ನವದೆಹಲಿ, ಮಾ. 20: ಇತ್ತೀಚೆಗೆ ನಾನಾ ಟ್ರೆಂಡ್‌ನ ಉಡುಪುಗಳು, ವಿವಿಧ ವಸ್ತುಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಲು ಹೆಚ್ಚಿನವರು ಆಸಕ್ತಿ ತೋರುತ್ತಾರೆ. ಅವು ಎಷ್ಟೇ ದುಬಾರಿಯಾದರೂ ಖರೀದಿಸುತ್ತಾರೆ. ಇದೀಗ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಬಲೆನ್ಸಿಯಾಗ ವಿನ್ಯಾಸ ಮಾಡಿರುವ ಬ್ಯಾಗ್ ಭಾರಿ ಸದ್ದು ಮಾಡುತ್ತಿದೆ (Viral Video). ಇದರ ಮೊತ್ತ ದುಬಾರಿಯಾಗಿದ್ದರೂ ನೋಡಲು ಮಾತ್ರ ಕಸದ ಚೀಲದಂತಿದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಈ ಬ್ಯಾಗ್ ಸುಕ್ಕುಗಟ್ಟಿದ ಪ್ಲಾಸ್ಟಿಕ್ ಕಸದ ಚೀಲವನ್ನು ಹೋಲುತ್ತದೆ. ಆದರೆ ಇದರ ಬೆಲೆ ಕೇಳಿ ನೆಟ್ಟಿಗರೇ ಶಾಕ್ ಆಗಿದ್ದಾರೆ. ಬಾಲೆನ್ಸಿಯಾಗಾದ ಈ ಬ್ಯಾಗ್ 1.5 ಲಕ್ಷ ರುಪಾಯಿ ಮೌಲ್ಯದ್ದು ಎಂದು ತಿಳಿದು ಬಂದಿದೆ. ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ವ್ಯಂಗ್ಯವಾಡಿದ್ದಾರೆ.
ವಿಡಿಯೊ ನೋಡಿ:
ವೈರಲ್ ಆಗಿರುವ ವಿಡಿಯೊದಲ್ಲಿ ಟರ್ಕಿಯಲ್ಲಿರುವ ಐಷಾರಾಮಿ ಅಂಗಡಿಯ ಮಾಲಕರು ಕಸದ ಚೀಲದಂತೆ ಕಾಣುವ ಬ್ಯಾಗ್ ಇಟ್ಟುಕೊಂಡಿರುವುದನ್ನು ತೋರಿಸಲಾಗಿದೆ. ಟರ್ಕಿಯ ಐಷಾರಾಮಿ ಮಳಿಗೆಯೊಂದರಲ್ಲಿ ಮಾಲಕ ಹಳದಿ ಬಣ್ಣದ ಈ ಬ್ಯಾಗ್ ಅನ್ನು ಅತ್ಯಂತ ಜಾಗರೂಕತೆಯಿಂದ ಬಿಳಿ ಕೈಗವಸು ಧರಿಸಿ ಪ್ರದರ್ಶಿಸಿದ್ದಾರೆ. ಆದರೆ ಈ ಬ್ಯಾಗ್ ಕಸದ ಚೀಲದಂತೆ ಕಂಡು ಬಂದಿದ್ದು ಇದಕ್ಕೆ ಇಷ್ಟೊಂದು ಹಣವೇ ಎಂದು ಹಲವರು ತಮಾಷೆ ಮಾಡಿದ್ದಾರೆ.
282 ಅಡಿ ಎತ್ತರದ ಟವರ್ ಮೇಲೆ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ
ಮೊದಲ ನೋಟದಲ್ಲಿ, ಚೀಲವು ಸುಕ್ಕುಗಟ್ಟಿದ ಪ್ಲಾಸ್ಟಿಕ್ ಕಸದ ಚೀಲವನ್ನು ಹೋಲುತ್ತದೆ. ವಿಡಿಯೊ ನೋಡಿ ಭಾರತೀಯರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. "ನಮ್ಮಲ್ಲಿ ಇದು ಉಚಿತವಾಗಿ ದೊರೆಯುತ್ತದೆ " ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ʼʼಇಂತಹ ಚೀಲ ನಮ್ಮ ಮನೆಯಲ್ಲಿ ಬೇಕಾದಷ್ಟು ಇದೆʼʼ ಎಂದಿದ್ದಾರೆ. ತನಿಖೆಯ ಪ್ರಕಾರ ಈ ವಿಡಿಯೊವನ್ನು ತಮಾಷೆಗಾಗಿ ಚಿತ್ರೀಕರಿಸಲಾಗಿದೆ. 'ಗಲಾಟಾ ಲಕ್ಸುರಿ' ಎಂಬ ಇನ್‌ಸ್ಟಾಗ್ರಾಮ್ ಪೇಜ್ ಸಾಮಾನ್ಯ ಪ್ಲಾಸ್ಟಿಕ್ ಚೀಲವನ್ನು ಬಳಸಿ ಬಲೆನ್ಸಿಯಾ ಬ್ಯಾಗ್ ಎಂದು ಕರೆದು ವಿಡಿಯೊ ಮಾಡಿದೆ.