ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರಾವಳಿ ಬಾಲಕನ ಕ್ರಿಕೆಟ್ ಕಾಮೆಂಟರಿಗೆ ಇಡೀ ದೇಶವೇ ಮೆಚ್ಚುಗೆ: ಜಸ್ವಿತ್ ಕನ್ನಡ್ಕ ಈಗ ಇಂಟರ್ನೆಟ್ ಸೆನ್ಸೇಷನ್!

Viral Video: ಸ್ಥಳೀಯ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಅದ್ಬುತ ಕಾಮೆಂಟರಿ ನೀಡುವ ಮೂಲಕ ಈತ ಗಮನ ಸೆಳೆದಿದ್ದಾನೆ. ಆತನ ನಿರರ್ಗಳ ಇಂಗ್ಲಿಷ್, ಆತ್ಮವಿಶ್ವಾಸದ ವಾಯ್ಸ್, ಮತ್ತು ಹಿರಿಯ ವೃತ್ತಿಪರ ಕಾಮೆಂಟೇಟರ್‌ಗಳ ಶೈಲಿಯಲ್ಲಿ ಈತ ನೀಡಿದ ವಿವರಣೆ ಲಕ್ಷಾಂತರ ಜನ ರನ್ನು ಆಕರ್ಷಿಸಿದೆ. ಇಷ್ಟೊಂದು ಸಣ್ಣ ಬಾಲಕ ವರ್ಣರಂಜಿತ ಕಾಮೆಂಟರಿ ನೀಡಲು ಸಾಧ್ಯವೇ ಎಂದು ಹುಬ್ಬೇರಿಸುವಂತೆ ಮಾಡಿದ್ದಾನೆ.

ಬಾಲಕನ‌ ಕ್ರಿಕೆಟ್ ಕಾಮೆಂಟರಿಗೆ ನೆಟ್ಟಿಗರು ಫಿದಾ

ಮಂಗಳೂರು,ಜ. 30: ನಮ್ಮಲ್ಲಿ ಹೆಚ್ಚಿನವರು ಕ್ರಿಕೆಟ್ ಪ್ರಿಯರಿದ್ದಾರೆ. ಅದರಲ್ಲೂ ಭಾರತದ ಕ್ರಿಕೆಟ್ ಮ್ಯಾಚ್ ಅಂದಾಗ ಯುವಕರು ಊಟ- ನಿದ್ದೆ ಬಿಟ್ಟು ವೀಕ್ಷಣೆ ಮಾಡುವವರು ಇದ್ದಾರೆ. ಗಲ್ಲಿ- ಗಲ್ಲಿ ಯಲ್ಲೂ ಕ್ರಿಕೆಟ್ ಆಡುವ ಪ್ರತಿಭೆಗಳಿದ್ದು ಕರ್ನಾಟಕದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರ ವಿಡಿಯೊವೊಂದು ಭಾರೀ ವೈರಲ್ (Viral Video) ಆಗಿದೆ. ಇದು ಉತ್ತಮ ಬ್ಯಾಟಿಂಗ್ ಶಾಟ್ ಅಥವಾ ಪಂದ್ಯ ಗೆಲ್ಲುವ ಉದ್ದೇಶಕ್ಕಾಗಿ ಅಲ್ಲ ಬದಲಾಗಿ ಒಬ್ಬ ಬಾಲಕನ ಗಮನಾರ್ಹ ಕಾಮೆಂಟರಿ ಗಾಗಿ ಗಮನ ಸೆಳೆದಿದೆ. ಕರ್ನಾಟಕದ ಕರಾವಳಿ ಭಾಗದ ಪುಟ್ಟ ಬಾಲಕನೊಬ್ಬ ತನ್ನ ಕ್ರಿಕೆಟ್ ಕಾಮೆಂಟರಿ ಮೂಲಕ ಇಡೀ ಜನರ ಪ್ರೀತಿ ಗಳಿಸಿದ್ದಾನೆ.

