ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಫ್ತಾರ್‌ ಕೂಟದ ವೇಳೆ ಪಾಕ್‌ನಲ್ಲಿ ನಡೀತು ಘನಘೋರ ದುರಂತ! ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಇಫ್ತಾರ್ ಕೂಟದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದರಲ್ಲಿ ನೂರಾರು ಪಾಕಿಸ್ತಾನಿ ಪುರುಷರು ಆಹಾರಕ್ಕಾಗಿ ಹೆಣಗಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅವರನ್ನು ಭೀಕ್ಷುಕರೆಂದು ವ್ಯಂಗ್ಯವಾಡಿದ್ದಾರೆ.

ಇಫ್ತಾರ್‌ ಕೂಟದ ವೇಳೆ ಪಾಕ್‌ನಲ್ಲಿ ನಡೀತು ಘನಘೋರ ದುರಂತ!

Profile pavithra Mar 12, 2025 1:14 PM

ಇಸ್ಲಾಮಾಬಾದ್‍: ಪವಿತ್ರ ರಂಜಾನ್ ತಿಂಗಳು ಶುರುವಾಗಿದೆ. ಈ ಸಮಯದಲ್ಲಿ ಮುಸ್ಲಿಮರು ಇಡೀ ದಿನ ಉಪವಾಸ ಮಾಡುತ್ತಾರೆ. ಮುಸ್ಲಿಂ ಸಮುದಾಯದವರು ಸಂಜೆ ಅಸರ್‌ ಪ್ರಾರ್ಥನೆ ಮುಗಿದೊಡನೆಯೇ ತಮ್ಮ ಉಪವಾಸವನ್ನು (ಇಫ್ತಾರ್) ಮುರಿಯುತ್ತಾರೆ. ಈ ಸಮಯದಲ್ಲಿ ಕೆಲವರು ಇಫ್ತಾರ್‌ ಕೂಟವನ್ನು ಆಯೋಜಿಸುತ್ತಾರೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಇಂತಹ ಇಫ್ತಾರ್ ಕೂಟದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಆಹಾರದ ತಟ್ಟೆಗಳನ್ನು ಇರಿಸಿದ ಕೂಡಲೇ ನೂರಾರು ಮುಸ್ಲಿಂ ಪುರುಷರು ನೂಕುನುಗ್ಗಲಿನಲ್ಲಿ ಒಬ್ಬರನ್ನು ಒಬ್ಬರು ತಳ್ಳಿಕೊಂಡು ಓಡಿಬರುವುದು ಸೆರೆಯಾಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಹೊರಬಂದ ನಂತರ, ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕ ಜನರು ಇದನ್ನು ದೇಶದ ಆರ್ಥಿಕ ಬಿಕ್ಕಟ್ಟಿಗೆ ಲಿಂಕ್ ಮಾಡಿದ್ದಾರೆ. ಆದರೆ ಕೆಲವರು ಈ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಜನರು ಊಟಕ್ಕಾಗಿ ಓಡುತ್ತಿರುವ ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ಅವರು ತಮಗಾಗಿ ಒಂದು ಪ್ರತ್ಯೇಕ ದೇಶವನ್ನು ಕಟ್ಟಲು ಬಯಸಿ ನಂತರ ಬೇರೊಬ್ಬರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ತಮ್ಮದಲ್ಲದ ಭಾಗಕ್ಕಾಗಿ ಹೋರಾಡಲು ತಮ್ಮ ಇಡೀ ದೇಹವನ್ನು ಕೊಳಕು ಮಾಡಿಕೊಂಡರು. ಈಗ ತಿನ್ನಲು ಕೂಡ ಆಹಾರವಿಲ್ಲದೆ ಹೆಣಗಾಡುತ್ತಿದ್ದಾರೆ. ಇತಿಹಾಸದಲ್ಲಿ ಇದಕ್ಕಿಂತ ದೊಡ್ಡ ಮೂರ್ಖರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೊಬ್ಬರು, ಇವರು ಪರಮಾಣು ಶಕ್ತಿಯಾಗಲು ಹೋದರು, ಆದರೆ ಸಾರ್ವಜನಿಕರಿಗೆ ತಿನ್ನಲು ಆಹಾರವಿಲ್ಲದಂತಾಗಿದೆ. ಜನರು ಪರಮಾಣು ಶಕ್ತಿಯನ್ನು ತಿನ್ನಲು ಸಾಧ್ಯವಿಲ್ಲ. ಸರ್ಕಾರದ ತಪ್ಪು ಆದ್ಯತೆಗಳು ಜನರನ್ನು ಬಡವರನ್ನಾಗಿ ಮಾಡುತ್ತವೆ. ಹಾಗಾಗಿ ಅವರು ಈಗ ಆಹಾರಕ್ಕಾಗಿ ಹೋರಾಡಬೇಕಾಗಿದೆ. ಈ ಸಂದರ್ಭದಲ್ಲಿ, ಅವರು ಭಿಕ್ಷುಕರಾಗಿದ್ದಾರೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಿಂದ ಇಂತಹ ಮುಜುಗರ ಮೂಡಿಸುವಂತಹ ವಿಡಿಯೊ ಹೊರಬರುತ್ತಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಹಾಗಾಗಿ ಪಾಕಿಸ್ತಾನಿಗಳು ಹೆಚ್ಚು ಹಣದುಬ್ಬರವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಹೆಚ್ಚು ಆಹಾರದ ಕೊರತೆ ಕಂಡುಬಂದಿದೆ. ಈ ಹಿಂದೆ ಪಾಕಿಸ್ತಾನಿಗಳು ಹಿಟ್ಟಿಗಾಗಿ ಹೋರಾಡುವ ಅನೇಕ ವಿಡಿಯೊಗಳು ಸಹ ವೈರಲ್ ಆಗಿದ್ದವು. 2023 ರಲ್ಲಿ, ಪಾಕಿಸ್ತಾನಿ ಪುರುಷರು ಮೋಟಾರು ಬೈಕುಗಳಲ್ಲಿ ಟ್ರಕ್ ಅನ್ನು ಹಿಂಬಾಲಿಸಿಕೊಂಡು ಬಂದು ಗೋಧಿಯ ಚೀಲಕ್ಕಾಗಿ ಬೇಡಿಕೊಳ್ಳುವ ವಿಡಿಯೊವನ್ನು ಈ ಹಿಂದೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅದು ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Ramzan Row: ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕಾರ್ಯಾವಧಿಯಲ್ಲಿ ವಿನಾಯಿತಿ; ಭುಗಿಲೆದ್ದ ವಿವಾದ

ಇತ್ತೀಚೆಗೆ ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ‌ ಮನೆಗೆ ಬೇಗನೆ ತೆರಳಲು ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ಮನೆಗೆ ತೆರಳಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಆದೇಶ ಹೊರಡಿಸಿದ್ದಾರೆ ಇದು ವಿವಾದಕ್ಕೆ ಕಾರಣವಾಗಿದೆ.