ಮಾನವೀಯತೆಯೇ ಮರೆಯಾಯ್ತಾ? ವಿಕಲಚೇತನ ವ್ಯಕ್ತಿಯ ಪರ್ಸ್ ಕಸಿದುಕೊಂಡು ಪರಾರಿಯಾದ ದುಷ್ಕರ್ಮಿಗಳು!
Viral News: ಪಂಜಾಬ್ ನ ಝಿರಾಕ್‌ಪುರದ ಪಾಲಂ ಎನ್‌ಕ್ಲೇವ್ ಎನ್ನುವ ಸ್ಥಳದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವೀಲ್ ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಇಬ್ಬರು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ವಿಕಲ ಚೇತನ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡು ವೇಗವಾಗಿ ಪರಾರಿಯಾಗಿದ್ದಾರೆ.
ವಿಕಲಚೇತನ ವ್ಯಕ್ತಿಯ ಪರ್ಸ್ ಕಳ್ಳತನ ಮಾಡಿದ ಖದೀಮರು -
ಪಂಜಾಬ್,ಸೆ. 10: ಇತ್ತೀಚಿನ ದಿನದಲ್ಲಿ ಮಾನವೀಯ ಮೌಲ್ಯಗಳು ಅನ್ನೋದು ಮರೆಯಾಗ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪಂಜಾಬ್ ನ ಝಿರಾಕ್‌ಪುರದ ಪಾಲಂ ಎನ್‌ಕ್ಲೇವ್ ಎನ್ನುವ ಸ್ಥಳದಲ್ಲಿ ಅಘಾತಕಾರಿ ಘಟನೆಯೊಂದು (Viral News) ನಡೆದಿದೆ. ವೀಲ್ ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಇಬ್ಬರು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ವಿಕಲ ಚೇತನ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡು ವೇಗವಾಗಿ ಪರಾರಿಯಾಗಿದ್ದಾರೆ.
ಇಬ್ಬರು ಅಪರಿಚಿತ ಯುವಕರು ಸುರೇಂದ್ರ ಪಾಲ್ ಎನ್ನುವವರು ಸಂಸ್ಥೆಗೆ ಹೋಗುತ್ತಿದ್ದಾಗ ಪಾಲಂ ಎನ್‌ಕ್ಲೇವ್ ಪ್ರದೇಶದಲ್ಲಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ದೂರಿನ ಪ್ರಕಾರ, ಕದ್ದ ಪರ್ಸ್‌ನಲ್ಲಿ ಸುಮಾರು 5,000 ನಗದು, ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್‌ಗಳು, ಬ್ಲೂಟೂತ್ ಹೆಡ್‌ಫೋನ್‌ಗಳು, ಪ್ಯಾನ್ ಕಾರ್ಡ್ ಮತ್ತು ಇತರ ಪ್ರಮುಖ ದಾಖಲೆಗಳು ಇದ್ದವು ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ:
Where Have Our Humanity and Social Values Gone?
— Rishu Raj Singh (@rishuraj_chd) September 10, 2026
A man travelling in a wheelchair was targeted by two youths, who snatched his mobile phone and fled.
He was already vulnerable yet instead of offering help the accused chose to take advantage of his situation.
📍 Zirakpur, Punjab pic.twitter.com/a1UgERlDkx
ಹಗಲು ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದು ಈ ಅಮಾನವೀಯ ಕೃತ್ಯದ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಸುರೇಂದ್ರ ಪಾಲ್ ಎನ್ನುವ ವಿಕಲಚೇತನ ವ್ಯಕ್ತಿ ಸುಮಾರು ಹತ್ತು ಗಂಟೆಗೆ ತಮ್ಮ ಸಂಸ್ಥೆಗೆ ಗಾಲಿಕುರ್ಚಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಸಕ್ಷಣಮಾತ್ರದಲ್ಲಿ ಅವರ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುರೇಂದ್ರ ಅವರು ದೈಹಿಕವಾಗಿ ಅಶಕ್ತರಾಗಿದ್ದರೂ, ಕಳ್ಳತನದ ನಂತರ ಶಂಕಿತರನ್ನು ಬೆನ್ನಟ್ಟಲು ಪ್ರಯತ್ನಿಸಿದ್ದಾರೆ. ಆದರೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪರ್ಸ್ ಕಸಿದು ಪರಾರಿಯಾಗುವ ಸ್ಪಷ್ಟ ದೃಶ್ಯಗಳು ಸೆರೆಯಾಗಿದೆ. ಪೊಲೀಸರು ಕಳ್ಳರ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಗಾಲಿಕುರ್ಚಿಯಲ್ಲಿ ತೆರಳುವ ವಿಕಲಚೇತನ ವ್ಯಕ್ತಿಗೇ ರಕ್ಷಣೆ ಇಲ್ಲವೆಂದಾದರೆ, ಸಮಾಜದಲ್ಲಿ ಬದುಕುವುದು ಹೇಗೆ ? ಎಂದು ಪ್ರಶ್ನೆ ಮಾಡಿದ್ದಾರೆ.