ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: ರಸ್ತೆಯಲ್ಲಿ ಸ್ಟಂಟ್ ಮಾಡಿ ಪೊಲೀಸರ ಅತಿಥಿಗಳಾದ ವಿದ್ಯಾರ್ಥಿಗಳು; ವಿಡಿಯೊ ನೋಡಿ

ಹೈದರಾಬಾದ್‍ನ ಹೊರ ವರ್ತುಲ ರಸ್ತೆಯ ಮಧ್ಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಫಾರ್ಚೂನರ್, ಬಿಎಂಡಬ್ಲ್ಯು ಕಾರಿನಲ್ಲಿ ಸ್ಟಂಟ್‌ ಮಾಡಿದ್ದಾರೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ವಿದ್ಯಾರ್ಥಿಗಳ ಮುಖವನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿದ್ದಾರೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ನಡುರಸ್ತೆಯಲ್ಲಿ ಗರಗರನೇ ತಿರುಗಿದ ಐಷಾರಾಮಿ ಕಾರು; ವಿಡಿಯೊ ನೋಡಿ

car stunt video

Profile pavithra Feb 18, 2025 5:13 PM

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನದ ಮೇಲೆ ಸ್ಟಂಟ್ ಮಾಡುವ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಜನರು ರೀಲ್ಸ್‌ ಕ್ರೇಜ್‌ಗಾಗಿ, ಹೆಚ್ಚು ಲೈಕ್ ಪಡೆಯಲು ಸ್ಟಂಟ್ ಮಾಡುವ ಮೂಲಕ ತಮ್ಮ ಜೀವದ ಜತೆಗೆ ಇತರರ ಜೀವಕ್ಕೂ ಅಪಾಯ ತಂದೊಡ್ಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್‍ನ ರಸ್ತೆಯ ಮಧ್ಯದಲ್ಲಿ ಐಷಾರಾಮಿ ಕಾರುಗಳಲ್ಲಿ ಸ್ಟಂಟ್ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಫಾರ್ಚೂನರ್, ಬಿಎಂಡಬ್ಲ್ಯು ಕಾರಿನಲ್ಲಿ ರಸ್ತೆಯ ಮಧ್ಯದಲ್ಲಿ ಸ್ಟಂಟ್‌ ಮಾಡಿದ ವಿಡಿಯೊ ಸೆರೆಯಾಗಿದೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇವರು ಎಷ್ಟು ಖತರ್ನಾಕ್‌ ಎಂದರೆ ಸ್ಟಂಟ್‌ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಕಾರಿನ ನಂಬರ್ ಪ್ಲೇಟ್‌ ಕೂಡ ತೆಗೆದುಹಾಕಿದ್ದಾರೆ. ಆದರೆ ಅವರ ಮುಖಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದೀಗ ಆರ್‌ಜಿಐ ವಿಮಾನ ನಿಲ್ದಾಣ ಪೊಲೀಸರು ರಾಜೇಂದ್ರನಗರ ನಿವಾಸಿ ಮೊಹಮ್ಮದ್ ಒಬೈದುಲ್ಲಾ (25) ಮತ್ತು ಮಲಕ್ ಪೇಟೆ ನಿವಾಸಿ ಜೊಹೈರ್ ಸಿದ್ದಿಕಿ (25) ಅವರನ್ನು ಪೊಲೀಸರು ಬಂಧಿಸಿ ಅವರ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



ಶಂಶಾಬಾದ್‍ನ ರಸ್ತೆಯಲ್ಲಿ ವಿದ್ಯಾರ್ಥಿಗಳು ಎರಡು ಕಾರುಗಳಲ್ಲಿ ಸ್ಟಂಟ್ ಮಾಡಿದ್ದಾರೆ. ಈ ಕೃತ್ಯ ಅಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ವಿದ್ಯಾರ್ಥಿಗಳು ಸ್ಟಂಟ್ ಮಾಡಿದ್ದ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಳೆದ ವಾರ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಮಾಜಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ವಿ.ಸಿ.ಸಜ್ಜನರ್ ಹುಡುಗನೊಬ್ಬ ತನ್ನ ಹಿಂದೆ ಹುಡುಗಿಯೊಂದಿಗೆ ಬೈಕ್‍ನಲ್ಲಿ ವ್ಹೀಲಿಂಗ್‌ ಮಾಡಿದ್ದ ವಿಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, "ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಮಾಡಿದ ಕೆಲವು ಕ್ರೇಜಿ ಕೆಲಸಗಳು ಇವು. ಪ್ರೇಮಿಗಳ ದಿನದಂದು ಯಾವುದೋ ಒಂದು ರೀತಿಯ ಸಾಧನೆಯನ್ನು ಮಾಡಿದಂತೆ ಈ ರೀತಿಯ ಸ್ಟಂಟ್‍ಗಳನ್ನು ಮಾಡಿದ್ದಾರೆ. ಇದು ನಿಮಗೆ ತಮಾಷೆಯಾಗಿ ಕಾಣಬಹುದು. ಆದರೆ ಅಪಘಾತ ಸಂಭವಿಸಿದರೆ ಏನಾಗುತ್ತದೆ ಎಂದು ಊಹಿಸಿ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದ ಕ್ರೇಜ್‌ಗಾಗಿ ರಸ್ತೆಯಲ್ಲಿ ಇಂತಹ ಸ್ಟಂಟ್‍ಗಳನ್ನು ಮಾಡುವುದು ಅಪಾಯಕಾರಿ. ಇದರಿಂದ ನಿಮ್ಮ ಕುಟುಂಬ ಸದಸ್ಯರನ್ನು ನೋವಿಗೆ ನೂಕಬೇಡಿ ಎಂದು ಅವರು ವಿನಂತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: 'ಇವ್ರ ರೀಲ್ ಹುಚ್ಚಿಗೆ ಬೆಂಕಿ ಬೀಳ..!' : ಹೆದ್ದಾರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ – ವಿಡಿಯೊ ನೋಡಿ

