ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರ್‌ನ ತುಂಬೆಲ್ಲಾ ಪ್ರಿಯತಮೆಯ ಮುತ್ತು: ವೈರಲ್ ಟ್ರೆಂಡ್ ಪಾಲಿಸಲು ಹೋಗಿ ಪೇಚೆಗೆ ಸಿಲುಕಿದ ಯುವಕ!

Viral News: ಕಾರಿನ ಮೇಲೆ ಪ್ರಿಯತಮೆ 3,400 ಮುತ್ತುಕೊಟ್ಟಿದ್ದು ರಸ್ತೆಯಲ್ಲಿ ಸಾಗುವಾಗ ಈ ಕಾರು ಸಾರ್ವಜನಿಕರ ಗಮನ ಸೆಳೆಯುತ್ತಿತ್ತು. ಆದರೆ ಈ ವಿಚಿತ್ರ ಮೇಕ್‌ಓವರ್ ತೊಂದರೆಗೆ ಸಿಲುಕಿದ್ದು ಪೊಲೀಸರು ದಂಡ ವಿಧಿಸಿದ್ದಾರೆ‌. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 5,500 ರೂ ವಸೂಲಿ ಮಾಡಿದ್ದಾರೆ..

ಕಾರ್ ಗೆ ಮುತ್ತಿಟ್ಟ ಪ್ರಿಯತಮೆ: ಯುವಕನಿಗೆ ಬಿತ್ತು 5,500 ರೂ.  ದಂಡ!

ಕಾರ್ ಗೆ ಮುತ್ತಿಟ್ಟ ಪ್ರಿಯತಮೆ- ಯುವಕನಿಗೆ ಬಿತ್ತು 5,500 ದಂಡ -

Profile
Pushpa Kumari Aug 25, 2026 4:55 PM

ಗ್ವಾಲಿಯರ್ ,ಆ. 25: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ (Viral News) ಉದ್ದೇಶದಿಂದ ನಾನಾ ರೀತಿಯ ಸಾಹಸ ಮಾಡುವವರು ಅನೇಕರು ಇದ್ದಾರೆ. ಇದೀಗ ಟ್ರೆಂಡ್ ವೊಂದನ್ನು ಅನುಕರಣೆ ಮಾಡಲು ಹೋಗಿ ಯುವಕನೊಬ್ಬ ಪೇಚೆಗೆ ಸಿಲುಕಿದ್ದಾನೆ. ಕಾರಿನ ಮೇಲೆ ಪ್ರಿಯತಮೆ 3,400 ಮುತ್ತುಕೊಟ್ಟಿದ್ದು ರಸ್ತೆಯಲ್ಲಿ ಸಾಗುವಾಗ ಈ ಕಾರು ಸಾರ್ವಜನಿಕರ ಗಮನ ಸೆಳೆಯುತ್ತಿತ್ತು. ಆದರೆ ಈ ವಿಚಿತ್ರ ಮೇಕ್‌ಓವರ್ ತೊಂದರೆಗೆ ಸಿಲುಕಿದ್ದು ಪೊಲೀಸರು ದಂಡ ವಿಧಿಸಿದ್ದಾರೆ‌.ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 5,500 ರೂ ವಸೂಲಿ ಮಾಡಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು ರಸ್ತೆಯಲ್ಲಿ ಸಂಚಾರ ಮಾಡುವಾಗ ಸುಮಾರು 3,400 ಲಿಪ್‌ಸ್ಟಿಕ್ ಕಿಸ್ ಗುರುತುಗಳನ್ನು ಹೊಂದಿರುವ ಕಾರು ಜನರ ಗಮನ ಸೆಳೆಯಿತು. ಆದರೆ ಈ ವಿಚಿತ್ರ ಕಾರ್ ನ ಲುಕ್‌ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಸಂಚಾರ ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ವಾಹನವನ್ನು ಪತ್ತೆ ಹಚ್ಚಿದ್ದಾರೆ.

ವಿಡಿಯೋ ನೋಡಿ:



ಆದಿತ್ಯ ಸಿಕರ್ವಾರ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಅಂದಾಜು 3,400 ಲಿಪ್‌ಸ್ಟಿಕ್ ಮುತ್ತಿನ ಗುರುತುಗಳು ಕಾಣಿಸಿಕೊಂಡಿದೆ. ಸಿಕರ್ವಾರ್‌ನ ಗೆಳತಿ ವಿದೇಶಿ ಸೋಷಿಯಲ್ ಮೀಡಿಯಾದಿಂದ ಪ್ರೇರಿತಳಾಗಿ ಕಾರಿನ ಮೇಲೆ ಅದನ್ನು ಮರುಸೃಷ್ಟಿಸಲು ನಿರ್ಧರಿಸಿದಳು. ಸುಮಾರು 4 ಗಂಟೆಗಳವರೆಗೆ ಶ್ರಮಿಸಿ ಕಾರಿನಾದ್ಯಂತ ಒಂದೊಂದಾಗಿ ಲಿಪ್ ಸ್ಟಿಕ್ ಹಚ್ಚಿ ಮುತ್ತುಗಳನ್ನು ಇಟ್ಟಿದ್ದಳು. ರಸ್ತೆಗೆ ಬಂದ ತಕ್ಷಣ ಈ ಕಾರು ಜನರ ಕುತೂಹಲಕ್ಕೆ ಕಾರಣವಾಗಿತ್ತು.

ಕಾರು ಹೋದಲ್ಲೆಲ್ಲಾ ಎದ್ದು ಕಾಣುತ್ತಿತ್ತು, ರಸ್ತೆಯಲ್ಲಿರುವ ಜನರ ಗಮನವನ್ನು ಸೆಳೆಯಿತು. ಈ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ, ಪೊಲೀಸರು ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಕಾರನ್ನು ಪತ್ತೆಹಚ್ಚಿ ವಶಪಡಿಸಿಕೊಂಡರು. ನಂತರ ಮಾಲೀಕರನ್ನು ಕರೆಸಿ ಸಂಚಾರ ಪೊಲೀಸರು ನಿಯಮಗಳ ಉಲ್ಲಂಘನೆಗಾಗಿ 5,500 ರೂ. ಚಲನ್ ನೀಡಿದರು.

ತಮ್ಮ ತಪ್ಪನ್ನು ಒಪ್ಪಿಕೊಂಡ ಯುವಕ, ದಂಡ ಪಾವತಿಸಿ ಕಾರನ್ನು ತೊಳೆದು ಲಿಪ್‌ಸ್ಟಿಕ್ ಗುರುತುಗಳನ್ನು ತೆಗೆದುಹಾಕಿದ್ದಾರೆ.ಈ ದೃಶ್ಯದ ಬಗ್ಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಮುತ್ತು ಪಡೆಯಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.