Viral Video: ಪಕ್ಕದಲ್ಲಿ ಕುಳಿತ ಮಹಿಳೆಯ ಬ್ಲೌಸ್ ಒಳಗೆ ಇಣುಕಿ ನೋಡಿದ ಕಾಮುಕ! ಈ ವಿಡಿಯೊ ನೋಡಿ
man constantly looking at woman chest: ಬಸ್‍ನಲ್ಲಿ ಕೆಲವು ವಿಕೃತ ಪುರುಷರು ಮಹಿಳೆಯರಿಗೆ ಕಿರುಕುಳ ಕೊಡುತ್ತಾರೆ. ಇದೀಗ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಬಸ್‍ನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಯುವತಿಯ ಎದೆಯನ್ನೇ ಪದೇ ಪದೇ ನೋಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

-

ಕೊಚ್ಚಿ: ನೋಡುವ ದೃಷ್ಟಿ ಉಡುಗೆಯಲ್ಲಿಲ್ಲ, ನೋಡುವ ಕಣ್ಣಿನಲ್ಲಿದೆ ಎಂಬ ಮಾತು ಈಗ ವೈರಲ್ ಆಗಿರುವ ವಿಡಿಯೊದಿಂದ ಮತ್ತೆ ಸಾಬೀತಾಗಿದೆ. ಹೆಣ್ಮಕ್ಕಳು ಮಾಡರ್ನ್ ಉಡುಪು ತೊಡುತ್ತಾರೆ ಎಂದು ಕೋಪಗೊಳ್ಳುವ ಮಂದಿ ಈ ವಿಡಿಯೊವನ್ನು ನೋಡಲೇಬೇಕು. ಯಾಕೆಂದರೆ ಸಂಪ್ರದಾಯಬದ್ಧವಾಗಿ ಸೀರೆ (saree) ಧರಿಸಿದರೂ ಕೆಲವರು ನೋಡುವ ನೋಟ ಬೇರೆಯದ್ದೇ ಆಗಿರುತ್ತದೆ. ಹೌದು, ಇದೀಗ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಯುವತಿಯ ಎದೆಯನ್ನೇ ಪದೇ ಪದೇ ನೋಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಓಣಂ ಹಬ್ಬದಂದು ಯುವತಿಯೊಬ್ಬಳು ಸೀರೆ ಧರಿಸಿ ಬಸ್ ಹತ್ತಿದ್ದಾಳೆ. ಈ ವೇಳೆ ಬಸ್ ಸೀಟ್‍ನಲ್ಲಿ ಆಕೆಯ ಪಕ್ಕ ಕುಳಿತಿದ್ದ ಮಧ್ಯ ವಯಸ್ಕ ವ್ಯಕ್ತಿಯು ಪದೇ ಪದೇ ಯುವತಿಯ ಎದೆಯನ್ನು ನೋಡಿದ್ದಾನೆ. ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯುವತಿ, ಉಡುಗೆ ಎಂದಿಗೂ ಸಮಸ್ಯೆಯ ಭಾಗವಲ್ಲ ಎಂದು ಹೇಳಿದ್ದಾರೆ. ಈ ಘಟನೆಯು ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ವಿಡಿಯೊದಲ್ಲಿ, ಯುವತಿಯು ಸಾಂಪ್ರದಾಯಿಕ ಬಿಳಿ ಮತ್ತು ಗೋಲ್ಡನ್ ಬಣ್ಣದ ಕೇರಳ ಸೀರೆಯನ್ನು ಧರಿಸಿದ್ದು, ಕೆಂಪು ಕುಪ್ಪಸ ತೊಟ್ಟಿದ್ದಾರೆ. ವಿಡಿಯೊದಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ನಿರಂತರವಾಗಿ ಅವಳನ್ನು ನೋಡುತ್ತಿರುವುದನ್ನು ತೋರಿಸಲಾಗಿದೆ. ಒಂದು ಹಂತದಲ್ಲಿ, ಆಕೆ ಅವನತ್ತ ಹಿಂತಿರುಗಿ ನೋಡುತ್ತಾಳೆ. ಆಗ ಬೇರೆ ಕಡೆಗೆ ನೋಡುವ ಆತ, ಮತ್ತೆ ಈಕೆಯ ಎದೆಯನ್ನೇ ದೃಷ್ಟಿಸಿದ್ದಾನೆ.
ವಿಡಿಯೊ ವೀಕ್ಷಿಸಿ:
Another viral video highlights the daily struggles of women in India. A young woman in Kerala recorded an elderly man allegedly staring at her inappropriately during a bus ride. She shared it on Onam to prove clothes are never the problem. Time to reflect, not excuse. #Kerala… pic.twitter.com/PO6Wt3C4eR
— The Daily Jagran (@TheDailyJagran) September 4, 2025
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ಇದು ಉಡುಗೆ ತೊಡುಗೆ ಮುಖ್ಯವಲ್ಲ ಎಂದು ಸಾಬೀತುಪಡಿಸುತ್ತದೆ ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಯುವತಿಯು ಸುಖಾಸುಮ್ಮನೆ ವಿಡಿಯೊ ಮಾಡುವ ಬದಲು ಆತನ ಕಪಾಳಕ್ಕೆ ಬಿಗಿಯಬೇಕಿತ್ತು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಆದರೆ, ಇನ್ನೂ ಕೆಲವರು ಆ ಯುವತಿ ವಿಡಿಯೊ ರೆಕಾರ್ಡ್ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಬೇರೆಯವರಿಗೆ ಆತನನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವರು ಅವನು ಫೋನ್ ನೋಡುತ್ತಿದ್ದಾನೆ ಎಂದು ವಾದಿಸಿದ್ದಾರೆ. ಇನ್ನು ಕೆಲವರು ಇಲ್ಲ, ಅವನು ಫೋನ್ ನೋಡುತ್ತಿಲ್ಲ. ಹತ್ತಿರದಿಂದ ನೋಡಿ, ಅವನು ತನ್ನ ಕಣ್ಣುಗಳನ್ನು ಅವಳ ಎದೆಯ ಕಡೆಗೆ ನೋಡುವುದನ್ನು ಗಮನಿಸಬಹುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿದೆ.
ಇದನ್ನೂ ಓದಿ: Viral Video: ವಿವಾಹದ ಸಂಭ್ರಮದಲ್ಲಿದ್ದವರಿಗೆ ಶಾಕ್ ; ನವದಂಪತಿಯ 88 ಲಕ್ಷ ಮೌಲ್ಯದ ಗಿಫ್ಟ್ ಬಾಕ್ಸ್ ಎಗರಿಸಿದ ಕಳ್ಳ