ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರಧಾನಿಗೆ ಸ್ವಾಗತ ಕೋರಲು ಅಳವಡಿಸಿದ್ದ ಹೂಕುಂಡಗಳನ್ನೇ ಕದ್ದೊಯ್ದ ಕಿಡಿಗೇಡಿಗಳು! ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಉತ್ತರ ಪ್ರದೇಶದ ಲಖನೌ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಅಲಂಕಾರಕ್ಕಾಗಿ ರಸ್ತೆ ಬದಿ ಅಳವಡಿಸಿದ್ದ ಹೂ ಕುಂಡಗಳನ್ನು ಸಾರ್ವಜನಿಕರು ಕದ್ದೊಯ್ದ ಘಟನೆ ನಡೆದಿದ್ದು, ಈ ವಿಡಿಯೊ ವೈರಲ್‌ ಆಗಿದೆ. ನೂರಾರು ಅಲಂಕಾರಿಕ ಹೂವಿನ ಕುಂಡಗಳನ್ನು ರಸ್ತೆ ಬದಿ ಅಳವಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಕೆಲವು ಕಿಡಿಗೇಡಿಗಳು ಈ ಹೂವಿನ ಕುಂಡವನ್ನು ಮನೆಗೆ ಕದ್ದೊಯ್ದಿದ್ದಾರೆ.

ಸಾಂದರ್ಭಿಕ ಚಿತ್ರ.

ಲಖನೌ, ಡಿ. 26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನದ ಸವಿನೆನಪಿಗಾಗಿ ಡಿಸೆಂಬರ್‌ 25ರಂದು ದೇಶಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವರ ಜೀವನ ಮತ್ತು ಆದರ್ಶಗಳನ್ನು ಬಿಂಬಿಸುವ ಸಲುವಾಗಿ ಅನೇಕ ಸಮಾಜಮುಖಿ ಚಟುವಟಿಕೆ ನಡೆಲಾಗಿದೆ. ವಾಜಪೇಯಿ ಅವರ ಸ್ಮರಣಾರ್ಥ ಉತ್ತರ ಪ್ರದೇಶದ ಲಖನೌಬಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಪ್ರಧಾನ ಮಂತ್ರಿ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲು ರಸ್ತೆಯ ಅಲಲ್ಲಿ ಹೂವಿನ ಕುಂಡಗಳನ್ನಿಟ್ಟು ಸಂಪೂರ್ಣ ಹಸಿರಿನ ಸಿಂಗಾರ ಮಾಡಲಾಗಿತ್ತು. ನೂರಾರು ಅಲಂಕಾರಿಕ ಹೂವಿನ ಕುಂಡಗಳು, ಸಸ್ಯಗಳು ಕಣ್ಮನ ಸೆಳೆಯುವಂತಿದ್ದವು. ಇದೀಗ ಈ ಕಾರ್ಯಕ್ರಮ ಮುಗಿದ ಬಳಿಕ ಕೆಲವು ಕಿಡಿಗೇಡಿಗಳು ಈ ಹೂವಿನ ಕುಂಡವನ್ನು ಕದ್ದು ಮನೆಗೆ ಒಯ್ಯುತ್ತಿರುವ ಘಟನೆ ಬೆಳಕಿಗೆ ಬಂದಿದೆ‌. ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

ಲಖನೌ ನಗರಕ್ಕೆ ಗಣ್ಯರು ಆಗಮಿಸುವ ಕಾರಣ ಅನೇಕ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದಿಟ್ಟುಕೊಳ್ಳಲಾಗಿದೆ. ಲಖನೌ ರಸ್ತೆ ಸಮೀಪ ಹೂವಿನ ಕುಂಡಗಳನ್ನು ಇಟ್ಟು ಸಿಂಗರಿಸಲಾಗಿದ್ದು, ನಗರವು ಸುಂದರವಾಗಿ ಕಂಡಿದೆ. ಇದೀಗ ನಗರ ಸೌಂದರ್ಯಕ್ಕಾಗಿ ಅಳವಡಿಸಲಾದ ಹೂವಿನ ಕುಂಡಗಳನ್ನು ಸಾರ್ವಜನಿಕರು ಬಹಿರಂಗವಾಗಿ ಕದಿಯುತ್ತಿರುವ ದೃಶ್ಯ ಕಂಡು ಬಂದಿದ್ದು, ರಾಜ್ಯವೇ ನಾಚಿಕೆಯಿಂದ ತಲೆ ತಗ್ಗಿಸಿದೆ.

