ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ: ಮೇಜಿನ ಮೇಲಿದ್ದ ಆಹಾರ ತಿಂದ ಬೀದಿ ನಾಯಿ
Viral Video: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಒಳಗೆ ಬೀದಿ ನಾಯಿಯೊಂದು ನುಗ್ಗಿ ಮೇಜಿನ ಮೇಲೆ ಕುಳಿತು ಉಳಿದ ಆಹಾರವನ್ನು ತಿಂದಿದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಹೂದರಾಬಾದ್ ವಿಮಾನ ನಿಲ್ದಾಣದಲ್ಲಿ ಮೇಜಿನ ಮೇಲಿದ್ದ ಆಹಾರ ತಿಂದ ಬೀದಿ ನಾಯಿ -
ಹೈದರಾಬಾದ್, ಮೇ 27: ಇತ್ತೀಚಿನ ದಿನದಲ್ಲಿ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಆಹಾರ ಸುರಕ್ಷತೆಯನ್ನು ಪಾಲಿಸದೇ ಇರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಕ್ಯಾನ್ಸರ್‌ಕಾರಕ ರಾಸಾಯನಿಕ ಬಣ್ಣಗಳನ್ನು ಬಳಸಿ ಗ್ರಾಹಕರನ್ನು ಆಕರ್ಷಣೆ ಮಾಡುವುದು, ಆಹಾರ ತಯಾರಿಸುವ ಸ್ಥಳದಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು ಹೀಗೆ...ಇದೀಗ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಒಳಗೆ ಬೀದಿ ನಾಯಿಯೊಂದು ಓಡಾಡಿದೆ. ಬೀದಿ ನಾಯಿ ಮೇಜಿನ ಮೇಲೆ ಕುಳಿತು ಉಳಿದ ಆಹಾರವನ್ನು ತಿನ್ನುತ್ತಿರುವುದನ್ನು ವಿಡಿಯೊ ತೋರಿಸಿದೆ. ಸದ್ಯ ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಪ್ರಯಾಣಿಕರಿಗಾಗಿ ನಿಗದಿಪಡಿಸಿರುವ ಹೋಟೆಲ್ ಮೇಜಿನ ಮೇಲಿದ್ದ ಆಹಾರ ತಿನ್ನಲು ನಾಯಿ ಮುಂದಾಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ಸುರಕ್ಷತೆಯ ಕುರಿತು ತೀವ್ರ ಕಳವಳ ವ್ಯಕ್ತವಾಗಿದೆ. ಇದು ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.
ವಿಡಿಯೊ ನೋಡಿ:
Dog Eating on Table at Shamshabad Airport
— Siraj Noorani (@sirajnoorani) May 26, 2026
Conditions at #Shamshabad #Hyderabad
International Airport have been exposed. Passengers were shocked to see a dog climbing onto a restaurant table and eating leftover food. This has sparked severe criticism over cleanliness at an… pic.twitter.com/zMK76CliZ4
"ವನ್ಯಜೀವಿ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬೀದಿ ನಾಯಿಗಳ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಜಿಎಚ್‌ಎಂಪಿಸಿ (ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್) ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದೇವೆ. GHMC ತಂಡಗಳು ವಿಮಾನ ನಿಲ್ದಾಣದ ಆವರಣದಲ್ಲಿ ನಿಯಮಿತ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಮತ್ತು 2026ರಿಂದ 21 ಬೀದಿ ನಾಯಿಗಳನ್ನು ನಿಯಂತ್ರಿಸಲಾಗಿದೆʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್ ಎಂದ ನೆಟ್ಟಿಗರು
ʼʼಮುಚ್ಚಿದ ತೊಟ್ಟಿಗಳಲ್ಲಿ ಕಡ್ಡಾಯ ವಿಲೇವಾರಿ ಸೇರಿ ಎಲ್ಲ ಸೇವಾ ಪೂರೈಕೆದಾರರಲ್ಲಿ ಕಟ್ಟುನಿಟ್ಟಾದ ತ್ಯಾಜ್ಯ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ಜಾರಿ ಮಾಡಲಾಗಿದೆ. ಇದರೊಂದಿಗೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಜಾಗರೂಕರಾಗಿರಬೇಕುʼʼ ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅಧಿಕಾರಗಳು ಸ್ಪಷ್ಟನೆ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಒಬ್ಬರು, ʼʼಇತ್ತೀಚೆಗೆ ಯಾವ ಸ್ಥಳದಲ್ಲಿ ಆಹಾರ ಸೇವಿಸುವುದಾದರೂ ನೂರು ಬಾರಿ ಯೋಚಿಸಬೇಕುʼʼ ಎಂದಿದ್ದಾರೆ. ಮತ್ತೊಬ್ಬರು, ʼʼಆಹಾರ ಸುರಕ್ಷತೆ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಹೊರಡಿಸಬೇಕುʼʼ ಎಂದು ಬರೆದುಕೊಂಡಿದ್ದಾರೆ.