ಸೋಷಿಯಲ್ ಮೀಡಿಯಾದಲ್ಲಿ (Social Media) ಬಿಟ್ಟಿ ಪ್ರಚಾರ ಮತ್ತು ಫೇಮಸ್ ಆಗುವ ಉದ್ದೇಶದಿಂದ ಕೆಲವರು ಏನೇನೋ ಹುಚ್ಚು ಸಾಹಸಗಳನ್ನು ಮಾಡುತ್ತಿರುವುದನ್ನು ನಾವು ಕೇಳುತ್ತಲೇ ಇರುತ್ತೇವೆ. ಅಂತದ್ದೇ ಒಂದು ಪ್ರಕರಣದಲ್ಲಿ ಹೆದ್ದಾರಿಯಲ್ಲಿ ಯುವಕನೊಬ್ಬ ಬೆಂಕಿಯೊಂದಿಗೆ ಸರಸವಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ ಮತ್ತು ಈ ಯುವಕನ ಈ ಹುಚ್ಚಾಟದ ಸುದ್ದಿ ಹಾಗೂ ವಿಡಿಯೊ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಫತೇಪುರದ ರಾಷ್ಟ್ರೀಯ ಹೆದ್ದಾರಿ-2ರಲ್ಲಿ (NH 2) ನಡೆದಿದ್ದು, ಶೇಖ್ ಬಿಲಾಲ್ ಎಂಬ ಯುವಕನೊಬ್ಬ ‘2024’ ಎಂದು ರಸ್ತೆಯಲ್ಲಿ ಬರೆದು ಅದರ ಮೇಲೆ ಪೆಟ್ರೋಲ್ ಸುರಿದು ಅದಕ್ಕೆ ಸ್ಟೈಲಿಷಾಗಿ ಬೆಂಕಿ ಕಡ್ಡಿ ಗೀರಿ ಬಿಸಾಕಿದ್ದಾನೆ. ಅದು ಹೊತ್ತಿ ಉರಿಯುತ್ತಿರುವುದನ್ನು ವಿಡಿಯೊ ಮಾಡಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಈ ಯುವಕನ ಈ ಕೃತ್ಯಕ್ಕೆ ಇದೀಗ ನೆಟ್ಟಿಗರು ಗರಂ ಆಗಿದ್ದು, ಈತನ ಈ ಕಿಲಾಡಿತನವನ್ನು ಟೀಕಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ಈ ವೈರಲ್ ವಿಡಿಯೋ ಕ್ಲಿಪ್‌ನಲ್ಲಿ ಈ ರೀತಿಯಾಗಿ ಬರೆಯಲಾಗಿದೆ. ‘ಶೇಖ್ ಬಿಲಾಲ್ ಎಂಬ ಯುವಕನೊಬ್ಬ ಫತೇಪುರದ ಬಳಿ, ರಾ.ಹೆ.-2ರಲ್ಲಿ ತನ್ನ ಥಾರ್ (Thar) ಗಾಡಿಯ ಮುಂದೆ ನಿಂತುಕೊಂಡು ಪೆಟ್ರೋಲ್ ಸುರಿಯುವ ಮೂಲಕ ರಸ್ತೆಗೆ ಬೆಂಕಿ ಹಚ್ಚಿದ್ದಾನೆ’ ಎಂಬ ಕ್ಯಾಪ್ಷನ್ ನೀಡಿ ಶೇರ್ ಮಾಡಲಾಗಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು, ನೆಟ್ಟಿಗರು ಈ ಯುವಕನ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಯುವಕನ ಈ ಹುಚ್ಚಾಟ ಸಾರ್ವಜನಿಕ ಸುರಕ್ಷತೆಗೆ ಭಂಗ ತಂದಿರುವುದು ಮಾತ್ರವಲ್ಲದೇ ಹಲವು ಕಾನೂನುಗಳ ಉಲ್ಲಂಘನೆಯೂ ಆಗಿದೆ.