ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಂಗ್ಲಾದೇಶ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ

India Women vs Bangladesh Women Live Score: ಸದ್ಯ ಭಾರತ ತಂಡ 3 ಪಂದ್ಯಗಳಿಂದ 4 ಅಂಕ ಗಳಿಸಿದ್ದು, 2.511 ನಿವ್ವಳ ರನ್‌ ದರ ಹೊಂದಿದೆ. ಪಾಕಿಸ್ತಾನ ವಿರುದ್ಧ 64 ರನ್ ಮತ್ತು ನೆದರ್ಲೆಂಡ್ಸ್ ವಿರುದ್ಧ 95 ರನ್‌ಗಳ ಜಯ ಸಾಧಿಸಿ ಗುಂಪಿನಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ಆಸ್ಟ್ರೇಲಿಯಾ ಗುಂಪಿನಲ್ಲಿ 4 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ.

ಬಾಂಗ್ಲಾದೇಶ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ

India Vs Bangladesh Live -

Abhilash BC
Abhilash BC Jun 25, 2026 6:42 PM

ಮ್ಯಾಂಚೆಸ್ಟರ್, ಜೂ.25: ಸೆಮಿಫೈನಲ್‌ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟಾಸ್‌ ಸೋತ ಭಾರತ ಮಹಿಳಾ ತಂಡ ಬ್ಯಾಟಿಂಗ್‌ ಆಹ್ವಾನ ಪಡೆದಿದೆ. ಬಾಂಗ್ಲಾ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದರೆ, ಭಾರತ ಎರಡು ಬದಲಾವಣೆ ಮಾಡಿತು. ರಾಧಾ ಯಾದವ್‌ ಮತ್ತು ರೇಣುಕಾ ಸಿಂಗ್‌ ತಂಡಕ್ಕೆ ಮರಳಿದರು. ಇವರಿಗಾಗಿ ಅರುಂಧತಿ ರೆಡ್ಡಿ ಮತ್ತು ಪೂನಂ ರಾವತ್‌ ಜಾಗ ಬಿಡಬೇಕಾಯಿತು.

ಸ್ಮೃತಿ ಮಂಧಾನ (ಮೂರು ಪಂದ್ಯಗಳಲ್ಲಿ 159 ರನ್) ಮತ್ತು ಶಫಾಲಿ ವರ್ಮಾ (92) ಇಬ್ಬರೂ 154 ಕ್ಕಿಂತ ಹೆಚ್ಚು ರನ್ ಗಳಿಸಿದ್ದರಿಂದ ಆರಂಭಿಕ ಜೋಡಿಯ ಮೇಲೆ ತಂಡ ಹೆಚ್ಚಿನ ಭರವಸೆ ಇರಿಸಲಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್ ಮತ್ತು ಯಸ್ತಿಕಾ ಭಾಟಿಯಾ ಕಳಪೆ ಫಾರ್ಮ್‌ನಿಂದ ಹೊರಬರಬೇಕಿದೆ. ಫಿನಿಶರ್‌ಗಳಾದ ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಹೆಚ್ಚಿನ ಕೊಡುಗೆ ಕೊಡಬೇಕಾಗಿದೆ.



ಸದ್ಯ ಭಾರತ ತಂಡ 3 ಪಂದ್ಯಗಳಿಂದ 4 ಅಂಕ ಗಳಿಸಿದ್ದು, 2.511 ನಿವ್ವಳ ರನ್‌ ದರ ಹೊಂದಿದೆ. ಪಾಕಿಸ್ತಾನ ವಿರುದ್ಧ 64 ರನ್ ಮತ್ತು ನೆದರ್ಲೆಂಡ್ಸ್ ವಿರುದ್ಧ 95 ರನ್‌ಗಳ ಜಯ ಸಾಧಿಸಿ ಗುಂಪಿನಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ಆಸ್ಟ್ರೇಲಿಯಾ ಗುಂಪಿನಲ್ಲಿ 4 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ.

ಶ್ರೀಲಂಕಾ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಸಾಯಿ ಸುದರ್ಶನ್‌

ಉಭಯ ಆಡುವ ಬಳಗ

ಬಾಂಗ್ಲಾದೇಶ: ದಿಲಾರಾ ಅಕ್ಟರ್, ಜುವೈರಿಯಾ ಫೆರ್ಡೌಸ್, ಶರ್ಮಿನ್ ಅಖ್ತರ್, ನಿಗರ್ ಸುಲ್ತಾನಾ(ನಾಯಕ), ಸೋಭಾನಾ ಮೊಸ್ತರಿ, ರಿತು ಮೋನಿ, ಶೋರ್ನಾ ಅಕ್ಟರ್, ರಬೇಯಾ ಖಾನ್, ನಹಿದಾ ಅಕ್ಟರ್, ಶಂಜಿದಾ ಅಕ್ಟರ್ ಮೇಘಲಾ, ಮಾರುಫಾ ಅಕ್ಟರ್.

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ಸಿ), ರಿಚಾ ಘೋಷ್(ಪ), ದೀಪ್ತಿ ಶರ್ಮಾ, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ.