಓಲಾ ಅಥವಾ ಉಬರ್ ಬುಕ್ ಮಾಡಿಕೊಳ್ಳುವಂತೆ ಆತ್ಮೀಯವಾಗಿ ಸಲಹೆ ನೀಡುತ್ತಾರೆ. ಇದಕ್ಕಾಗಿ ಕ್ರಿಸ್ ಅವರು ಆಟೋ ಚಾಲಕನಿಗೆ ಧನ್ಯವಾದ ಹೇಳಿದ್ದು ಹಾಗೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ಚಾಲಕನಿಗೆ ತೋರಿಸಿ ಫಾಲೋ ಮಾಡಲು ತಿಳಿಸುತ್ತಾರೆ.

​ಈ ವೇಳೆ ಆಟೋ ಚಾಲಕ, "ನೀವು ಕನ್ನಡದಲ್ಲಿ ವಿಡಿಯೋ ಮಾಡ್ತೀರಾ?" ಎಂದು ಕೇಳಿದ್ದಕ್ಕೆ ಕ್ರಿಸ್ ಕನ್ನಡವನ್ನು ಕೆನಡಾ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಂತರ ಅವನು ಚಾಲಕನಿಗೆ ಕೆನಡಾದಲ್ಲಿ ಯಾವುದೇ ವೀಡಿಯೊಗಳನ್ನು ಮಾಡಿಲ್ಲ ಎಂದು ಹೇಳಿದ್ದಾನೆ. ಈ ತಮಾಷೆಯ ದೃಶ್ಯ ಕೂಡ ಎಲ್ಲರ ಮನ ಗೆದ್ದಿದೆ.

ಕ್ಲಿಪ್ ಅನ್ನು ಹಂಚಿಕೊಂಡ ವ್ಲಾಗರ್"ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಸುಲಭ, ಭಾರತೀಯ ಜನರು ಯಾವಾಗಲೂ ಅತ್ಯಂತ ಅದ್ಭುತವಾದ ನಡವಳಿಕೆ ಹೊಂದಿರುತ್ತಾರೆ" ಎಂದಿದ್ದಾರೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಕನ್ನಡಿಗರ ಹೃದಯವಂತಿಕೆಯನ್ನು ಜನರು ಕೊಂಡಾಡುತ್ತಿದ್ದಾರೆ. ಬಳಕೆದಾರರೊಬ್ಬರು ಭಾಷೆಯ ಗೊಂದಲ ವಿದ್ದರೂ ಪರಸ್ಪರ ಅರ್ಥಮಾಡಿಕೊಂಡು ಗೌರವದಿಂದ ಮಾತನಾಡಿದ ರೀತಿ ಅದ್ಭುತ ಎಂದು ಪ್ರತಿಕ್ರಿಯೆ ನೀಡಿದ್ದಾರೆ.