ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Polyandry Tradition: ಭಾರತದ ಈ ಪ್ರದೇಶದಲ್ಲಿ ಆಚರಣೆಯಲ್ಲಿದೆ ಬಹುಪತಿತ್ವ; ಸಹೋದರರನ್ನು ವಿವಾಹವಾದ ಯುವತಿ

ಇಬ್ಬರು ಸಹೋದರರು ಓರ್ವ ಯುವತಿಯನ್ನು ವಿವಾಹವಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಬಹುಪತಿತ್ವ ಸಂಪ್ರದಾಯವು ಗಮನ ಸೆಳೆದಿದೆ. ಇದು ಸಹೋದರರು ಹೆಂಡತಿಯನ್ನು ಹಂಚಿಕೊಳ್ಳುವುದು ಒಂದು ಪ್ರಾಚೀನ ಆಚರಣೆ ಎನಿಸಿಕೊಂಡಿದೆ. ಕುಟುಂಬದ ಐಕ್ಯತೆಯನ್ನು ಕಾಪಾಡುವ ಮತ್ತು ಪೂರ್ವಜರ ಭೂಮಿಯ ವಿಭಜನೆಯನ್ನು ತಡೆಯುವ ಮತ್ತು ಯಾವುದೇ ಮಹಿಳೆ ವಿಧವೆಯಾಗಿ ಉಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಸಂಪ್ರದಾಯ ಹುಟ್ಟಿಕೊಂಡಿದೆ.

ಇಬ್ಬರು ಸಹೋದರರನ್ನು ವರಿಸಿದ ಯುವತಿ

Profile Ramesh B Jul 19, 2025 4:48 PM

ಶಿಮ್ಲಾ: ಭಾರತವು ಶ್ರೀಮಂತ ಮತ್ತು ವೈವಿಧ್ಯಮಯ ವಿವಾಹ ಆಚರಣೆಗಳಿಗೆ (Wedding Rituals) ಹೆಸರುವಾಸಿ. ಈ ಸಂಪ್ರದಾಯಗಳು ಪ್ರದೇಶ, ಧರ್ಮ ಮತ್ತು ಸಮುದಾಯಗಳಿಗೆ ಬದಲಾಗುತ್ತಾ ಹೋಗುತ್ತದೆ. ಇದೀಗ ಹಿಮಾಚಲ ಪ್ರದೇಶದಲ್ಲಿ ನಡೆದ ಬಹುಪತಿತ್ವ ಸಂಪ್ರದಾಯವು (Hatti Polyandry Tradition) ಗಮನ ಸೆಳೆದಿದೆ. ಇಬ್ಬರು ಸಹೋದರರು ಓರ್ವ ಮಹಿಳೆಯನ್ನು ವಿವಾಹವಾಗಿದ್ದಾರೆ.

ವರದಿ ಪ್ರಕಾರ, ಸಿರ್ಮೌರ್ ಜಿಲ್ಲೆಯ ಶಿಲೈ ಗ್ರಾಮದ ಪ್ರದೀಪ್ ನೇಗಿ ಮತ್ತು ಕಪಿಲ್ ನೇಗಿ ಎಂಬುವವರು ಕುನ್ಹಾಟ್ ಗ್ರಾಮದ ಮಹಿಳೆ ಸುನೀತಾ ಚೌಹಾಣ್ ಅವರನ್ನು ಹಟ್ಟಿ ಸಮುದಾಯದ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಸಂಪೂರ್ಣ ಪರಸ್ಪರ ಒಪ್ಪಿಗೆ ಮತ್ತು ಸಮುದಾಯದ ಜನರ ಭಾಗವಹಿಸುವಿಕೆಯೊಂದಿಗೆ ನಡೆದ ಈ ಕಾರ್ಯಕ್ರಮವು ಬಹುಪತಿತ್ವದ ಅಪರೂಪದ ಮುಕ್ತ ಆಚರಣೆಯಾಗಿತ್ತು. ಇದು ಸಹೋದರರು ಹೆಂಡತಿಯನ್ನು ಹಂಚಿಕೊಳ್ಳುವ ಒಂದು ಪ್ರಾಚೀನ ಆಚರಣೆಯಾಗಿದೆ.



ಬಹುಪತಿತ್ವ ಸಂಪ್ರದಾಯದ ಇತಿಹಾಸ

ಜೋಡಿದಾರನ್ ಅಥವಾ ದ್ರೌಪದಿ ಪ್ರಥ ಎಂದೂ ಕರೆಯಲ್ಪಡುವ ಬಹುಪತಿತ್ವ ಆಚರಣೆ ಹಿಮಾಚಲ ಪ್ರದೇಶದ ಹಟ್ಟಿ ಸಮುದಾಯದಲ್ಲಿ ಕಂಡು ಬರುವ ಒಂದು ಸಾಂಪ್ರದಾಯಿಕ ಪದ್ಧತಿಯಾಗಿದ್ದು, ಇದರಲ್ಲಿ ಬಹು ಸಹೋದರರು ಒಂದೇ ಹೆಂಡತಿಯನ್ನು ಹಂಚಿಕೊಳ್ಳುತ್ತಾರೆ. ಸಿರ್ಮೌರ್ ಜಿಲ್ಲೆಯ ಟ್ರಾನ್ಸ್-ಗಿರಿ ಪ್ರದೇಶದಲ್ಲಿ ಮತ್ತು ಉತ್ತರಾಖಂಡದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಪದ್ಧತಿಯು ಕುಟುಂಬದ ಐಕ್ಯತೆಯನ್ನು ಕಾಪಾಡುವ ಮತ್ತು ಪೂರ್ವಜರ ಭೂಮಿಯ ವಿಭಜನೆಯನ್ನು ತಡೆಯುವ ಮತ್ತು ಯಾವುದೇ ಮಹಿಳೆ ವಿಧವೆಯಾಗಿ ಉಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಹುಟ್ಟಿಕೊಂಡಿದೆ. ಈ ಪದ್ಧತಿ ಇನ್ನೂ ಆಚರಣೆಯಲ್ಲಿದ್ದರೂ, ಸಾಂಸ್ಕೃತಿಕ ಬದಲಾವಣೆಗಳು ಮತ್ತು ಆಧುನಿಕ ಸಂಪ್ರದಾಯಗಳ ಪ್ರಭಾವದಿಂದಾಗಿ ಇಂದು ಬಹಳ ಕಡಿಮೆಯಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Digital India: ರೀಲ್ಸ್ ಮಾಡಿ ಬಹುಮಾನ ಗೆಲ್ಲುಲು ಇದೆ ಅವಕಾಶ: ಭಾರತ ಸರ್ಕಾರದಿಂದಲೇ ಆಫರ್

