ಲಖನೌ: ಸಮಾಜವಾದಿ ಪಕ್ಷದ (Samajwadi Party) ನಾಯಕ ಮತ್ತು ಪಕ್ಷದ ಮಾಜಿ ಖಜಾಂಚಿ ಕೈಶ್ ಖಾನ್ ಅವರನ್ನು ಬುಧವಾರ ಉತ್ತರ ಪ್ರದೇಶ (Uttar Pradesh) ದ ಕನ್ನೌಜ್‌ನಲ್ಲಿ ಬಂಧಿಸಲಾಗಿದೆ. ಪೊಲೀಸರು ಆತನ ಸಹೋದರನ ಮನೆಯಲ್ಲಿ ಹಾಸಿಗೆಯ ಹಿಂದೆ ಅಡಗಿಕೊಂಡಿದ್ದನ್ನು ಪತ್ತೆ ಮಾಡಿದ್ದಾರೆ. ಸುಳಿವು ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಬಂಧಿಸುವ ಮೊದಲು ಮನೆಯನ್ನು ಸಂಪೂರ್ಣವಾಗಿ ಶೋಧಿಸಿದ್ದಾರೆ. ಈ ನಾಟಕೀಯ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರು ಎಂದು ಹೇಳಲಾಗುವ ಖಾನ್ ಅವರಿಗೆ ಕನ್ನೌಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಮೋಹನ್ ಅಗ್ನಿಹೋತ್ರಿ, ಜುಲೈ 28 ರಂದು ಕನ್ನೌಜ್ ಜಿಲ್ಲೆಯಿಂದ ಆರು ತಿಂಗಳ ಕಾಲ ಹೊರಗಿರಲು ಆದೇಶಿಸಿದ್ದರು. ನ್ಯಾಯಾಲಯವು ಅವರನ್ನು ತಕ್ಷಣ ಜಿಲ್ಲೆಯನ್ನು ತೊರೆಯುವಂತೆ ಸೂಚಿಸಿತ್ತು. ನಿಷೇಧದ ನಂತರ, ಕೈಶ್ ಖಾನ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಬುಧವಾರದಂದು ಬಾಲಪೀರ್‌ನಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತು.
ವಿಡಿಯೊ ವೀಕ್ಷಿಸಿ:
ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನ ನಿವಾಸ ಮತ್ತು ಆತನ ಸಹೋದರನ ಮನೆಯಲ್ಲಿ ಶೋಧ ನಡೆಸಿದರೂ ಆರಂಭದಲ್ಲಿ ಆತನ ಸುಳಿವು ಪತ್ತೆಯಾಗಲಿಲ್ಲ. ನಂತರ ಆತ ಒಂದು ಕೋಣೆಯಲ್ಲಿ ಹಾಸಿಗೆಯ ಮೇಲೆ ಹಿಂದೆ ಅಡಗಿಕೊಂಡಿದ್ದನ್ನು ಪತ್ತೆ ಹಚ್ಚಿ, ನಂತರ ಆತನನ್ನು ವಶಕ್ಕೆ ಪಡೆದರು. ಅವರು ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಬಂಧಿಸಲಾಯಿತು. ನಂತರ, ಅವರು ನಮ್ಮಿಂದ ತಪ್ಪಿಸಿಕೊಳ್ಳಲು ಮೇಲಂತಸ್ತಿನಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಹುಡುಕಿದಾಗ ಸಿಕ್ಕಿಬಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದರು.
ಸಮಾಜವಾದಿ ಪಕ್ಷದ ನಾಯಕನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ ಎಂದು ಕುಮಾರ್ ಹೇಳಿದರು. ಅವರ ವಿರುದ್ಧ ಗೂಂಡಾ ಕಾಯ್ದೆಯ ಸೆಕ್ಷನ್ 3 ಮತ್ತು 10 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈ ವರ್ಷದ ಆರಂಭದಲ್ಲಿ, ಜನವರಿ 6 ರಂದು, ಕೈಶ್ ಖಾನ್ ಅವರ ಮದುವೆ ಮಂಟಪದ ಮೇಲೆ ಬುಲ್ಡೋಜರ್ ಮೂಲಕ ಕ್ರಮ ಕೈಗೊಳ್ಳಲಾಯಿತು. ಪುರಸಭೆ ಪ್ರದೇಶದಲ್ಲಿನ ರಸ್ತೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಅದರ ಮೇಲೆ ಲಿಂಟೆಲ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈ 25 ರಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕನೌಜ್‌ಗೆ ಭೇಟಿ ನೀಡಿ ಕೈಶ್ ಖಾನ್ ಅವರನ್ನು ಭೇಟಿಯಾದರು. ಮೂರು ದಿನಗಳ ನಂತರ, ಜುಲೈ 28 ರಂದು, ಕೈಶ್ ಖಾನ್ ಮೇಲೆ ಜಿಲ್ಲಾ ನಿಷೇಧ ಹೇರಲಾಯಿತು.
ಇದನ್ನೂ ಓದಿ: Viral Video: ಪಕ್ಕದಲ್ಲಿ ಕುಳಿತ ಮಹಿಳೆಯ ಬ್ಲೌಸ್ ಒಳಗೆ ಇಣುಕಿ ನೋಡಿದ ಕಾಮುಕ! ಈ ವಿಡಿಯೊ ನೋಡಿ