ಚೊಚ್ಚಲ ಟಿ20 ವಿಶ್ವಕಪ್ ಮೇಲೆ ನ್ಯೂಜಿಲೆಂಡ್ ಕಣ್ಣು; 3ನೇ ಟ್ರೋಫಿ ಗೆಲುವಿಗೆ ಭಾರತದ ಛಲ
T20 World Cup final: ನ್ಯೂಜಿಲೆಂಡ್‌ಗೆ ಇದು ಎರಡನೇ ಫೈನಲ್. ಭಾರತದ ಪಾಲಿಗೆ 4ನೇ ವಿಶ್ವಕಪ್ ಫೈನಲ್. ಭಾರತ ಮೂರಲ್ಲಿ ಎರಡು ಸಲ ಪ್ರಶಸ್ತಿ ಗೆದ್ದಿದೆ. ನ್ಯೂಜಿಲೆಂಡ್ 2021ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿತ್ತು. ದುಬೈನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ಗಳಿಂದ ಶರಣಾಗಿತ್ತು.
ind vs nz t20 world cup final 2026 -
ಅಹಮದಾಬಾದ್, ಮಾ.7: 2026ರ ಐಸಿಸಿ ಟಿ20 ವಿಶ್ವಕಪ್(T20 World Cup final)ಗೆ ಭಾನುವಾರ(ಮಾ.8) ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ತೆರೆ ಬೀಳಿದೆ. ಹಾಲಿ ಚಾಂಪಿಯನ್ ಭಾರತ ತಂಡ ಬಲಿಷ್ಠ ನ್ಯೂಜಿಲೆಂಡ್(IND v NZ) ವಿರುದ್ಧ ಸೆಣಸಾಟ ನಡೆಸಲಿದೆ. ವಿಶ್ವಕಪ್‌ನಲ್ಲಿ ಈ ವರೆಗೂ ಯಾವುದೇ ತಂಡಕ್ಕೆ ಸತತ 2 ಬಾರಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಜತೆಗೆ ಯಾವ ದೇಶವೂ ಆತಿಥ್ಯ ವಹಿಸಿದಾಗ ಚಾಂಪಿಯನ್ ಆಗಿಲ್ಲ. ಈ ಎರಡೂ ದಾಖಲೆಗಳನ್ನು ಬರೆಯಲು ಭಾರತಕ್ಕೆ ಅವಕಾಶವಿದೆ.
2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಕಪ್ ಗೆದ್ದಿದ್ದ ತಂಡ, 2024ರಲ್ಲಿ ಮತ್ತೊಂದು ಟ್ರೋಫಿ ಗೆದ್ದು 17 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿತ್ತು. ಈಗ ಭಾರತದ ಮುಂದಿರುವುದು ಟ್ರೋಫಿ ಉಳಿಸಿಕೊಳ್ಳುವ ಗುರಿ. ಸೂರ್ಯಕುಮಾರ್ ಯಾದವ್ ತಂಡವನ್ನು ಸರಿಯಾದ ದಾರಿಯಲ್ಲೇ ಕೊಂಡೊಯ್ಯುತ್ತಿದ್ದಾರೆ. ಯುವ, ಪ್ರತಿಭಾವಂತ ಆಟಗಾರರನ್ನು ಒಳಗೊಂಡಿರುವ ಟೀಮ್, ತವರಿನಲ್ಲಿ ನಾಳೆ ಮ್ಯಾಜಿಕ್ ಮಾಡಲಿದೆಯೇ ಎಂಬ ಕಾತರ ಎಲ್ಲರಲ್ಲಿದೆ.
ಕಿವೀಸ್ ಅಜೇಯ
ಮತ್ತೊಂದೆಡೆ ಟೂರ್ನಿಗೂ ಮುನ್ನ ದೊಡ್ಡ ಸದ್ದು ಮಾಡಿದರೆ, ಸೈಲೆಂಟ್ ಆಗಿಯೇ ಟೂರ್ನಿ ಪ್ರವೇಶಿಸಿ ಅಮೋಘ ಆಟವಾಡುವುದು ನ್ಯೂಜಿಲೆಂಡ್ ಗುಣ. ಸ್ಫೋಟಕ ಬ್ಯಾಟರ್ಸ್, ಮಾರಕ ವೇಗಿಗಳು, ಮೋಡಿ ಮಾಡಬಲ್ಲ ಸ್ಪಿನ್ನರ್ಸ್ ತಂಡದಲ್ಲಿ ಹಲವರಿದ್ದಾರೆ. ಜತೆಗೆ ಭಾರತ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಅಜೇಯ ದಾಖಲೆ ಹೊಂದಿದೆ. ಆದರೆ ಲಕ್ ಕೈಹಿಡಿಯಬೇಕಷ್ಟೇ. ತಂಡ ಚೊಚ್ಚಲ ವಿಶ್ವಕಪ್‌ನ ಕನವರಿಕೆಯಲ್ಲಿದೆ.
IND vs NZ: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ತರಬೇಕೆಂದ ಮೊಹಮ್ಮದ್ ಕೈಫ್!
ನ್ಯೂಜಿಲೆಂಡ್‌ಗೆ ಇದು ಎರಡನೇ ಫೈನಲ್. ಭಾರತದ ಪಾಲಿಗೆ 4ನೇ ವಿಶ್ವಕಪ್ ಫೈನಲ್. ಭಾರತ ಮೂರಲ್ಲಿ ಎರಡು ಸಲ ಪ್ರಶಸ್ತಿ ಗೆದ್ದಿದೆ. ನ್ಯೂಜಿಲೆಂಡ್ 2021ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿತ್ತು. ದುಬೈನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ಗಳಿಂದ ಶರಣಾಗಿತ್ತು.
ಭಾರತ ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.1
ಶ್ರೇಷ್ಠ ಸಾಧನೆ: 2007, 2024ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಸಂಜು, ಸೂರ್ಯ, ತಿಲಕ್, ಬೂಮ್ರಾ, ಹಾರ್ದಿಕ್, ಇಶಾನ್
ನ್ಯೂಜಿಲೆಂಡ್: ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.4
ಶ್ರೇಷ್ಠ ಸಾಧನೆ: 2021ರಲ್ಲಿ ರನ್ನರ್-ಅಪ್
ತಾರಾ ಆಟಗಾರರು: ಆ್ಯಲೆನ್, ಡ್ಯಾರಿಲ್, ಫಿಲಿಪ್ಸ್, ಸ್ಯಾಂಟ್ನರ್