ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಿಂದ ರಿಷಭ್ ಪಂತ್ ಔಟ್!
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್, ಸದ್ಯ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆದರೆ ಅವರು ವಿಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಸಂಪೂರ್ಣವಾಗಿ ಫಿಟ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಿಂದ ರಿಷಭ್ ಪಂತ್ ಔಟ್. -

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant), ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ದ ಮುಂಬರುವ ಟೆಸ್ಟ್ ಹಾಗೂ ವೈಟ್‌ಬಾಲ್ ಸರಣಿಗಳಿಗೆ (IND vs WI) ಅಲಭ್ಯರಾಗಲಿದ್ದಾರೆಂದು ವರದಿಯಾಗಿದೆ. ರಿಷಭ್ ಪಂತ್ ಸದ್ಯ ಪಾದದ ಗಾಯದಿಂದ ಗುಣಮುಖರಾಗುತ್ತಿದ್ದಾರೆ. ಹಾಗಾಗಿ ಅವರು ಟೆಸ್ಟ್ ಸರಣಿಗೂ ಸಂಪೂರ್ಣ ಫಿಟ್ ಆಗುವುದು ಅನುಮಾನ. ಇವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದರು.ಈ ಹಿನ್ನೆಯಲ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಶುಭಮನ್ ಗಿಲ್ ಅವರನ್ನು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಅದರಂತೆ ಗಿಲ್ ಅವರ ನಾಯಕತ್ವದ ಮೊದಲ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನಲ್ಲಿದ್ದ ಕಾರಣ ಅತ್ಯಂತ ಕಠಿಣವಾಗಿತ್ತು. ಆದರೆ, ಗಿಲ್ ನಾಯಕತ್ವದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರಿತ್ತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-2 ಅಂತರದಲ್ಲಿ ಸಮಬಲ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಗಾಯಕ್ಕೆ ತುತ್ತಾಗುವುದಕ್ಕೂ ಮುನ್ನ ರಿಷಭ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಆದರೆ, ಅನಿರೀಕ್ಷಿತವಾಗಿ ಗಾಯಕ್ಕೆ ತುತ್ತಾಗಿದ್ದರು.
IND vs PAK: ʻಆಂಡಿ ಪೈಕ್ರಾಫ್ಟ್ ಸ್ಕೂಲ್ ಟೀಚರ್ ಅಲ್ಲʼ-ಪಾಕಿಸ್ತಾನವನ್ನು ಟೀಕಿಸಿದ ಆರ್ ಅಶ್ವಿನ್!
ದೈನಿಕ್ ಜಾಗರಣ್ ವರದಿಯ ಪ್ರಕಾರ, ರಿಷಭ್ ಪಂತ್ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಲು ಇನ್ನೂ ಮೂರರಿಂದ ನಾಲ್ಕು ವಾರಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2 ರಂದು ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಖಚಿತವಾಗಿಯೂ ಅಲಭ್ಯರಾಗಲಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ದ ವೈಟ್‌ವಾಲ್ ಸರಣಿಗಳಿಗೂ ಕೂಡ ಅವರು ಅಲಭ್ಯರಾಗಲಿದ್ದಾರೆ. ಅಕ್ಟೋಬರ್ 19 ರಿಂದ ನವೆಂಬರ್ 8ರ ವರೆಗೆ ಆಸ್ಟ್ರೇಲಿಯಾ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ.
ನವೆಂಬರ್ 14 ರಂದು ದಕ್ಷಿಣ ಆಫ್ರಿಕಾ ವಿರುದ್ದ ಆರಂಭವಾಗಲಿರುವ ತವರು ಟೆಸ್ಟ್ ಸರಣಿಗೆ ರಿಷಭ್ ಪಂತ್ ಭಾರತ ತಂಡಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ4 ರಿಂದ 5 ವಾರಗಳ ಕಾಲ ರಿಷಭ್ ಪಂತ್ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಟೆಸ್ಟ್ ಸರಣಿಯಲ್ಲಿ ಧುವ್ ಜುರೆಲ್ ಆಡಿದರೆ, ಆಸ್ಟ್ರೇಲಿಯಾ ಎದುರು ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು ಆಡಿಸಬಹುದು.
IND vs PAK: ಪಾಕಿಸ್ತಾನ ವಿರುದ್ಧದ ಸೂಪರ್-4ರ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!
ರಿಷಭ್ ಪಂತ್ ಹೇಗೆ ಗಾಯಕ್ಕೆ ತುತ್ತಾದರು?
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕ್ರಿಸ್ ವೋಕ್ಸ್‌ಗೆ ರಿವರ್ಸ್ ಸ್ವೀಪ್ ಹೊಡೆಯಲು ಪ್ರಯತ್ನಿಸಿದ ವೇಳೆ ಚೆಂಡು ಪಂತ್ ಅವರ ಪಾದಕ್ಕೆ ತಗುಲಿತ್ತು. ಈ ವೇಳೆ ಅವರ ಪಾದಕ್ಕೆ ಬಲವಾದ ಗಾಯವಾಗಿ, ಸಾಕಷ್ಟು ನೋವು ಅನುಭವಿಸಿದ್ದರು. ನಂತರ ಇವರು ಎರಡೂ ಇನಿಂಗ್ಸ್‌ನಲ್ಲಿ ಕುಂಟಿಕೊಂಡು ಬ್ಯಾಟ್ ಮಾಡಿದ್ದರು. ಆದರೆ, ವಿಕೆಟ್ ಕೀಪರ್ ಆಗಿ ಅಂಗಣಕ್ಕೆ ಇಳಿದಿರಲಿಲ್ಲ. ಇವರ ಬದಲು ಧ್ರುವ ಜುರೆಲ್ ವಿಕೆಟ್ ಕೀಪಿಂಗ್ ಕಾರ್ಯವನ್ನು ನಿರ್ವಹಿಸಿದ್ದರು.