ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್‌ ಅಧಿಕಾರಿ; ವಿಡಿಯೋ ನೋಡಿ

Viral Video: ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನ ವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸ ರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ..

ಬೆಕ್ಕಿನ ಮರಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

ಡೆಹ್ರಾಡೂನ್,ಜೂ.19: ಸಾಮಾನ್ಯವಾಗಿ ಪೊಲೀಸರು ಅಂದಾಗ ಕಾನೂನು ಸುವ್ಯವಸ್ಥೆ ರಕ್ಷಣೆ ಮಾಡುವಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು (Viral News) ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಪೊಲೀಸ್ ಅಧಿಕಾರಿ ತೋರಿದ ಮನುಷ್ಯತ್ವ ಮತ್ತು ಸಮಯಪ್ರಜ್ಞೆ ಎಲ್ಲರ ಮನವನ್ನು ಗೆದ್ದಿದೆ‌. ಕಾರಿನ ಕೆಳಗೆ ಅಡಗಿ ಕೊಂಡಿದ್ದ ಪುಟ್ಟ ಬೆಕ್ಕಿನ ಮರಿಯನ್ನು ಗಮನಿಸಿ ಅದನ್ನು ಸಕಾಲದಲ್ಲಿ ರಕ್ಷಣೆ ಮಾಡಿದ್ದಾರೆ. ಕೊನೆಗೆ ಅದಕ್ಕೆ ಆಹಾರ ನೀಡಿ ಆರೈಕೆ ಮಾಡಿದ್ದಾರೆ.

ವಿಡಿಯೋ ನೋಡಿ:



ಉತ್ತರಾಖಂಡ ಪೊಲೀಸ್ ಅಧಿಕಾರಿ ಮೊಹಮ್ಮದ್ ಇರ್ಷಾದ್ ಅವರು ಈ ರಕ್ಷಣೆಯನ್ನು ನಡೆಸಿದ್ದಾರೆ. ವೀಡಿಯೊದಲ್ಲಿ, ನಿಂತ ವಾಹನದ ಕೆಳಗೆ ಬೆಕ್ಕು ಇರುವುದನ್ನು ಗಮನಿಸಿ ತಕ್ಷಣವೇ ಚಾಲಕನಿಗೆ ಚಲಿಸದಂತೆ ಸೂಚಿಸಿದ್ದಾರೆ. ಕಾರು ಇನ್ನೇನು ಚಲಿಸ ಬೇಕೆನ್ನುವಷ್ಟರಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಇರ್ಷಾದ್, ಚಾಲಕನಿಗೆ ಗಾಡಿಯನ್ನು ಮುಂದಕ್ಕೆ ತೆಗೆಯದಂತೆ ಕೈಸನ್ನೆ ಮಾಡಿದ್ದಾರೆ. ಅಧಿಕಾರಿಯು ಕಾರಿನ ಅಡಿಯಲ್ಲಿ ನೋಡಿದಾಗ ಅಲ್ಲಿ ಭಯದಿಂದ ನಡುಗುತ್ತಿದ್ದ ಪುಟ್ಟ ಬೆಕ್ಕಿನ ಮರಿ ಕಂಡುಬಂದಿದೆ.

Viral Video: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್‌!

ಇರ್ಷಾದ್ ​ಬೆಕ್ಕಿನ ಮರಿಯನ್ನು ಅತ್ಯಂತ ಜಾಗರೂಕತೆಯಿಂದ ಕಾರಿನ ಅಡಿಯಿಂದ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಅಷ್ಟೆ ಅಲ್ಲದೆ ಆ ಹಸಿದ ಬೆಕ್ಕಿನ ಮರಿಗೆ ಆಹಾರ ನೀಡಿ ಆರೈಕೆ ಮಾಡಿದ್ದಾರೆ. ಈ ಹೃದಯಸ್ಪರ್ಶಿ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಬಳಕೆದಾರರೊಬ್ಬರು ನಿಷ್ಠಾವಂತ ಪೊಲೀಸ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಇಂತಹ ಅಧಿಕಾರಿಗಳು ದೇಶಕ್ಕೆ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.