'ಧುರಂಧರ್' ಚಿತ್ರದ 'FA9LA' ಹಾಡಿಗೆ ಪಾಕಿಸ್ತಾನಿ ಸೈನಿಕರ ಭರ್ಜರಿ ಡ್ಯಾನ್ಸ್: ವಿಡಿಯೊ ವೈರಲ್
Viral Video: ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ನಿಷೇಧಿಸಲಾಗಿದೆ. ಹಾಗಿದ್ದರೂ ಇದು ನೆಟ್‌ಫ್ಲಿಕ್ಸ್‌ನಲ್ಲಿ ದೇಶದಲ್ಲಿ ನಂ. 1 ಸ್ಥಾನಕ್ಕೆ ಏರಿದೆ. ಈ ನಡುವೆ ಪಾಕಿಸ್ತಾನದಲ್ಲಿ ಈ ಹಾಡಿನ ಕ್ರೇಜ್ ಹೆಚ್ಚಾಗಿದ್ದು ಪಾಕಿಸ್ತಾನಿ ಸೇನಾ ಸಿಬ್ಬಂದಿಗಳು ಧುರಂಧರ್ ಚಿತ್ರದ ಹಿಟ್ ಸಾಂಗ್ "FA9LA" ಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
ಧುರಂಧರ್ ಚಿತ್ರ -
ಪಾಕಿಸ್ತಾನ,ಫೆ.14: ರಣವೀರ್ ಸಿಂಗ್ 'ಧುರಂಧರ್' ಚಿತ್ರ ಭರ್ಜರಿ ಯಶಸ್ಸು ಗಳಿಸಿದ್ದು ಸಿನಿಮಾದ ಕ್ರೇಜ್ ಇನ್ನು ಕಮ್ಮಿಯಾಗಿಲ್ಲ. ಅದರಲ್ಲೂ ಈ ಚಿತ್ರದ ಹಾಡುಗಳಂತೂ ಸಿಕ್ಕಪಟ್ಟೆ ಟ್ರೆಂಡಿಂಗ್ ನಲ್ಲಿದೆ. ಸೋಷಿಯಲ್ ಮೀಡಿಯಾ, ಮದುವೆ ಸಮಾರಂಭ ಗಳಲ್ಲೂ ಈ ಸಿನಿಮಾದ ಹಾಡುಗಳದ್ದೆ ಹವಾ..ಇದೀಗ ಪಾಕಿಸ್ತಾನದಲ್ಲೂ ಧುರಂಧರ್ ಚಿತ್ರಕ್ಕೆ ಭಾರೀ ಬೇಡಿಕೆ ಬಂದಿದೆ. ಇಲ್ಲಿ ಹಲವು ವರ್ಷ ಗಳಿಂದಲೂ ಭಾರತೀಯ ಸಿನಿಮಾಗಳ ಮೇಲೆ ನಿಷೇಧ ಹೇರಿದ್ದರೂ ಪಾಕಿಸ್ತಾನದಲ್ಲಿ ಸಿನಿಮಾದ ಪೈರಸಿ ಕಾಪಿಗಳನ್ನು ಖರೀದಿಸಿ ನೋಡುತ್ತಿದ್ದಾರೆ. ಈ ನಡುವೆ ಧುರಂಧರ್ ಚಿತ್ರದ 'FA9LA' ಹಾಡಿಗೆ ಪಾಕಿಸ್ತಾನಿ ಸೈನಿಕರು ನೃತ್ಯ ಮಾಡಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ.
ವಿಡಿಯೋ ನೋಡಿ:
Pakistan Army soldiers dancing on Dhurandar songs
— Frontalforce 🇮🇳 (@FrontalForce) February 7, 2026
Paijaan 🤣🤣pic.twitter.com/BJ7ufEMZHh
ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ನಿಷೇಧಿಸಲಾಗಿದೆ. ಹಾಗಿದ್ದರೂ ಇದು ನೆಟ್‌ಫ್ಲಿಕ್ಸ್‌ನಲ್ಲಿ ದೇಶದಲ್ಲಿ ನಂ. 1 ಸ್ಥಾನಕ್ಕೆ ಏರಿದೆ. ಈ ನಡುವೆ ಪಾಕಿಸ್ತಾನದಲ್ಲಿ ಈ ಹಾಡಿನ ಕ್ರೇಜ್ ಹೆಚ್ಚಾಗಿದ್ದು ಪಾಕಿಸ್ತಾನಿ ಸೇನಾ ಸಿಬ್ಬಂದಿಗಳು ಧುರಂಧರ್ ಚಿತ್ರದ ಹಿಟ್ ಸಾಂಗ್ "FA9LA" ಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗಷ್ಟೆ ಪಾಕಿಸ್ತಾನಿ ಮದುವೆಯೊಂದರಲ್ಲಿ ಮೂವರು ಯುವಕರು ಈ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು ವೈರಲ್ ಆಗಿತ್ತು.
Viral Video: ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು: ಹೃದಯ ಹಿಂಡುವ ದೃಶ್ಯ ಇಲ್ಲಿದೆ
ಸದ್ಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ 'ಫ್ರಂಟಲ್ ಫೋರ್ಸ್' ಎಂಬ ಖಾತೆಯೊಂದು ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ಈ ಡ್ಯಾನ್ಸ್ ಗೆ ಹೆಚ್ಚಿನ ಲೈಕ್, ಕಾಮೆಂಟ್ ಬಂದಿದ್ದು ವೀಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗಿಲ್ಲ. ಸಮವಸ್ತ್ರದಲ್ಲಿರುವ ವ್ಯಕ್ತಿಗಳು ನಿಜವಾದ ಸೈನಿಕರೇ ಅಥವಾ ಕಲಾವಿದರೆ ಎಂಬುದು ಸ್ಪಷ್ಟವಾಗಿಲ್ಲ. ಭಾರತೀಯರಿಗಿಂತ ಪಾಕಿಸ್ತಾನದವರೇ ಈ ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ ಎಂದು ಹಲವಾರು ಬಳಕೆದಾರರು ತಮಾಷೆ ಮಾಡುತ್ತಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಆರ್. ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಿತ್ತು.