ಪುಣೆ,ಅ.12: ಆಂಬ್ಯುಲೆನ್ಸ್ ಚಲಿಸುತ್ತಿದ್ದಾಗ ರೋಗಿಯೊಬ್ಬರು ಸ್ಟ್ರೆಚರ್ ಜೊತೆಗೆ ರಸ್ತೆಗೆ ಬಿದ್ದ ಆಘಾತಕಾರಿ ಘಟನೆಯೊಂದು ನಡೆದಿದೆ. ಪುಣೆಯ ಪಿಂಪ್ರಿ-ಚಿಂಚ್ವಾಡ್‌ನಲ್ಲಿರುವ ಯಶವಂತ್ ರಾವ್ ಚೌಹಾಣ್ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವು ವೈದ್ಯಕೀಯ ಸಾಗಣೆಯ ಸಮಯದಲ್ಲಿ ರೋಗಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಘಟನೆಯೂ ಆಸ್ಪತ್ರೆ ಆವರಣದಲ್ಲಿ ನಡೆದಿದ್ದು, ನಾಗರಿಕರು ಮೊಬೈಲ್ ಫೋನ್ ಕ್ಯಾಮೆರಾಗಳಲ್ಲಿ (Viral News) ಸೆರೆಹಿಡಿದಿದ್ದಾರೆ.
ಆಂಬ್ಯುಲೆನ್ಸ್ ಚಲಿಸುತ್ತಿದ್ದಾಗ ರೋಗಿ ಸ್ಟ್ರೆಚರ್ ಜೊತೆಗೆ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲೇ ಇದ್ದ ನಾಗರಿಕರು ಚಾಲಕನನ್ನು ಎದುರಿಸಿ ಅವರ ವಿರುದ್ಧ ಮತ್ತು ಆಸ್ಪತ್ರೆ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೊದಲ್ಲಿ ರೋಗಿಯು ರಸ್ತೆಗೆ ಬಿದ್ದ ನಂತರ ನಾಗರಿಕರು ಆಂಬ್ಯುಲೆನ್ಸ್ ಚಾಲಕನನ್ನು ಪ್ರಶ್ನಿಸುತ್ತಿರುವ ವೀಡಿಯೊಗಳು ತೋರಿಸುತ್ತವೆ. ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನ ಬಾಗಿಲು ಸರಿಯಾಗಿ ಲಾಕ್ ಮಾಡದೆ ರೋಗಿಯನ್ನು ಕರೆ ದೊಯ್ದಿದ್ದಾರೆ. ಈ ಘಟನೆಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ಸ್ಥಳದಲ್ಲಿದ್ದ ಸಾರ್ವಜನಿಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರೋಗಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆಯೇ ಅಥವಾ ಆಸ್ಪತ್ರೆ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.