ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಪಿನ್ ಪಡೆದು ಯುವತಿಯನ್ನು ರಸ್ತೆಯಲ್ಲೇ ಬಿಟ್ಟು ಹೋದ ರ‍್ಯಾಪಿಡೋ ಚಾಲಕ

Viral News: ಯುವತಿಯೊಬ್ಬಳು ರ‍್ಯಾಪಿಡೋ ಬುಕ್ ಮಾಡಿದ್ದಳು. ರೈಡರ್ ಬರುತ್ತಿದ್ದಂತೆ ಆಕೆ ಪಿನ್ ನಂಬರ್ ನೀಡಿ ಹೆಲ್ಮೆಟ್ ಧರಿಸುತ್ತಿದ್ದಳು. ಆದರೆ ಆ ಸವಾರ ಮಾತ್ರ ಯುವತಿ ಹತ್ತಿದಳೋ ಇಲ್ಲವೋ ಎಂಬುದನ್ನೂ ಗಮನಿಸದೇ ಬೈಕ್ ಚಲಾಯಿಸಿಕೊಂಡು ಹೋಗಿಯೇ ಬಿಟ್ಟಿದ್ದಾನೆ. ಈ ತಮಾಷೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಒಟಿಪಿ ಪಡೆದು ಮಹಿಳೆಯನ್ನು ಬಿಟ್ಟು ಹೋದ ರ‍್ಯಾಪಿಡೋ ಚಾಲಕ

ಬೆಂಗಳೂರು, ಸೆ. 25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯುವತಿಯೊಬ್ಬಳು ರ‍್ಯಾಪಿಡೋ ಬುಕ್ ಮಾಡಿದ್ದಳು. ರೈಡರ್ ಬರುತ್ತಿದ್ದಂತೆ ಆಕೆ ಪಿನ್ ನಂಬರ್ ನೀಡಿ ಹೆಲ್ಮೆಟ್ ಧರಿಸುತ್ತಿದ್ದಳು. ಆದರೆ ಆ ಸವಾರ ಮಾತ್ರ ಯುವತಿ ಹತ್ತಿದಳೋ ಇಲ್ಲವೋ ಎಂಬುದನ್ನೂ ಗಮನಿಸದೇ, ಬೈಕ್ ಚಲಾಯಿಸಿ ಕೊಂಡು ಹೋಗಿಯೇ ಬಿಟ್ಟಿದ್ದಾನೆ. ಈ ತಮಾಷೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಯುವತಿ ಹೆಲ್ಮೆಟ್ ಹಾಕಿಕೊಂಡು ರಸ್ತೆಯಲ್ಲೇ ನಿಂತಿದ್ದರೆ ರೈಡರ್ ಮಾತ್ರ ಆಕೆ ಕೂತಿದ್ದಾಳೋ ಇಲ್ಲವೋ ಎಂದು ಗಮನಿಸದೆ 10 ನಿಮಿಷಗಳವರೆಗೆ ಗಾಡಿ ಓಡಿಸಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ಆ ಯುವತಿ ಈ ತಮಾಷೆಯ ಘಟನೆಯ ಬಗ್ಗೆ ಬರೆದುಕೊಂಡಿದ್ದಾಳೆ. ಹೆಲ್ಮೆಟ್ ಧರಿಸಿರುವ ತಮ್ಮ ಫೋಟೊ ಮತ್ತು ರೈಡ್ ನಡೆಯುತ್ತಿರುವ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದಾಳೆ.

ವೈರಲ್‌ ಪೋಸ್ಟ್‌:



ರ‍್ಯಾಪಿಡೋ ಚಾಲಕ ತನ್ನ ಸ್ಥಳಕ್ಕೆ ಬಂದು ಪಿನ್ (PIN) ನೀಡಿದ್ದಾಗಿ ಆಕೆ ವಿವರಿಸಿದಳು. ಹೆಲ್ಮೆಟ್ ಧರಿಸುತ್ತ ನಿಂತಿದ್ದು, ಬೈಕ್ ಹತ್ತುವಷ್ಟರಲ್ಲಿಯೇ ಚಾಲಕ ಪ್ರಯಾಣವನ್ನು ಆರಂಭಿಸಿ ಹೊರಟುಹೋಗಿದ್ದಾನೆ. ʼʼನಾನು ಅವರಿಗೆ ಪಿನ್ ನೀಡಿದೆ. ಹೆಲ್ಮೆಟ್ ಧರಿಸಿದೆ. ಆದರೆ ಅಷ್ಟರಲ್ಲೇ ರೈಡರ್ ನನ್ನನ್ನು ಬಿಟ್ಟು ಪ್ರಯಾಣವನ್ನೇ ಆರಂಭಿಸಿ ಹೊರಟುಹೋದರುʼʼ ಎಂದು ಆಕೆ ಹೇಳಿದ್ದಾಳೆ.

ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ

10 ನಿಮಿಷಗಳಿಂದ ಹಿಂದೆ ಯಾರೂ ಇಲ್ಲ ಅನ್ನೋದನ್ನೂ ಗಮನಿಸದೇ ಗಾಡಿ ಓಡಿಸಿದ್ದಾನೆ‌. ಈ ಪೋಸ್ಟ್ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದು, ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼನಿಮಗಿಂತ ಆ ಬೈಕ್ ಸವಾರನಿಗೇ ಹೋಗುವ ಅವಸರ ಜಾಸ್ತಿ ಇದ್ದ ಹಾಗಿದೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಹೆಲ್ಮೆಟ್ ನಿಮ್ಮ ಪಾಲಾಯಿತುʼʼ ಎಂದು ಕಾಮೆಂಟ್ ಮಾಡಿದ್ದಾರೆ.