ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ‘ಸುಮ್ನೆ ಎಲ್ಲೆಂದ್ರಲ್ಲಿ ತಿರುಗಾಡ್ಬೇಡ..’ – ಅಣ್ಣನಿಗೆ ಪುಟ್ಟ ತಂಗಿಯ ಭಾವನಾತ್ಮಕ ಪತ್ರ

ಅಣ್ಣ-ತಂಗಿಯ ನಡುವಿನ ಬಾಂಧವ್ಯವನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಡಿಜಿಟಲ್ ಯುಗದಲ್ಲಿ ಈ ಸಂಬಂಧವೂ ಶಿಥಿಲಗೊಳ್ಳುತ್ತಿದೆಯೊ ಎಂಬ ಭೀತಿಯ ನಡುವೆಯೂ, ತಂಗಿಯೊಬ್ಬಳು ತನ್ನ ಅಣ್ಣನಿಗೆ ಬರೆದ ಪತ್ರದಲ್ಲಿ ಹಾಕಿರುವ ಕ್ಯೂಟ್ ಕಂಡೀಷನ್ಸ್‌ ನಮ್ಮ ಕಣ್ಣುಗಳನ್ನೊಮ್ಮೆ ತೇವಗೊಳಿಸದೇ ಇರಲಾರದು..!

ಪುಟ್ಟ ತಂಗಿ ತನ್ನ ಅಣ್ಣನಿಗೆ ಬರೆದ ಕ್ಯೂಟ್ ಪತ್ರ…!

ಹೈದ್ರಾಬಾದ್: ಅಣ್ಣ-ತಂಗಿಯರ ನಡುವಿನ ಬಂಧವನ್ನು ಹೀಗೆ ಎಂದು ವರ್ಣಿಸಲು ಸಾಧ್ಯವಿಲ್ಲ. ಒಟ್ಟಿಗಿದ್ದಾಗ ಕಚ್ಚಾಡುತ್ತಾ, ರಂಪಾಟ ನಡೆಸುತ್ತಾ ಇರುವವರು, ಪರಸ್ಪರ ದೂರವಾದರೆಂದರೆ ಒಬ್ಬರಿಗೊಬ್ಬರು ಕಾಳಜಿ ತೋರುತ್ತಾ ಇರುತ್ತಾರೆ. ಅಂತಹ ಒಂದು ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ವ್ಯಕ್ತಿಯೊಬ್ಬರು ತಮ್ಮ ತಂಗಿ ಬರೆದ ಭಾವನಾತ್ಮಕ ಪತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಪತ್ರ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಕೆಲಸಕ್ಕಾಗಿ ಮನೆಯಿಂದ ಹೊರ ಹೋಗಿರುವ ಅಣ್ಣನಿಗೆ ಆತನ ತಂಗಿ ಬರೆದಿರುವ ಭಾವನಾತ್ಮಕ ಪತ್ರ ಇದಾಗಿದೆ. ತೆಲುಗು (Telugu) ಮೂಲದ ಯುವಕನೊಬ್ಬ ಚೆನ್ನೈಗೆ (Chennai) ಕೆಲಸಕ್ಕೆಂದು ಹೊರಡುವ ಸಂದರ್ಭದಲ್ಲಿ ಆತನ ತಂಗಿ, ಅಣ್ಣನಿಗೆ 13 ಅಂಶಗಳ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ತನ್ನೊಂದಿಗೆ ಹೇಗೆ ರೆಗ್ಯುಲರ್ ಟಚ್‌ನಲ್ಲಿರಬೇಕೆಂಬ ವಿಚಾರವನ್ನು ಆಕೆ ಮೆನ್ಷನ್ ಮಾಡಿರುವುದು ವಿಶೇಷವಾಗಿದೆ.

‘ನನ್ನ ಪುಟ್ಟ ತಂಗಿ ಈ ಒಪ್ಪಂದವನ್ನು ನನಗಾಗಿ ಮಾಡಿದ್ದಾಳೆ. ಯಾಕಂದ್ರೆ ನಾನು ಕೆಲಕ್ಕಾಗಿ ಪಟ್ಟಣಕ್ಕೆ ಹೋಗುತ್ತಿದ್ದೇನೆ. ಆಕೆ ಈ ಫೊಟೋವನ್ನೇ ನನ್ನ ಮೊಬೈಲ್ ವಾಲ್ ಪೇಪರ್ ಮಾಡಿಟ್ಟಿದ್ದಾಳೆ, ಆ ಮೂಲಕ ನನಗೆ ಆಕೆಯ ನೆನಪು ಎಂದೆಂದೂ ಮರೆಯದಿರಲಿ ಎಂಬುದು ಆಕೆಯ ಉದ್ದೇಶವಾಗಿದೆ.’ ಎಂಬ ಭಾವನಾತ್ಮಕ ಬರಹವನ್ನು ಈ ಯುವಕ ರೆಡ್ ಇಟ್ ನಲ್ಲಿ ಶೇರ್ ಮಾಡಿದ್ದಾರೆ. ಮಾತ್ರವಲ್ಲದೇ ತನ್ನ ತಂಗಿಯ ಕೈಬರಹದಲ್ಲಿರುವ 13 ಅಂಶಗಳ ಒಪ್ಪಂದ ಪತ್ರದ ಫೊಟೋವನ್ನು ಸಹ ಆತ ಅಪ್ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಐಫೋನ್‌ನಿಂದ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡ ಮಹಾರಾಷ್ಟ್ರ DCM ಏಕನಾಥ್ ಶಿಂಧೆ!



