ಬರ್ತ್ ಡೇ ಕೇಕ್ ಕತ್ತರಿಸಲು ಬರೋಬ್ಬರಿ 9,000 ರುಪಾಯಿ ಚಾರ್ಜ್: ದುಬಾರಿ ಮೊತ್ತದ ವಿಧಿಸಿದ ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರು ಗರಂ
Viral News: ಲಾಸ್ ಏಂಜಲೀಸ್‌ನ ಗ್ರಾಹಕರೊಬ್ಬರಿಂದ ಐಷಾರಾಮಿ ರೆಸ್ಟೋರೆಂಟ್ 9,000 ರುಪಾಯಿ ʼಕೇಕ್ ಕತ್ತರಿಸಿದʼ ಶುಲ್ಕವನ್ನು ಪಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆವರ್ಲಿ ಹಿಲ್ಸ್‌ನ ಪ್ರತಿಷ್ಠಿತ ‘ಪೋಜಾ’ ರೆಸ್ಟೋರೆಂಟ್‌ಗೆ ಗ್ರಾಹಕರೊಬ್ಬರು ಹುಟ್ಟುಹಬ್ಬದ ಆಚರಣೆಗಾಗಿ ಹೊರಗಿನಿಂದ ಕೇಕ್ ತರಿಸಿ ಕಟ್ ಮಾಡಿದ್ದಾರೆ. ಇದಕ್ಕಾಗಿ 9,000 ರುಪಾಯಿ ಚಾರ್ಜ್ ಮಾಡಲಾಗಿದೆ.
ಬರ್ತ್ ಡೇ ಕೇಕ್ ಕತ್ತರಿಸಲು 9,000 ರುಪಾಯಿ ಚಾರ್ಜ್ ಮಾಡಿ ರೆಸ್ಟೋರೆಂಟ್ -
ದೆಹಲಿ, ಮೇ 20: ಇತ್ತೀಚೆಗೆ ಹೋಟೆಲ್, ರೆಸ್ಟೋರೆಂಟ್ ಆಹಾರಗಳು ದುಬಾರಿಯಾಗಿ ಬಿಟ್ಟಿವೆ. ಅದರಲ್ಲೂ ಸಣ್ಣ ಸಣ್ಣ ವ್ಯವಹಾರಕ್ಕೂ ಸರ್ವಿಸ್ ಜಾರ್ಜ್ ಹಾಕುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಐಷಾರಾಮಿ ರೆಸ್ಟೋರೆಂಟ್ ಒಂದರಲ್ಲಿ ಕೇವಲ ಕೇಕ್ ಕತ್ತರಿಸಿದಕ್ಕಾಗಿ 9,000 ರುಪಾಯಿ ಚಾರ್ಜ್ ವಿಧಿಸಿರುವ ಬಗ್ಗೆ ಗ್ರಾಹಕರೊಬ್ಬರು ಕಿಡಿ ಕಾರಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಲಾಸ್ ಏಂಜಲೀಸ್‌ನ ಗ್ರಾಹಕರೊಬ್ಬರು ಐಷಾರಾಮಿ ರೆಸ್ಟೋರೆಂಟ್ ʼಕೇಕ್ ಕತ್ತರಿಸಿದʼ ಶುಲ್ಕವಾಗಿ 9,000 ರುಪಾಯಿ ಪಡೆದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಚರ್ಚೆಗೆ ಕಾರಣವಾಗಿದೆ. ಬೆವರ್ಲಿ ಹಿಲ್ಸ್‌ನ ಪ್ರತಿಷ್ಠಿತ ‘ಪೋಜಾ’ ರೆಸ್ಟೋರೆಂಟ್‌ಗೆ ತೆರಳಿದ ಗ್ರಾಹಕರೊಬ್ಬರು ಹುಟ್ಟುಹಬ್ಬದ ಆಚರಣೆಗಾಗಿ ಹೊರಗಿನಿಂದ ಕೇಕ್ ತಂದಿದ್ದರು.
ಆದರೆ ಬಿಲ್ ಬಂದಾಗ ಅದರಲ್ಲಿ ಕೇಕ್ ಕತ್ತರಿದ ಕಾರಣಕ್ಕಾಗಿ 110 ಡಾಲರ್ ಸೇರಿಸಿರುವುದನ್ನು ನೋಡಿ ಗ್ರಾಹಕ ಶಾಕ್‌ಗೆ ಒಳಗಾಗಿದ್ದಾರೆ. ರೆಸ್ಟೋರೆಂಟ್ ಬರೋಬ್ಬರಿ 9,000 ರುಪಾಯಿ ‘ಕೇಕ್ ಕಟಿಂಗ್ ಫೀ’ ವಿಧಿಸಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೆಸ್ಟೋರೆಂಟ್‌ನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಣಬೀರ್ ಕಪೂರ್-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ
ಸೋಷಿಯಲ್ ಮೀಡಿಯಾದಲ್ಲಿ ಪೋಜಾ ರೆಸ್ಟೋರೆಂಟ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಬ್ಬಂದಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸಿದೆ. ʼʼಕೇಕ್ ಕಟ್ಟಿಂಗ್ ಶುಲ್ಕದ ಬಗ್ಗೆ ಮೊದಲೇ ಮಾಹಿತಿ ನೀಡದಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೀವೆ. ನೀವು ಕೇಕ್ ತಂದ ತಕ್ಷಣವೇ ಈ ಶುಲ್ಕದ ಬಗ್ಗೆ ನಿಮಗೆ ತಿಳಿಸಬೇಕಾಗಿತ್ತು. ಆದ ತಪ್ಪಿಗೆ ವಿಷಾದಿಸುತ್ತೇವೆ"ಎಂದು ರೆಸ್ಟೋರೆಂಟ್ ತಿಳಿಸಿದೆ. ಹೋಟೆಲ್ ಉದ್ಯಮದ ತಜ್ಞರ ಪ್ರಕಾರ, ರೆಸ್ಟೋರೆಂಟ್‌ಗಳಲ್ಲಿ ಹೊರಗಿನ ವೈನ್ ತಂದಾಗ ಅಥವಾ ಕೇಕ್ ಕಟ್ಟಿಂಗ್ ಫೀಸ್ ವಿಧಿಸುವುದು ಸಾಮಾನ್ಯ ನಿಯಮ. ಆದರೆ ಪೋಜಾ ರೆಸ್ಟೋರೆಂಟ್ ವಿಧಿಸಿದ ಭಾರಿ ಮೊತ್ತಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.