ವರ ಮತ್ತು ವಧು ಏನು ಹೇಳುತ್ತಾರೆ?

ಹಿರಿಯ ಸಹೋದರ ಪ್ರದೀಪ್ ಜಲಶಕ್ತಿ ಇಲಾಖೆಯಲ್ಲಿ ಕೆಲಸ ಮಾಡುತ್ತಾನೆ. ಆದರೆ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ಅದಾಗ್ಯೂ ಸಹೋದರರು ಸುನೀತಾ ಜತೆ ಜೀವನ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ ಮತ್ತು ದೃಢನಿಶ್ಚಯ ಮಾಡಿಕೊಂಡಿದ್ದಾರೆ. ವಿವಾಹ ಆಚರಣೆಗಳಲ್ಲಿ ಸಮಾನವಾಗಿ ಭಾಗವಹಿಸಿದರು.

ವಿವಾಹದ ಬಗ್ಗೆ ಮಾತನಾಡುತ್ತಾ ಪ್ರದೀಪ್, ʼʼಇದು ಎಲ್ಲರ ಒಮ್ಮತದ ನಿರ್ಧಾರʼʼ ಎಂದು ಹೇಳಿದರು. ʼʼನಮ್ಮ ಇತಿಹಾಸದ ಬಗ್ಗೆ ನಮಗೆ ಹೆಮ್ಮೆ ಇರುವುದರಿಂದ ನಾವು ನಮ್ಮ ಪದ್ಧತಿಯನ್ನು ಬಹಿರಂಗವಾಗಿ ಅನುಸರಿಸಿದ್ದೇವೆʼʼ ಎಂದು ತಿಳಿಸಿದರು.

ʼʼಯಾವಾಗಲೂ ಪಾರದರ್ಶಕತೆಯಲ್ಲಿ ನಂಬಿಕೆ ಇಟ್ಟಿದ್ದೇವೆʼʼ ಎಂದು ಕಪಿಲ್ ಹೇಳಿದರು. ʼʼನಾನು ವಿದೇಶದಲ್ಲಿರಬಹುದು. ಆದರೆ ಈ ಮದುವೆಯು ನಮ್ಮ ಪತ್ನಿಗೆ ಒಗ್ಗಟ್ಟಿನ ಕುಟುಂಬವಾಗಿ ಬೆಂಬಲ, ಭದ್ರತೆ ಮತ್ತು ಪ್ರೀತಿಯನ್ನು ಖಾತ್ರಿಗೊಳಿಸುತ್ತದೆʼʼ ಎಂದು ವಿವರಿಸಿದರು.

ಇನ್ನು ತಮ್ಮ ಮದುವೆಯ ಬಗ್ಗೆ ಸಂತಸ ಹಂಚಿಕೊಂಡ ವಧು, ಇದು ತನ್ನ ಆಯ್ಕೆಯಾಗಿತ್ತು. ಎಂದಿಗೂ ಒತ್ತಡವಿರಲಿಲ್ಲ. ತನಗೆ ಈ ಸಂಪ್ರದಾಯದ ಬಗ್ಗೆ ತಿಳಿದಿದ್ದು, ಸ್ವಇಚ್ಛೆಯಿಂದ ಆರಿಸಿಕೊಂಡಿರುವುದಾಗಿ ಹೇಳಿದರು. ʼʼನಾವು ಒಟ್ಟಿಗೆ ಈ ಪ್ರತಿಜ್ಞೆ ಮಾಡಿದ್ದೇವೆ ಮತ್ತು ನಾವು ನಿರ್ಮಿಸಿರುವ ಬಂಧದಲ್ಲಿ ನಂಬಿಕೆ ಇದೆʼʼ ಎಂದರು.

ಮೂರು ದಿನಗಳ ಕಾಲ ನಡೆದ ವಿವಾಹದ ಆಚರಣೆಗಳಲ್ಲಿ ಸ್ಥಳೀಯರು ಮತ್ತು ಸಂಬಂಧಿಕರು ಭಾಗವಹಿಸಿದ್ದರು. ಅತಿಥಿಗಳಿಗೆ ಸಾಂಪ್ರದಾಯಿಕ ಟ್ರಾನ್ಸ್-ಗಿರಿ ಆಹಾರವನ್ನು ನೀಡಲಾಯಿತು. ಇದರಲ್ಲಿ ಈ ಪ್ರದೇಶದಲ್ಲಿ ಮದುವೆಗಳಿಗೆ ಹೆಚ್ಚಾಗಿ ತಯಾರಿಸುವ ನಿರ್ದಿಷ್ಟ ಸ್ಥಳೀಯ ಭಕ್ಷ್ಯಗಳು ಸೇರಿವೆ.