ನವದೆಹಲಿ, ಜ. 19: ಇತ್ತೀಚಿನ ದಿನದಲ್ಲಿ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮಿಷ ಮಾತ್ರದಲ್ಲಿ ಆರ್ಡರ್ ಮಾಡಿದ ವಸ್ತು ನಮಗೆ ತಲುಪುತ್ತದೆ. ಆದರೆ ಭಾರತದ ಕ್ವಿಕ್ ಕಾಮರ್ಸ್ ಕಂಪನಿಗಳ ಹತ್ತು ನಿಮಿಷದ ವೇಗದ ಡೆಲಿವರಿ ಸೇವೆಯಿಂದಾಗಿ ಕಾರ್ಮಿಕರು (ಡೆಲಿವರಿ ಬಾಯ್) ಒತ್ತಡ ಅನುಭವಿಸುತ್ತಿದ್ದಾರೆ. ಸದ್ಯ ಡೆಲಿವರಿ ಕಾರ್ಮಿಕರು ಅನುಭವಿಸುತ್ತಿರುವ ನೋವು ಮತ್ತು ಶೋಷಣೆಯ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಮಾತನಾಡಿದ್ದಾರೆ. ಸ್ವತಃ ಬ್ಲಿಂಕ್‌ಇಟ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಈ ಅನುಭವವನ್ನು ಅವರು ವಿಡಿಯೊ ಮೂಲಕ ವಿವರಿಸಿದ್ದು, ಸದ್ಯ ಇದು ವೈರಲ್ ಆಗಿದೆ (Viral Video) ಆಗಿದೆ.
ರಾಘವ್ ಚಡ್ಡಾ ಕಾರ್ಮಿಕರ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟಿರುವುದನ್ನು ವಿಡಿಯೊ ತೋರಿಸುತ್ತದೆ. ಎಎಪಿ ಸಂಸದರು ಬ್ಲಿಂಕ್‌ಇಟ್ ಡೆಲಿವರಿ ಬಾಯ್ಸ್‌ನ ಸಮವಸ್ತ್ರ ಹಳದಿ ಜಾಕೆಟ್ ಧರಿಸಿ, ದೆಹಲಿಯ ರಸ್ತೆಗಳಲ್ಲಿ ಹೋಗಿ ಕಾರ್ಮಿಕರ ನಿಜವಾದ ಪರಿಸ್ಥಿತಿಯನ್ನು ಅರಿತು ಕೊಂಡರು. ಇದರ ಟೀಸರ್ ಅನ್ನು ಈ ಹಿಂದೆಯೆ ಬಿಡುಗಡೆ ಮಾಡಿದ್ದರು. ಸದ್ಯ ಮತ್ತೊಂದು ವಿಡಿಯೊ ಹೊರ ಬಂದಿದ್ದು, ತಮ್ಮ ಅನುಭವವನ್ನು ಆ ಮೂಲಕ ಡೆವರಿ ಬಾಯ್ಸ್ ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ.
ವಿಡಿಯೊ ನೋಡಿ:
ʼʼಒಬ್ಬ ಡೆಲಿವರಿ ಬಾಯ್ 54 ಪಾರ್ಸೆಲ್ ವಿತರಿಸಲು ಒಂದು ದಿನ ರೆಸ್ಟ್ ಇಲ್ಲದೆ 18 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹೆಚ್ಚಿನ ಹಣ ಪಡೆಯಲು ಕಾರ್ಮಿಕರು ಊಟ, ನಿದ್ರೆ ಬಿಟ್ಟು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, 10 ನಿಮಿಷದಲ್ಲಿ ಆರ್ಡರ್ ತಲುಪಿಸದಿದ್ದರೆ ದಂಡ ಬೀಳಬಹುದು ಎಂಬ ಭಯದಿಂದ ಕಾರ್ಮಿಕರು ಅತಿ ವೇಗವಾಗಿ ತೆರಳುತ್ತಾರೆ. ಇದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಹೀಗೆ ಕಾರ್ಮಿಕರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆʼʼ ಎಂದಿದ್ದಾರೆ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ
ಅಪಘಾತಗಳಾದರೂ ಕಂಪನಿಗಳಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಕಾರ್ಮಿಕರು ಕಷ್ಟ ಹೇಳಿಕೊಂಡಿದ್ದಾರೆ. ಇನ್ಶೂರೆನ್ಸ್‌ಗಾಗಿ ಹಣ ಕಡಿತಗೊಳಿಸಿದರೂ ತುರ್ತು ಸಮಯದಲ್ಲಿ ಅದು ಸಿಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ರಾಘವ್ ಚಡ್ಡಾ ಅಸಂಖ್ಯಾತ ಕಂಪನಿಗಳನ್ನು ಕಟ್ಟುವ ಈ ಹುಡುಗರಿಗೆ ಕನಿಷ್ಠ ಸಾಮಾಜಿಕ ಭದ್ರತೆ ಇಲ್ಲದಿರುವುದು ದುರದೃಷ್ಟ. ಪ್ರತಿಯೊಬ್ಬ ಡೆಲಿವರಿ ಕಾರ್ಮಿಕನಿಗೂ ಗೌರವ ಸಿಗುವವರೆಗೂ ನಾನು ಶ್ರಮಿಸುತ್ತೇನೆ ಎಂದು ಚಡ್ಡಾ ವಿಡಿಯೊದಲ್ಲಿ ಹೇಳಿದ್ದಾರೆ.