ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧ್ವಜ ಹಿಡಿದು ಹೆಜ್ಜೆ ಹಾಕಿದ ಶ್ವಾನಗಳು; ಗಣರಾಜ್ಯೋತ್ಸವದ ವಿಶೇಷ ಮೆರವಣಿಗೆ ಹೇಗಿತ್ತು ನೋಡಿ!

Viral Video: ಮೂಕ ಪ್ರಾಣಿಗಳ ದೇಶ ಪ್ರೀತಿಯನ್ನು ಸಾರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಶ್ವಾನಗಳ ಗುಂಪೊಂದು ಭಾಗವಹಿಸಿದ್ದು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನಗಳ ಸಹಾಯದಿಂದ ಮೆರವಣೆಗೆಯಲ್ಲಿ ಭಾಗವಹಿಸಿದ ದೃಶ್ಯ ಇಂಟ ರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಶ್ವಾನಗಳಿಂದ ಗಣರಾಜ್ಯೋತ್ಸವ ಮೆರವಣಿಗೆ

ನವದೆಹಲಿ,ಡಿ. 27: ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ ಜೋರಾಗಿತ್ತು. ವಿವಿಧ ಕಡೆ ರಾಷ್ಟ್ರಧ್ವಜ ಹಾರಿಸಿ ವಿಜ್ರಂಭಣೆಯಿಂದ ಆಚರಣೆ ಮಾಡಲಾಗಿದೆ. ಅಂತೆಯೇ ಮೂಕ ಪ್ರಾಣಿಗಳ ದೇಶ ಪ್ರೀತಿಯನ್ನು ಸಾರುವ ವಿಡಿಯೊವೊಂದು ಭಾರೀ ವೈರಲ್ (Viral Video) ಆಗುತ್ತಿದೆ. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಶ್ವಾನಗಳ ಗುಂಪೊಂದು ಭಾಗವಹಿಸಿದ್ದು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನಗಳ ಸಹಾಯದಿಂದ ಮೆರವಣೆಗೆ ಯಲ್ಲಿ ಭಾಗವಹಿಸಿದ ದೃಶ್ಯ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಸಾಕು ನಾಯಿಗಳನ್ನು ಒಳಗೊಂಡ ಹೃದಯಸ್ಪರ್ಶಿ ವೀಡಿಯೊ ಇಂಟರ್ನೆಟ್‌ನಲ್ಲಿ ಎಲ್ಲರ ಕಣ್ಣು ತೆರೆಯುವಂತೆ ಮಾಡಿದೆ. ವಿಶೇಷವಾಗಿ ರಚನೆ ಮಾಡಿದ ವಾಹನಗಳ ಸಹಾಯದಿಂದ ಶ್ವಾನಗಳು ನಡೆಸಿದ ಮೆರವಣಿಗೆ ಕಾರ್ಯಕ್ರಮ ಈಗ ಇಂಟರ್ನೆಟ್‌ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಗಣ ರಾಜ್ಯೋತ್ಸವ ಮೆರವಣಿಗೆಯಲ್ಲಿ ಶ್ವಾನಗಳು ಭಾಗವಹಿಸುತ್ತಿರುವುದನ್ನು ವಿಡಿಯೊ ತೋರಿಸುತ್ತದೆ, ಭಾರತೀಯ ರಾಷ್ಟ್ರೀಯ ಧ್ವಜವನ್ನು ಅವುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಸ್ಟಮೈಸ್ ಮಾಡಿದ ವಾಹನಗಳು ಮತ್ತು ರೋಲರ್‌ಗಳಿಗೆ ಜೋಡಿಸಲಾಗಿದೆ.ಈ ಸಾಧನಗಳ ಸಹಾಯದಿಂದ ಶ್ವಾನಗಳು ಓಡುತ್ತಾ ಪೆರೇಡ್‌ನಲ್ಲಿ ಭಾಗವಹಿಸಿವೆ.

Viral News: ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ, ಎಲ್ಲಿದೆ ಈ ಕಂಟ್ರಿ?

ವಿಡಿಯೋ ನೋಡಿ:



ಎನ್‌ಜಿಒಗಳು ರಕ್ಷಿಸಿದ ಸಾಕು ನಾಯಿಗಳು ಇವುಗಳು ಆಗಿದ್ದು ಅತ್ಯಂತ ಶಿಸ್ತಿನಿಂದ ಪೆರೇಡ್ ನಡೆಸುತ್ತಿರುವುದನ್ನು ಕಾಣಬಹುದು. ಈ ಶ್ವಾನಗಳ ಮತ್ತೊಂದು ವಿಶೇಷತೆ ಎಂದರೆ, ಇವುಗಳಲ್ಲಿ ಬಹುತೇಕ ಪ್ರಾಣಿಗಳು ಅಪಘಾತ ಅಥವಾ ಅನಾರೋಗ್ಯ ದಿಂದಾಗಿ ತನ್ನ ಕಾಲುಗಳನ್ನು ಕೂಡ ಕಳೆದುಕೊಂಡಿವೆ.ಇದಕ್ಕಾಗಿ ಪ್ರತ್ಯೇಕವಾಗಿ ತಯಾರಿಸಿದ 'ಪೆಟ್ ವ್ಹೀಲ್ ಚೇರ್' ಹಾಗೂ ರೋಲರ್‌ ಗಳನ್ನು ಕೂಡ ಅಳವಡಿಸಲಾಗಿತ್ತು.

ಈ ಆಕರ್ಷಕ ಮೆರವಣಿಗೆಯು ನೆಟಿಜನ್‌ಗಳಲ್ಲಿ ಭಾವನಾತ್ಮಕವಾಗಿ ಗಮನ ಸೆಳೆದಿದೆ. ಎನ್ ಜಿ ಒ ಮತ್ತು ಸಾಕು ಪೋಷಕರ ಶ್ರಮಕ್ಕಾಗಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ಇದು ಅತ್ಯಂತ ಸುಂದರವಾದ ಮೆರವಣಿಗೆ ಎಂದು ಕಾಮೆಂಟ್ ಮಾಡಿದ್ದಾರೆ.