ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಸ್ನೇಹಿತನಿಗಾಗಿ ಈ ಮಕ್ಕಳು ಮಾಡಿದ್ದೇನು ನೋಡಿ....ಹೃದಯಸ್ಪರ್ಶಿ ವಿಡಿಯೊ ವೈರಲ್!

ಸಿಚುವಾನ್ ಪ್ರಾಂತ್ಯದ ಯಿಲಾಂಗ್ ಮಿಡಲ್ ಸ್ಕೂಲ್‌ನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಸಹಪಾಠಿ ರೆನ್ ಜುಂಜಿ ಸಾಯುವ ಕೆಲವೇ ಗಂಟೆಗಳ ಮೊದಲು ಸುಮಾರು 2 ಕಿಲೋಮೀಟರ್ ದೂರ ನಡೆದು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಪದವಿ ಫೋಟೊಶೂಟ್ ಮಾಡಿದ್ದಾರೆ. ಆ ಮೂಲಕ ಪದವಿ ಪ್ರಧಾನ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ ಎಂಬ ಆತನ ಕೊರಗನ್ನು ನೀಗಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ಸ್ನೇಹದ ವಿಡಿಯೊ; ಏನಿದು ಘಟನೆ?

Profile pavithra May 26, 2025 12:45 PM

ಬೀಜಿಂಗ್: ಸ್ನೇಹ ಎನ್ನುವುದು ತುಂಬಾ ಪವಿತ್ರವಾದ ಸಂಬಂಧ. ಉತ್ತಮ ಸ್ನೇಹಿತರಿದ್ದರೆ ಬದುಕು ಕೂಡ ಸುಂದರವಾಗಿರುತ್ತದೆ ಎನ್ನುತ್ತಾರೆ. ರಕ್ತಸಂಬಂಧಿಗಳಿಗಿಂತ ಹೆಚ್ಚಾಗಿ ಸ್ನೇಹಿತರು ಕಷ್ಟಕಾಲದಲ್ಲಿ ಜೊತೆ ನಿಲ್ಲುತ್ತಾರೆ ಎಂಬುದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ನಿದರ್ಶನ!‌ ಹೌದು ಚೀನಾದಲ್ಲಿ ಸಿಚುವಾನ್ ಪ್ರಾಂತ್ಯದ ಯಿಲಾಂಗ್ ಮಿಡಲ್ ಸ್ಕೂಲ್‌ನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾರಕ ರೋಗವಾದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಸಹಪಾಠಿ ಸಾಯುವ ಕೆಲವೇ ಗಂಟೆಗಳ ಮೊದಲು ಸುಮಾರು 2 ಕಿಲೋಮೀಟರ್ ದೂರ ನಡೆದು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಶಾಲಾ ಸಮವಸ್ತ್ರ ಧರಿಸಿ, ಪದವಿ ಪಡೆಯಲು ಸಾಧ್ಯವಾಗದ ತಮ್ಮ ಸ್ನೇಹಿತನನ್ನು ಭೇಟಿ ಮಾಡಿದ ಅವರು, ಅವನ ಜೊತೆ ಸೇರಿ ಅಂತಿಮ ಫೋಟೋವನ್ನು ಕ್ಲಿಕಿಸಿಕೊಂಡಿದ್ದಾರೆ.ಆ ಮೂಲಕ ಪದವಿ ಪ್ರಧಾನ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ ಎಂಬ ಅವನ ಕೊರಗನ್ನು ನೀಗಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

15 ವರ್ಷದ ವಿದ್ಯಾರ್ಥಿ ರೆನ್ ಜುಂಜಿ ಸಿಚುವಾನ್ ಪ್ರಾಂತ್ಯದ ಯಿಲಾಂಗ್ ಮಿಡಲ್ ಸ್ಕೂಲ್‌ನಲ್ಲಿ ಪದವಿ ಓದುತ್ತಿದ್ದು, ಇತ್ತೀಚೆಗೆ ಅವನಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ತನ್ನ ಕಾಯಿಲೆಗೆ ಬೇರೆ ನಗರದಲ್ಲಿ ಚಿಕಿತ್ಸೆ ಪಡೆಯಲು ಆತ ಶಾಲೆಯನ್ನು ಬಿಡಬೇಕಾಯಿತಂತೆ. ಇದರಿಂದ ರೆನ್‌ಗೆ ತರಗತಿಗಳಿಗೆ ಹಾಜರಾಗಲು ಅಥವಾ ಪದವಿ ಪ್ರದಾನ ಸಮಾರಂಭಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲವಂತೆ.

ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ ನೋಡಿ...

ಆತನ ಸಹಪಾಠಿಗಳು, ಕೆಲವು ಶಿಕ್ಷಕರೊಂದಿಗೆ ಅವನಿದ್ದ ಆಸ್ಪತ್ರೆಗೆ ಭೇಟಿ ನೀಡಲು ಮೆರವಣೆಗೆ ಮೂಲಕ ಬಂದಿದ್ದಾರಂತೆ.ಅದೂ ಅಲ್ಲದೇ, ಆಸ್ಪತ್ರೆಯಲ್ಲಿ ಎಲ್ಲರೂ ಒಟ್ಟಾಗಿ, ಅವನಿಗೆ ಶಾಲಾ ಸಮವಸ್ತ್ರವನ್ನು ಧರಿಸಲು ಸಹಾಯ ಮಾಡಿದ್ದಾರೆ. ಹಾಗೇ ಅವನು ಮಲಗಿದ್ದ ಬೆಡ್‍ ಅನ್ನು ಆಸ್ಪತ್ರೆಯ ಮೈದಾನಕ್ಕೆ ತಳ್ಳಿಕೊಂಡು ಬಂದು ಅಲ್ಲಿ ಅವನ ಜೊತೆ ಪದವಿ ಫೋಟೋಗೆ ಪೋಸ್ ನೀಡಿದ್ದಾರೆ. ಇದು ರೆನ್‍ಗೆ ಸಿಕ್ಕ ಒಂದು ಅದ್ಭುತವಾದ ಸರ್ಪ್ರೈಸ್ ಆಗಿದೆಯಂತೆ.

ಈ ಸುದ್ದಿಯನ್ನೂ ಓದಿ:Viral Video: ಶೂ ಒಳಗೆ ಬಿಯರ್ ಸುರಿದು ಕುಡಿದ ಸಂಸದ; ಏನಿದು 'ಶೂಯಿ' ಸಂಪ್ರದಾಯ?

ಅವನ ಶಿಕ್ಷಕರು ಹಾಗೂ ಸಹಪಾಠಿಗಳು ಪ್ರೀತಿಭರಿತ ಸಂದೇಶಗಳು ಮತ್ತು ಶುಭಾಶಯಗಳಿಂದ ತುಂಬಿದ ಪತ್ರಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಸಹಿ ಮಾಡಿದ ಬ್ಯಾಸ್ಕೆಟ್‌ಬಾಲ್‌ ಅನ್ನು ರೆನ್‍ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯವೀಗ ಚೀನಾದ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರ ಕಣ್ಣನ್ನೂ ಒದ್ದೆ ಮಾಡಿದೆ.