ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೀಲ್ಸ್ ನೋಡುತ್ತಾ 100 ಕಿ.ಮೀ ವೇಗದಲ್ಲಿ ಬಸ್ ಚಾಲನೆ: ಪ್ರಯಾಣಿಕರ ಜೀವ ಜೊತೆ ಚೆಲ್ಲಾಟ ಆಡಿದ ಚಾಲಕನ ವಿರುದ್ಧ ಆಕ್ರೋಶ!

Viral Video: ಸಾರಿಗೆ ಇಲಾಖೆಯೂ ಟ್ರಾಫಿಕ್ ನಿಯಮಗಳನ್ನು ಕಠಿಣಗೊಳಿಸಿದ್ದರೂ ಕೆಲವರು ನಿಯಮ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವವರು ಇದ್ದಾರೆ. ಇದೀಗ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ದೆಹಲಿ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್‌ ಚಾಲಕನು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾನೆ. ಮೊಬೈಲ್ ನೋಡುತ್ತಾ ಅತೀ ವೇಗದಲ್ಲಿ ಬಸ್ ಚಲಾಯಿಸಿದ್ದು ಇದರ ವಿಡಿಯೊ ನೋಡಿ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬಂದಿದೆ.

ರೀಲ್ಸ್ ನೋಡುತ್ತ 100 ಕಿ.ಮೀ ವೇಗದಲ್ಲಿ ಬಸ್ ಚಲಾಯಿಸಿದ ಚಾಲಕ

ರೀಲ್ಸ್ ನೋಡುತ್ತ 100 ಕಿ.ಮೀ ವೇಗದಲ್ಲಿ ಬಸ್ ಚಲಾಯಿಸಿದ ಚಾಲಕ -

Profile
Pushpa Kumari Jul 8, 2026 2:49 PM

ನವದೆಹಲಿ,ಜು.8: ಇತ್ತೀಚೆಗೆ ರಸ್ತೆ ಸುರಕ್ಷತೆ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರೂ ಸಾಲದು, ದಿನ ನಿತ್ಯ ರಸ್ತೆ ಅಪಘಾತ, ಅವಘಡಗಳ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ. ಸಾರಿಗೆ ಇಲಾಖೆಯೂ ಟ್ರಾಫಿಕ್ ನಿಯಮಗಳನ್ನು ಕಠಿಣಗೊಳಿಸಿದ್ದರೂ ಕೆಲವರು ನಿಯಮ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವವರು ಇದ್ದಾರೆ. ಇದೀಗ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ದೆಹಲಿ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್‌ ಚಾಲಕನು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾನೆ. ಮೊಬೈಲ್ ನೋಡುತ್ತಾ ಅತೀ ವೇಗದಲ್ಲಿ ಬಸ್ ಚಲಾಯಿಸಿದ್ದು ಇದರ ವಿಡಿಯೊ (Viral News) ನೋಡಿ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬಂದಿದೆ.

ಬಸ್ ಚಾಲಕನು ತನ್ನ ಮೊಣಕೈಯನ್ನು ಸ್ಟೀರಿಂಗ್ ಚಕ್ರದ ಮೇಲೆ ಇಟ್ಟುಕೊಂಡು ತನ್ನ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ್ದಾನೆ. ಬಸ್ ಸುಮಾರು 100 ಕಿ.ಲೋ ಮೀಟರ್ ವೇಗದಲ್ಲಿ ಚಲಿಸಿದ್ದರೂ ಬಸ್ ನತ್ತ ಗಮನ ವಹಿಸುವ ಬದಲಿಗೆ ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಾನೆ. ಈ ವೈರಲ್ ಆಗಿರುವ ವೀಡಿಯೊ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ವಿಡಿಯೋ ನೋಡಿ:



ಚಾಲಕನ ಚಾಲನ ಪರವಾನಗಿಯನ್ನುರದ್ದು ಗೊಳಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ವೈರಲ್ ಆದ ವೀಡಿಯೊದಲ್ಲಿ, ಚಾಲಕನು ಸ್ಟೀರಿಂಗ್ ವೀಲ್ ಮೇಲೆ ಮೊಣಕೈಗಳನ್ನು ಇಟ್ಟುಕೊಂಡು ಬಸ್ ಅನ್ನು ಚಲಾಯಿಸುತ್ತಿರುವುದನ್ನು ತೋರಿಸಲಾಗಿದೆ. ಆತ ಮೊಬೈಲ್ ವೀಕ್ಷಿಸುತ್ತಾ, ಮುಂದಿನ ರಸ್ತೆಯನ್ನು ಪರಿಶೀಲಿಸಲು ಮೇಲಕ್ಕೆ ನೋಡುತ್ತಿದ್ದಾನೆ.. ಮತ್ತೊಮ್ಮೆ ಮೊಬೈಲ್ ಕಡೆಗೆ ಕಣ್ಣು ಹಾಯಿಸುತ್ತಾನೆ. ಅವನ ಪಕ್ಕದಲ್ಲಿ, ಇದ್ದ ಕಂಡಕ್ಟರ್ ಕೂಡ ಗಮನವಹಿಸುವ ಬದಲು ತನ್ನ ಫೋನ್ ನಲ್ಲಿ ಮುಳುಗಿ ಹೋಗಿದ್ದಾನೆ.

Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

​ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಈ ಇಡೀ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಶೇರ್ ಮಾಡಿದ್ದಾರೆ. ಘಟನೆಯ ನಿಖರವಾದ ದಿನಾಂಕ ಮತ್ತು ಬಸ್ ಚಾಲಕ‌ನ ಗುರುತನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ವೀಡಿಯೊ ವೈರಲ್ ಆಗಿದ್ದು, ಅಜಾಗರೂಕತೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.ಈ ಬಗ್ಗೆ ನೆಟ್ಟಿಗರು ಕೂಡ ಕಿಡಿಕಾರಿದ್ದಾರೆ.

ಬಳಕೆದಾರರೊಬ್ಬರು ಇದು ಸಂಪೂರ್ಣವಾಗಿ ಹುಚ್ಚುತನ. ಚಾಲಕನ ಚಾಲನಾ ಪರವಾನಗಿಯನ್ನು ತಕ್ಷಣವೇ ರದ್ದು ಗೊಳಿಸಬೇಕು. ಮತ್ತು ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಚಾಲಕ ನೂರಾರು ಜನರ ಜೀವದೊಂದಿಗೆ ಆಟವಾಡುತ್ತಿದ್ದರೂ ಯಾರು ಧ್ವನಿ ಎತ್ತಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.