ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಲೆಯಲ್ಲಿ ಚಿಕ್ಕ ಮಕ್ಕಳಿಂದ ಇಟ್ಟಿಗೆ ಹೊರಿಸಿದ ಶಿಕ್ಷಕಿ: ನೆಟ್ಟಿಗರಿಂದ ಆಕ್ರೋಶ

ಶಾಲೆಯ ಆವರಣದಲ್ಲಿ ಚಿಕ್ಕ ಮಕ್ಕಳ ಮೂಲಕ ಬಲವಂತವಾಗಿ ಶಿಕ್ಷಕಿ ಇಟ್ಟಿಗೆ ಹೊರಿಸುತ್ತಿರುವ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬಲವಂತವಾಗಿ ಮಕ್ಕಳಿಗೆ ಇಟ್ಟಿಗೆಗಳನ್ನು ಹೊರಿಸಿದ ಶಿಕ್ಷಕಿ

ಲಖನೌ, ಡಿ. 6: ಇತ್ತೀಚೆಗೆ ಓದಿನ ವಿಚಾರಕ್ಕಿಂತಲೂ ಹೆಚ್ಚಾಗಿ ಶಿಕ್ಷಕರು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಘಟನೆಗಳೇ ಹೆಚ್ಚಾಗುತ್ತಿದೆ. ಮಕ್ಕಳ ಕೈಗೆ ಶಿಕ್ಷಕರು ಪೊರಕೆ ಕೊಟ್ಟು ಶೌಚಾಲಯ ಕ್ಲೀನ್ ಮಾಡಿಸುತ್ತಿರುವ ಘಟನೆ ಆಗಾಗ ನಡೆಯುತ್ತಲೇ ಇರುತ್ತದೆ. ಇದರ ಬೆನ್ನಲ್ಲೇ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಇಟ್ಟಿಗೆಗಳನ್ನು ಹೊರಿಸಿದ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾಥಮಿಕ ಶಾಲಾ ಮಕ್ಕಳನ್ನು ಶಾಲೆಯ ಆವರಣದಲ್ಲಿ ಇಟ್ಟಿಗೆಗಳನ್ನು ಹೊತ್ತುಕೊಂಡು ಹೋಗಲು ಒತ್ತಾಯಿಸಲಾಗಿದೆ. ಈ ಘಟನೆ ಅಮವಾನ್ ಬ್ಲಾಕ್‌ನಲ್ಲಿರುವ ಸಂದಿ ನಾಗಿನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಮಕ್ಕಳನ್ನು ಬಾಲ ಕಾರ್ಮಿಕರಂತೆ ದುಡಿಸಿಕೊಳ್ಳುವ ಈ ದೃಶ್ಯವನ್ನು ಕಂಡ ನೆಟ್ಟಿಗರು ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಿಡಿಕಾರಿದ್ದಾರೆ. ವಿಡಿಯೊದಲ್ಲಿ ಸಮವಸ್ತ್ರ ಧರಿಸಿದ ಹಲವು ಮಕ್ಕಳು ಇಟ್ಟಿಗೆಗಳನ್ನು ಹೊರಲು ಹೆಣಗಾಡುತ್ತಿರುವುದನ್ನು ನೋಡಬಹುದು. ಚಿಕ್ಕ ಮಕ್ಕಳಲ್ಲಿ ಕೆಲವರು ದಣಿದಂತೆ ಕಾಣುತ್ತಿದ್ದರೂ, ಭಾರವಾದ ಇಟ್ಟಿಗೆಗಳನ್ನು ಹೊರಲು ಶಿಕ್ಷಕಿ ಬಲವಂತ ಪಡಿಸಿತ್ತಿರುವ ದೃಶ್ಯ ಸೆರೆಯಾಗಿದೆ.

ವಿಡಿಯೊ ನೋಡಿ:



ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರತಿಭಾ ಸಿಂಗ್ ಮಕ್ಕಳನ್ನು ಇಟ್ಟಿಗೆ ಹೊರಲು ಬಲವಂತ ಮಾಡಿಸಿದ್ದಾರೆ ಎನ್ನಲಾಗಿದೆ. ಅವರು ವಿಡಯೊ ಚಿತ್ರೀಕರಣವನ್ನು ನಿಲ್ಲಿಸಲು ಯತ್ನಿಸುತ್ತಿರುವುದನ್ನೂ ಕಾಣಬಹುದು. ಅವರು ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯ ಬಳಿ ಡಿಲೀಟ್‌ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ನಂತರ ಮಕ್ಕಳನ್ನು ಆತುರದಿಂದ ತರಗತಿಗಳ ಒಳಗೆ ಕಳುಹಿಸುತ್ತಾರೆ. ಶಾಲಾ ಮುಖ್ಯಸ್ಥರ ಈ ವರ್ತನೆಯನ್ನು ಸಾರ್ವಜನಿಕರು ಟೀಕಿಸಿದ್ದಾರೆ.

ಮದುವೆಗೆ ನಿರಾಕರಿಸಿದ್ದ ಪ್ರೇಯಸಿ: ವಿದ್ಯುತ್ ಟವರ್ ಏರಿದ ಪಾಗಲ್ ಪ್ರೇಮಿ

ಈ ಕೃತ್ಯವು ಸರಕಾರಿ ಶಾಲೆಯಲ್ಲಿ ಅಪ್ರಾಪ್ತ ಮಕ್ಕಳ ಶೋಷಣೆಯನ್ನು ಎತ್ತಿ ತೋರಿಸಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಶಿಕ್ಷಣ ನೀಡುವ ಶಿಕ್ಷಕರೇ ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದರಲ್ಲಿ ತಪ್ಪೇನು? ನಾವು ಶಾಲೆಯಲ್ಲಿಯೂ ಇಂತಹ ಕೆಲಸಗಳನ್ನು ಮಾಡುತ್ತಿದ್ದೆವು. ಬೆಳಗಿನ ಪ್ರಾರ್ಥನೆಯ ಮೊದಲು, ಎಲ್ಲ ಮಕ್ಕಳು ಒಟ್ಟಿಗೆ ಶಾಲೆಯನ್ನು ಸ್ವಚ್ಛಗೊಳಿಸುತ್ತಿದ್ದರು.. ಇದರಿಂದ ಮಕ್ಕಳು ದೈಹಿಕವಾಗಿ ಚುರುಕುಗೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ.