ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜೀವಂತ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ನೀಚ; ಮಹಿಳೆಯಿಂದ ತಕ್ಕ ಶಾಸ್ತಿ, ವಿಡಿಯೋ ವೈರಲ್‌

ಮನುಷ್ಯ ಹಾಗೂ ಮೂಕ ಪ್ರಾಣಿಗಳ ನಡುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾಯಿಯನ್ನು ತಮ್ಮ ಮಕ್ಕಳಂತೆ ಸಾಕುವಂತ ಜನರಿದ್ದಾರೆ. ಆದರೆ ಇಲ್ಲೊಬ್ಬ ನೀಚ ಬೈಕ್ ಸವಾರಿ ಮಾಡುತ್ತಾ, ನಾಯಿಯನ್ನು ಸರಪಳಿಯಿಂದ ಎಳೆದೊಯ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಜೀವಂತ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ನೀಚ; ವಿಡಿಯೋ ವೈರಲ್‌

ವೈರಲ್‌ ವಿಡಿಯೋ

Profile Vishakha Bhat Mar 21, 2025 8:05 PM

ಜೈಪುರ: ಮನುಷ್ಯ ಹಾಗೂ ಮೂಕ ಪ್ರಾಣಿಗಳ ನಡುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾಯಿಯನ್ನು ತಮ್ಮ ಮಕ್ಕಳಂತೆ ಸಾಕುವಂತ ಜನರಿದ್ದಾರೆ. ಆದರೆ ಇಲ್ಲೊಬ್ಬ ನೀಚ ಬೈಕ್ ಸವಾರಿ ಮಾಡುತ್ತಾ, ನಾಯಿಯನ್ನು ಸರಪಳಿಯಿಂದ ಎಳೆದೊಯ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ನಾಯಿಯನ್ನು ಎಳೆದೊಯ್ಯುತ್ತಿರುವ ವಿಡಿಯೋ ವೈರಲ್‌ (Viral Video) ಆಗಿದೆ. ಬಲಿಚಾ ಪ್ರದೇಶದಲ್ಲಿ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಯ ದುಃಸ್ಥಿತಿಯನ್ನು ನೋಡಿದ ಮಹಿಳೆಯೊಬ್ಬರು ವ್ಯಕ್ತಿಯನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್‌ ವ್ಯಕ್ತಿ ಬೈಕ್‌ ಚಲಾಯಿಸುತ್ತಾ, ನಾಯಿಯನ್ನು ಬೈಕ್‌ನ ಹಿಂಬದಿಗೆ ಕಟ್ಟಿದ್ದಾನೆ. ನಾಯಿ ನೋವಿನಿಂದ ನರಳುತ್ತಿದೆ. ಅದನ್ನು ನೋಡಿದ ಮಹಿಳೆ ಆತನನ್ನು ತಡೆದು ಆದ ವಿಡಿಯೋದಲ್ಲಿ ವ್ಯಕ್ತಿಗೆ ನಿನಗೆ ಹುಚ್ಚು ಹಿಡಿದಿದೆಯೇ? ಎಂದು ಕೇಳಿದ್ದಾಳೆ. ಆಕೆಯ ಮಗನೇ ವಿಡಿಯೋ ಮಾಡಿದ್ದಾನೆ. ಮಹಿಳೆ ತರಾಟೆಗೆ ತೆಗೆದುಕೊಂಡ ನಂತರ ಆ ವ್ಯಕ್ತಿ ನಾಯಿಯ ಸರಪಳಿಯನ್ನು ಬಿಚ್ಚಿ ತನ್ನ ತೋಳುಗಳಲ್ಲಿ ಹೊತ್ತುಕೊಂಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಹಲವಾರು ಜನರು ಜಮಾಯಿಸಿದ್ದಾರೆ. ಆತ ತನ್ನ ಕೃತ್ಯಕ್ಕೆ ಕೈಜೋಡಿಸಿ ಕ್ಷಮೆಯಾಚಿಸಿದ್ದಾನೆ. ಈ ಘಟನೆ ಗೋವರ್ಧನ್ ವಿಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ವಿವರವಾದ ತನಿಖೆ ಆರಂಭಿಸಲಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ. ಹಲವು ರೀತಿ ಕಮೆಂಟ್‌ಗಳು ಬಂದಿದ್ದು , ಒಬ್ಬ ಕಮೆಂಟ್‌ ಮಾಡಿ ಆ ವ್ಯಕ್ತಿಯನ್ನೂ ಅದೇ ರೀತಿ ಎಳೆದು ಕೊಂಡು ಹೋಗಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಮಹಿಳೆ ಹಾಗೂ ಆಕೆಯ ಮಗನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ಇನ್‌ಸ್ಟಾಗ್ರಾಮ್ ಬಳಕೆದಾರರು ಆ ವ್ಯಕ್ತಿಯ ವಿರುದ್ಧ ಕಠಿಣ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ: Viral Video: ವೇದ-ಮಂತ್ರ ಪಠಿಸುತ್ತಾ ತನ್ನ ಮದುವೆಗೆ ತಾನೇ ಪುರೋಹಿತನಾದ ವರ- ವಿಡಿಯೋ ಫುಲ್‌ ವೈರಲ್‌

ಪ್ರತ್ಯೇಕ ಘಟನೆಯಲ್ಲಿ ದೆಹಲಿಯ ವ್ಯಕ್ತಿಯೊಬ್ಬ ತನ್ನ ಕಳೆದುಹೋದ ನಾಯಿಯೊಂದಿಗೆ ಮತ್ತೆ ಒಂದಾಗಿರುವುದು ಅಂತರ್ಜಾಲದಲ್ಲಿ ಎಲ್ಲರ ಮನ ಗೆದ್ದಿದೆ. ನಾಯಿ ತನ್ನ ಮಾಲೀಕರನ್ನು ಭೇಟಿಯಾಗುವ ವೀಡಿಯೊವನ್ನು ಶುಕ್ರವಾರ ಮುಂಜಾನೆ ರೆಡ್ಡಿಟ್‌ನಲ್ಲಿ ನಾಯಿಯ ಮಾಲೀಕರ ಸ್ನೇಹಿತ ಹಂಚಿಕೊಂಡಿದ್ದಾರೆ. ಚಾರ್ಲಿ ಎಂಬ ಹೆಸರಿನ ಶ್ವಾನ ಕಳೆದು ಹೋಗಿತ್ತು. ಮಾಲೀಕ ತನ್ನ ಶ್ವಾನವನ್ನು ಎಲ್ಲೆಡೆ ಹುಡುಕುತ್ತಿದ್ದರು. ಕೊನೆಗೂ ನಾಯಿ ಮಾಲೀಕರ ಮಡಿಲು ಸೇರಿದೆ. ಸದ್ಯ ನಾಯಿ ಹಾಗೂ ಮಾಲೀಕನ ಪುನರ್ಮಿಲನ ನೆಟ್ಟಿಗರ ಮನ ಗೆದ್ದಿದೆ.