ಮದುವೆ ಎನ್ನುವುದು ಒಂದು ಸಂಭ್ರಮದ ದಿನ. ಈ ದಿನ ಎಲ್ಲರೂ ತುಂಬಾ ಸಂತೋಷದಿಂದ ಇರುತ್ತಾರೆ. ಹೀಗಿರುವಾಗ ಮದುವೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕೆಲವೊಬ್ಬರು ತಮಾಷೆಗಳನ್ನು ಮಾಡುತ್ತಾರೆ. ಆದರೆ ಇದು ಕೆಲವೊಮ್ಮೆ ಬೇರೆಯವರನ್ನು ನೋಯಿಸಬಹುದು. ಇತ್ತೀಚೆಗೆ ಫೋಟೊಗ್ರಾಫರ್ ಎಮಾದ್ ಜೋ ಸೆರೆಹಿಡಿದ ವಿವಾಹ ಸಂಭ್ರಮದಲ್ಲಿ, ವರನು ವಧುವಿಗೆ ತಮಾಷೆ ಮಾಡಲು ಹೋಗಿ ಆಕೆಗೆ ಶಾಕ್ ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಜೂನ್ 14 ರಂದು ಎಮಾದ್ ಮದುವೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ವರ ಮತ್ತು ವಧು ಈಜುಕೊಳದ ಬಳಿ ಫೋಟೋಗೆ ಆತ್ಮೀಯವಾಗಿ ಪೋಸ್ ನೀಡುತ್ತಿರುವುದು ಸೆರೆಯಾಗಿದೆ. ಅದರಲ್ಲಿ ದಂಪತಿ ಕಿಸ್ ಮಾಡುತ್ತಿದ್ದಂತೆ, ವರ ಸಡನ್ನಾಗಿ ತನ್ನ ವಧುವನ್ನು ಈಜುಕೊಳಕ್ಕೆ ತಳ್ಳಿದ್ದಾನೆ. ವರನು ಮಾಡಿದ ತಮಾಷೆಯ ಕ್ಷಣವನ್ನು ಕಂಡು ಅಲ್ಲಿದ್ದವರು ಚಪ್ಪಾಳೆ ತಟ್ಟುತ್ತಾ ಹರ್ಷೋದ್ಗಾರ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ. ವಧುವಿಗೆ ವರ ತೋರಿದ ಅಗೌರವ ಎಂದು ಅನೇಕರು ಕರೆದಿದ್ದಾರೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ವರನ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬರು, "ಇದು ಬೇರೆಯಾಗಲು ಪ್ರಮುಖ ಕಾರಣವಾಗಬಹುದು" ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, "ಅವಳು ಮುಳುಗಿ ಹೋಗಿದ್ದಾಳೆ. ಮದುವೆಯ ಉಡುಪಿನಲ್ಲಿ ನೀರಿನಲ್ಲಿ ಬಿದ್ದರೆ ಎಲ್ಲಾ ಬಟ್ಟೆಗಳು ಹಾಳಾಗುತ್ತದೆ. ಇದು ತಮಾಷೆಯಲ್ಲ" ಎಂದು ಹೇಳಿದ್ದಾರೆ."ಇದರ ಬಗ್ಗೆ ಮೊದಲೇ ಅವಳ ಬಳಿ ಮಾತನಾಡದಿದ್ದರೆ ಮತ್ತು ಈ ತಮಾಷೆಯಲ್ಲಿ ಭಾಗವಹಿಸಲು ಅವಳು ಒಪ್ಪಿಗೆ ನೀಡದಿದ್ದರೆ, ಈ ನಡವಳಿಕೆಯು ಅಗೌರವ ಮತ್ತು ಆತಂಕಕಾರಿಯಾಗಿದೆ" ಎಂದು ಮನಶ್ಶಾಸ್ತ್ರಜ್ಞ ಕಾರ್ಲಿ ಡೋಬರ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಆಸ್ಪತ್ರೆಯಿಂದ ನೇರ ಪರಲೋಕಕ್ಕೆ! ಐಸಿಯುನಲ್ಲೇ ನಡೀತು ಶೂಟೌಟ್-ರೌಡಿ ಶೀಟರ್‌ನ ಬರ್ಬರ ಹತ್ಯೆ!
ಸೋಶಿಯಲ್ ಮೀಡಿಯಾ ನೆಟ್ಟಿಗರ ಪ್ರಕಾರ, ತನ್ನ ವಧುವನ್ನು ನೀರಿಗೆ ತಳ್ಳಿದ ನಂತರ ವರನ ಪ್ರತಿಕ್ರಿಯೆಯು ತುಂಬಾ ಕೆಟ್ಟದಾಗಿದೆ ಮತ್ತು ಇದು ಅವನ ಸಂಗಾತಿಯ ಮೇಲಿನ ಗೌರವದ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ವಧು ಬೀಳುವಾಗ ಹೆದರಿದಂತೆ ಕಾಣುತ್ತಿದ್ದಳು, ನಂತರ ತನ್ನ ನಿರಾಶೆಯನ್ನು ನಗುವಿನೊಂದಿಗೆ ಮರೆಮಾಡಲು ಪ್ರಯತ್ನಿಸುತ್ತಿದ್ದಳು ಎಂದು ಹಲವಾರು ನೆಟ್ಟಿಗರು ಹೇಳಿದ್ದಾರೆ. ವಧು ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದರೆ ಅದರಲ್ಲಿ ಆಶ್ಚರ್ಯಪಡುವಂತಿರಲಿಲ್ಲ ಎಂದು ಹಲವರು ಹೇಳಿದ್ದಾರೆ.