ವಿಡಿಯೊ ನೋಡಿ:



ರಾಷ್ಟ್ರೀಯ ಪ್ರೇರಣಾ ಸ್ಥಳದ ಉದ್ಘಾಟನೆಗಾಗಿ ಆರಮಿಸುವ ಮೋದಿ ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಲಖನೌ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುರ ಸಭೆಯು ವಸಂತ್ ಕುಂಜ್ ರಸ್ತೆ ಮತ್ತು ಹಸಿರು ಕಾರಿಡಾರ್ ಸೇರಿದಂತೆ ನಗರದ ಅನೇಕ ಪ್ರಮುಖ ಪ್ರದೇಶಗಳಲ್ಲಿ ಹೂವಿನ ಗಿಡಗಳನ್ನು ಅಳವಡಿಸಿತ್ತು. ಇದಕ್ಕಾಗಿ ಸರ್ಕಾರಿ ಹಣ ಬಳಸಲಾಗಿದೆ. ಆದರೆ ಪ್ರಧಾನಿ ನಿರ್ಗಮಿಸಿದ ಕೂಡಲೇ ಭದ್ರತಾ ವ್ಯವಸ್ಥೆಗಳನ್ನು ಸಡಿಲಿಸಿದ ನಂತರ, ಹಲವರು ಹೂವಿನ ಕುಂಡಗಳನ್ನು ವೈಯಕ್ತಿಕ ಆಸ್ತಿಯೆಂಬಂತೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ವೈರಲ್ ಆಗಿದೆ.

ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ

ಯಾವುದೇ ಭಯ, ಹಿಂಜರಿಕೆಯಿಲ್ಲದೆ ಜನರು ಬೈಕ್‌ ಮತ್ತು ಕಾರಿನಲ್ಲಿ ಬಂದು ಹೂಕುಂಡ ಒಯ್ಯುತ್ತಿರುವ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದು. ಈ ಘಟನೆಯು ನಾಗರಿಕ ಪ್ರಜ್ಞೆಯ ಬಗ್ಗೆ ಹಾಗೂ ಅಧಿಕಾರಿಗಳ ಮೇಲ್ವಿಚಾರಣೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಳ್ಳೆ ಕೆಲಸ ಮಾಡಿ ಮಾಡಿ‌‌‌...ನಾನು ನಿಮ್ಮ ವಿಡಿಯೊ ರೆಕಾರ್ಡ್‌ ಮಾಡುತ್ತಿದ್ದೇನೆ. ನಿಮ್ಮ ಗಾಡಿ ನಂಬರ್ ನೋಟ್ ಆಗಿದೆ. ತೆಗೆದುಕೊಂಡು ಹೋಗಿ ನಂತರ ಫೈನ್ ಕಟ್ಟಿ ಎಂದು ವಿಡಿಯೊ ಮಾಡುತ್ತಿದ್ದ ವ್ಯಕ್ತಿಯು ಹೇಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಈ ವಿಡಿಯೊ ಕ್ಲಿಪ್‌ ವೈರಲ್ ಆಗಿದ್ದು, ಸರ್ಕಾರ ಅಲಂಕಾರಕ್ಕಾಗಿ ಬಳಸಿದ ಹೂಕುಂಡವನ್ನು ಜನರು ಮನೆಗೆ ಒಯ್ದಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೆಲಸ ಮಾಡಲು ನಾಚಿಕೆ ಆಗೊಲ್ಲವಾ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.