ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರನ್‌ವೇಯಲ್ಲಿ ವಿಮಾನ ಚಲಿಸುತ್ತಿದ್ದರೂ ನಿಂತೇ ಇದ್ದ ಪ್ರಯಾಣಿಕರು: ವಿಡಿಯೊ ವೈರಲ್ ಆದ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸ್ಪಷ್ಟನೆ

Air India Express: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX 1236 ವಿಮಾನ ರನ್‌ವೇಯಲ್ಲಿ ಚಲಿಸುತ್ತಿದ್ದ ವೇಳೆ ಪ್ರಯಾಣಿಕರು ಸೀಟ್‌ಗಳಿಂದ ಎದ್ದು ಲಗೇಜ್‌ಗಾಗಿ ಸಾಲಿನಲ್ಲಿ ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತಾ ಹೊಣೆಗಾರಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರ ಸುರಕ್ಷತೆಯೇ ತಮ್ಮ ಪ್ರಮುಖ ಆದ್ಯತೆ ಎಂದು ಸ್ಪಷ್ಟನೆ ನೀಡಿದೆ.

ರನ್‌ವೇಯಲ್ಲೇ ವಿಮಾನ ಚಲಿಸುತ್ತಿದ್ದಾಗ ಎದ್ದು ನಿಂತ ಪ್ರಯಾಣಿಕರು

ರನ್‌ವೇಯಲ್ಲೇ ವಿಮಾನ ಚಲಿಸುತ್ತಿದ್ದಾಗ ಪ್ರಯಾಣಿಕರು ಎದ್ದು ನಿಂತ ವಿಡಿಯೊ ವೈರಲ್ -

Profile
Sushmitha Jain Sep 22, 2026 5:58 PM

ನವದೆಹಲಿ, ಸೆ. 22: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (Air India Express) ರನ್‌ವೇ ಮೇಲೆ ಚಲಿಸುತ್ತಿರುವಾಗಲೇ ಪ್ರಯಾಣಿಕರು ಸೀಟುಗಳಿಂದ ಎದ್ದು ಸಾಲಾಗಿ ನಿಂತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಮಾನಯಾನ ಸಂಸ್ಥೆಯ ಸುರಕ್ಷತಾ ಲೋಪ ಹಾಗೂ ಪ್ರಯಾಣಿಕರ ಅಸಡ್ಡೆ ಕುರಿತು ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX 1236 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮಿತಾವ ದಾಸ್ ಎಂಬವವರು ಈ ಘಟನೆಯ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಮಾನವು ಲ್ಯಾಂಡಿಂಗ್ ಅಥವಾ ಟೇಕ್-ಆಫ್ ವೇಳೆ ರನ್‌ವೇಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಸೀಟ್‌ಬೆಲ್ಟ್ ಧರಿಸಿ ಕುಳಿತುಕೊಳ್ಳುವ ಬದಲು ಲಗೇಜ್ ತೆಗೆಯಲು ಆತುರಪಟ್ಟು ನಿಂತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ವಿಮಾನದಲ್ಲಿ ಯಾವುದೇ ಮುನ್ಸೂಚನೆ ಅಥವಾ ಅನೌನ್ಸ್‌ಮೆಂಟ್ ಇರಲಿಲ್ಲ. ವಿಮಾನ ದಿಢೀರನೆ ವೇಗವಾಗಿ ಚಲಿಸಲು ಆರಂಭಿಸಿತು ಎಂದು ಅಮಿತಾವ ದಾಸ್ ಆರೋಪಿಸಿದ್ದಾರೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಚಲಿಸುತ್ತಿದ್ದಾಗಲೇ ಎದ್ದುನಿಂತ ಪ್ರಯಾಣಿಕರು:



ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು "ಸಿಬ್ಬಂದಿ ಎಷ್ಟು ಬಾರಿ ಮೈಕ್‌ನಲ್ಲಿ ಕೂಗಿ ಹೇಳಿದರೂ ಪ್ರಯಾಣಿಕರು ಕೇಳುವುದಿಲ್ಲ, ಇದು ಜನರ ಸಾಮಾನ್ಯ ಜ್ಞಾನದ ಕೊರತೆ" ಎಂದು ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು "ರನ್‌ವೇಯಲ್ಲಿ ಚಲಿಸುವಾಗ ಪ್ರಯಾಣಿಕರು ನಿಲ್ಲಲು ಅವಕಾಶ ನೀಡಿದ್ದೇ ಸಿಬ್ಬಂದಿಯ ಬೇಜವಾಬ್ದಾರಿತನ, ಡಿಸಿಸಿಎ ಅಂತಹ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು" ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

100 ಕಿ.ಮೀ ಚೇಸಿಂಗ್‌: 15 ಗಂಟೆ, 170 ಸಿಸಿಟಿವಿಗಳ ಪರಿಶೀಲನೆ, ಕಿಡ್ನಾಪ್‌ ಆಗಿದ್ದ ಮಗು ಕೊನೆಗೂ ಸಿಕ್ಕಿದ್ದೇಗೆ?

ಈ ವಿವಾದಕ್ಕೆ ಅಧಿಕೃತವಾಗಿ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಪ್ರಯಾಣಿಕರ ಸುರಕ್ಷತೆಯೇ ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದೆ. "IX 1236 ವಿಮಾನದಲ್ಲಿ ಉಂಟಾದ ಈ ಪರಿಸ್ಥಿತಿಗೆ ನಾವು ವಿಷಾದಿಸುತ್ತೇವೆ. ನಮ್ಮ ಎಲ್ಲ ಕಾರ್ಯಾಚರಣೆಗಳನ್ನು ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿಯೇ ನಡೆಸಲಾಗುತ್ತದೆ. ಪ್ರಯಾಣದ ಉದ್ದಕ್ಕೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಮತ್ತು ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ" ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇತ್ತೀಚೆಗಷ್ಟೇ, ಕ್ರೀಡಾ ಸೈಕಲ್‌ಗೆ ವಿಶೇಷ ನಿರ್ವಹಣಾ ಶುಲ್ಕ ಪಡೆದಿದ್ದರೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದನ್ನು ಸಾಮಾನ್ಯ ಲಗೇಜ್ ಕನ್ವೇಯರ್ ಬೆಲ್ಟ್‌ನಲ್ಲಿ ಎಸೆದಿದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ₹ 27,000 ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಸೇವಾ ನ್ಯೂನತೆಯ ಬೆನ್ನಲ್ಲೇ ಇದೀಗ ರನ್‌ವೇ ವಿಡಿಯೋ ಮುನ್ನೆಲೆಗೆ ಬಂದಿರುವುದು ವಿಮಾನಯಾನ ಸಂಸ್ಥೆಗೆ ಮತ್ತಷ್ಟು ಮುಜುಗರ ತಂದಿಟ್ಟಿದೆ.