ಸ್ಥಳೀಯ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಅದ್ಬುತ ಕಾಮೆಂಟರಿ ನೀಡುವ ಮೂಲಕ ಈತ ಗಮನ ಸೆಳೆದಿದ್ದಾನೆ. ಆತನ ನಿರರ್ಗಳ ಇಂಗ್ಲಿಷ್, ಆತ್ಮವಿಶ್ವಾಸದ ವಾಯ್ಸ್, ಮತ್ತು ಹಿರಿಯ ವೃತ್ತಿಪರ ಕಾಮೆಂಟೇಟರ್‌ಗಳ ಶೈಲಿಯಲ್ಲಿ ಈತ ನೀಡಿದ ವಿವರಣೆ ಲಕ್ಷಾಂತರ ಜನರನ್ನು ಆಕರ್ಷಿಸಿದೆ. ಇಷ್ಟೊಂದು ಸಣ್ಣ ಬಾಲಕ ವರ್ಣರಂಜಿತ ಕಾಮೆಂಟರಿ ನೀಡಲು ಸಾಧ್ಯವೇ ಎಂದು ಹುಬ್ಬೇರಿಸುವಂತೆ ಮಾಡಿದ್ದಾನೆ.

ವಿಡಿಯೋ ನೋಡಿ:



ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಕ್ರಿಕೆಟ್ ಮೈದಾನದಾದ್ಯಂತ ಹರಡಿರುವ ಆಟಗಾರರು ಮತ್ತು ಬೌಂಡರಿಯ ಬಳಿ ಕುಳಿತಿರುವ ಪ್ರೇಕ್ಷಕರನ್ನು ತೋರಿಸುತ್ತದೆ. ಅವರ ನಡುವೆ ಕುಳಿತಿರುವ ಒಬ್ಬ ಬಾಲಕ ಆತ್ಮವಿಶ್ವಾಸ ಮತ್ತು ಸ್ಪಷ್ಟತೆ ಯೊಂದಿಗೆ ಕಾಮೆಂಟರಿ ನೀಡುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಜಸ್ವಿತ್ ಕನ್ನಡ್ಕ ಎಂಬ ಈ ಬಾಲಕ ಅತ್ಯಂತ ಆತ್ಮವಿಶ್ವಾಸದಿಂದ ಇಂಗ್ಲಿಷ್‌ನಲ್ಲಿ ಕಾಮೆಂಟರಿ ನೀಡುತ್ತಿದ್ದಾನೆ.

Viral Video: ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು; ವೈರಲ್‌ ಆಯ್ತು ಮದುವೆಯ ವಿಡಿಯೋ

''ಪ್ರತಿಭೆ ವಯಸ್ಸಿಗೆ ಕಾಯುವುದಿಲ್ಲ, ಅದಕ್ಕೆ ಮೈಕ್ ಮಾತ್ರ ಬೇಕು" ಎಂದು ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಮಾಡಲಾಗಿದೆ. ಈ ಕ್ಲಿಪ್ 7 ಮಿಲಿಯನ್‌ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು ಜೊತೆಗೆ ಸಾವಿರಾರು ಲೈಕ್‌ಗಳು ಬಂದಿಗೆ. ಬಾಲಕನ ಕೌಶಲ್ಯಗಳನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.‌‌

ವೀಕ್ಷಕರಿಗೆ ನಿಜವಾಗಿಯೂ ಎದ್ದು ತೋರುವ‌ ಅಂಶವೆಂದರೆ ಜಾಸ್ವಿತ್ ಅವರ ಶಿಸ್ತಿನ ವಿಧಾನ. ಬೌಲರ್ ರನ್-ಅಪ್ ತೆಗೆದು ಕೊಳ್ಳುವಾಗ ಮೌನವಾಗಿದ್ದು, ಚೆಂಡು ಎಸೆದ ತಕ್ಷಣ ವಿಶ್ಲೇಷಣೆ ಆರಂಭಿಸುವ ಜಸ್ವಿತ್ ಶೈಲಿ ಅಂತರಾಷ್ಟ್ರೀಯ ಮಟ್ಟದ ಕಾಮೆಂಟೇಟರ್‌ ಗಳನ್ನು ನೆನಪಿಸುತ್ತಾನೆ. ಅತಿ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನ ಸೂಕ್ಷ್ಮ ಅಂಶವನ್ನು ನಿಖರವಾಗಿ ವಿವರಿಸಿದ್ದಾನೆ. ಈತನ ಧ್ವನಿ ಮತ್ತು ವಿಶ್ಲೇಷಣಾ ಶೈಲಿಗೆ ನೆಟ್ಟಿಗರು ಇವನನ್ನು "ಲಿಟಲ್ ಹರ್ಷ ಭೋಗ್ಲೆ" ಮತ್ತು "ಜೂನಿಯರ್ ರವಿ ಶಾಸ್ತ್ರಿ" ಎಂದು ಹೊಗಳಿದ್ದಾರೆ.