ಈ ಒಪ್ಪಂದ ಪತ್ರದಲ್ಲಿ ಆ ತಂಗಿ ಬರೆದಿರುವ 13 ಪಾಯಿಂಟ್ಸ್ ಬಹಳ ಇಂಟರೆಸ್ಟಿಂಗ್ ಆಗಿದೆ! ಅಣ್ಣನ ಸಂಬಳದ 0.5% ಆಕೆಯ ಅಕೌಂಟಿಗೆ ಪ್ರತೀ ತಿಂಗಳು ಕ್ರೆಡಿಟ್ ಆಗುತ್ತಿರಬೇಕು. ರಾತ್ರಿ ಅಥವಾ ಹಗಲು, ದಿನದಲ್ಲಿ ಕನಿಷ್ಟ 2-3 ಸಲ ತನಗೆ ಅಣ್ಣ ಕಾಲ್ ಮಾಡ್ಬೇಕು. ನಾನು ಕರೆ ಮಾಡಿ ಮಾತನಾಡಿದಾಗ ನನ್ನ ಮೇಲೆ ಕೋಪಿಸಿಕೊಳ್ಳಬಾರದು. ಚೆನ್ನೈನಿಂದ ವಾಪಾಸು ಬರುವಾಗ ನನಗೆ ಏನಾದರೂ ತೆಗೆದುಕೊಂಡು ಬರಬೇಕು. ನನಗೆ ಪ್ರಾಮುಖ್ಯತೆ ಕೊಡಬೇೆಕೇ ವಿನಃ ನಿನ್ನ ಆ ಮೂಕಪ್ರಾಣಿ ಬೆಕ್ಕಿಗಲ್ಲ..! ಎಂಬೆಲ್ಲಾ ಷರತ್ತುಗಳನ್ನು ಆಕೆ ತನ್ನ ಅಣ್ಣನಿಗೆ ವಿಧಿಸಿದ್ದಾಳೆ.

ತನ್ನ 10ನೇ ತರಗತಿ ಪರೀಕ್ಷೆಗಳು ಮುಗಿದ ಬಳಿಕ ತನ್ನನ್ನೊಮ್ಮೆ ಚೆನ್ನೈಗೆ ಕರೆದುಕೊಂಡು ಹೋಗುವಂತೆಯೂ ಆಕೆ ತನ್ನ ಅಣ್ಣನ ಬಳಿ ಡಿಮ್ಯಾಂಡ್ ಇಟ್ಟಿದ್ದಾಳೆ. ನನಗೊಂದು ಕಾದಂಬರಿ ಪುಸ್ತಕ/ರಿತ್ವಿಕ್ ಸಿಂಗ್ ನ ಕವನ ಪುಸ್ತಕವನ್ನು ತಂದುಕೊಡುವಂತೆಯೂ ಆಕೆ ಅಣ್ಣನಲ್ಲಿ ಬೇಡಿಕೆಯಿಟ್ಟಿದ್ದಾಳೆ.

ಆದರೆ ಇದೆಲ್ಲಕ್ಕಿಂತಲೂ ಹೆಚ್ಚಾಗಿ ಆಕೆಯ ಕೊನೆಯ ಕೆಲವು ಕಂಡಿಷನ್ ಗಳು ಈ ಪತ್ರವನ್ನು ಓದುವ ಎಲ್ಲರ ಕಣ್ಣುಗಳನ್ನೂ ತೇವಗೊಳಿಸುವಂತಿದೆ. ಮನೆಯಿಂದ ದೂರವಿರುವ ಸಂದರ್ಭದಲ್ಲಿ ಅಣ್ಣ ಆತನ ಕಾಳಜಿಯನ್ನು ಚೆನ್ನಾಗಿ ವಹಿಸಿಕೊಳ್ಳಬೇಕು. ‘ಊಟ ಮಾಡದೇ ಇರಬೇಡ. ಸರಿಯಾಗಿ ವ್ಯಾಯಾಮ ಮಾಡು. ನಿನ್ನ ತೂಕವನ್ನು ಕಡಿಮೆ ಮಾಡಿಕೋ. ಇಡಿಯೆಟ್ ತರ ಸಿಕ್ಕಿದಲ್ಲೆಲ್ಲಾ ತಿರುಗಾಡ್ಬೇಡ! ಸರಿಯಾಗಿ ನಿದ್ರೆ ಮಾಡು..!’ ಎಂದು ಈ ಪುಟ್ಟ ತಂಗಿ ತನ್ನ ಅಣ್ಣನ ಬಗ್ಗೆ ಕಾಳಜಿ ವಹಿಸಿದ್ದಾಳೆ.

ರೆಡ್ ಇಟ್‌ನಲ್ಲಿ ಈ ಪೋಸ್ಟ್ ಓದಿದ ಹಲವರು, ಅಣ್ಣ-ತಂಗಿ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ‘ಹೆಲೋ.. ನಾನು ನಿನ್ನ ತಂಗಿ ನೇಮಿಸಿದ ಲಾಯರ್ ನೀನು ಈ ಎಲ್ಲಾ ಕಂಡಿಷನ್ ಗಳನ್ನು ಸರಿಯಾಗಿ ಫಾಲೋ ಮಾಡ್ಬೇಕು. ಇಲ್ಲದಿದ್ದಲ್ಲಿ ನಾನು ನಿನ್ನ ಮೇಲೆ ಕೇಸು ದಾಖಲಿಸುತ್ತೇನೆ. ತಮಾಷೆಗಾಗಿ ಹೇಳಿದ್ದು, ಇದು ನಾನು ಇಂದು ನೋಡಿದ ಕ್ಯೂಟ್ ವಿಷಯಗಳಲ್ಲಿ ಒಂದಾಗಿದೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.