ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿದ್ದ ಮಹಿಳೆಯ ಜೀವ ರಕ್ಷಕರಾದ ಆರ್‌ಪಿಎಫ್ ಸಿಬ್ಬಂದಿ; ವಿಡಿಯೋ ನೋಡಿ

Viral Video: ಚಲಿಸುವ ರೈಲು ಹತ್ತಲು ಪ್ರಯತ್ನಿಸುವಾಗ ಜಾರಿಬಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಆರ್‌ಪಿಎಫ್ ಸಿಬಂದಿಯು ರಕ್ಷಿಸಿದ್ದ ಘಟನೆ ತಮಿಳುನಾಡಿನ ಈರೋಡ್ ಜಂಕ್ಷನ್‌ನಲ್ಲಿ ನಡೆದಿದೆ‌‌. ಮಹಿಳೆಯ ಅಜಾಗರೂಕತೆಯಿಂದ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತು. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ. ಸದ್ಯ ಈ ಕುರಿತಾರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಈ ರೋಡ್ ರೈಲ್ವೇ ಸ್ಟೇಷನ್ ನಲ್ಲಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿದೆ. ರೈಲ್ವೇ ಸಚಿವಾಲಯವು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಚಲಿಸುವ ರೈಲು ಹತ್ತಲು ಹೋದ ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ

ವೈರಲ್ ವಿಡಿಯೊ -

Profile Pushpa Kumari Nov 3, 2025 6:14 PM

ತಮಿಳುನಾಡು: ರೈಲಿನಲ್ಲಿ ಪ್ರಯಾಣಮಾಡುವುದು ಬಜೆಟ್ ಫ್ರೆಂಡ್ಲಿ ಮತ್ತು ಪ್ರಯಾಣ ಕೂಡ ಹೆಚ್ಚು ತ್ರಾಸವಾಗಿರಲಾರದು ಎಂಬುದು ಬಹುತೇಕರ ನಿಲುವು. ಅಂತೆಯೇ ರೈಲು ಪ್ರಯಾಣ ಸುಖಕರವಾಗಿದ್ದರೂ ಎಷ್ಟು ಜಾಗೃತಿ ವಹಿಸಿದರು ಅದು ಕಡಿಮೆ ಎಂದು ಹೇಳಬಹುದು. ರೈಲು ಪ್ರಯಾಣದ ವೇಳೆ ಆಯಾ ತಪ್ಪಿ ಕೆಳಗೆ ಬೀಳುವುದು, ರೈಲು ಹತ್ತುವ ಗಡಿಬಿಡಿಯಲ್ಲಿ ಕೆಳಗೆ ಅಪಘಾತ, ಅವಘಡ ನಡೆಯುತ್ತಲೆ ಇರುತ್ತದೆ. ಅಂತೆಯೇ ಚಲಿಸುವ ರೈಲು ಹತ್ತಲು ಪ್ರಯತ್ನಿಸುವಾಗ ಜಾರಿಬಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಆರ್‌ಪಿಎಫ್ (Railway Protection Force) ಸಿಬಂದಿಯು ರಕ್ಷಿಸಿದ್ದ ಘಟನೆ ತಮಿಳುನಾಡಿನ ಈರೋಡ್ ಜಂಕ್ಷನ್‌ನಲ್ಲಿ (Tamil Nadu Erode Junction) ನಡೆದಿದೆ‌‌. ಮಹಿಳೆಯ ಅಜಾಗರೂಕತೆಯಿಂದ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತು. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿ ದಂತಾಗಿದೆ. ಸದ್ಯ ಈ ಕುರಿತಾರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಚಲಿಸುವ ರೈಲನ್ನು ಹತ್ತಲು ಮಹಿಳೆಯೊಬ್ಬಳು ಪ್ರಯತ್ನಿಸಿದ್ದನ್ನು ಕಾಣಬಹುದು. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಆಕೆ ಬ್ಯಾಲೆನ್ಸ್ ಕಳೆದುಕೊಂಡು ಫ್ಲಾಟ್‌ಫಾರ್ಮ್ ಮತ್ತು ರೈಲಿನ ಫುಟ್‌ಬೋರ್ಡ್ ನಡುವಿನ ಅಂತರದಲ್ಲಿ ಸಿಲುಕುತ್ತಾಳೆ. ಸ್ವಲ್ಪ ಆಯ ತಪ್ಪಿದರೂ ರೈಲಿನ ಅಡಿಗೆ ಸಿಲುಕುವ ಸಾಧ್ಯತೆ ಇತ್ತು‌. ಆಗ ಆರ್‌ಪಿಎಫ್ ಸಿಬ್ಬಂದಿಯೊಬ್ಬರು ಎಚ್ಚೆತ್ತುಕೊಂಡು ಮಹಿಳೆಯ ಕಡೆಗೆ ವೇಗವಾಗಿ ಧಾವಿಸಿದ್ದಾರೆ‌‌. ಈ ಮೂಲಕ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದೆ ವಿಡಿಯೋವನ್ನು ರೈಲ್ವೇ ಸಚಿವಾಲಯವು ಪೋಸ್ಟ್ ಮಾಡಿದೆ.

ವೈರಲ್ ವಿಡಿಯೊ ಇಲ್ಲಿದೆ:



ತಮಿಳುನಾಡಿನ ಈ ರೋಡ್ ರೈಲ್ವೇ ಸ್ಟೇಷನ್ ನಲ್ಲಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿದೆ. ರೈಲ್ವೇ ಸಚಿವಾಲಯವು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ (Twitter X) ಖಾತೆಯಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಘಟನೆಯೂ ಬಹಳ ಭೀಕರವಾಗಿದ್ದು, ಅಧಿ ಕಾರಿಯ ತ್ವರಿತ ಕ್ರಮವನ್ನು ಕಂಡು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಮೂಲಕ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ, ಚಲಿಸುವ ರೈಲಿನಿಂದ ಎಂದಿಗೂ ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ಬರೆದುಕೊಂಡಿದ್ದ ಪೋಸ್ಟ್ ಅನ್ನು ರೈಲ್ವೆ ಸಚಿವಾಲಯವು ವಿಡಿಯೋ ಜೊತೆಗೆ ಹಂಚಿ ಕೊಂಡಿದ್ದಾರೆ.

ಇದನ್ನು ಓದಿ:Viral Video: ಪಾಕಿಸ್ತಾನದಲ್ಲಿ ಕೇವಲ 20 ರೂ. ಸಿಗುತ್ತೆ ಹೊಟೇಲ್‌ ರೂಂ! ಇದರ ಅವಸ್ಥೆ ಹೇಗಿದೆ ಗೊತ್ತಾ?

ರೈಲು ಸಂಪೂರ್ಣವಾಗಿ ನಿಂತಾಗ ಮಾತ್ರವೇ ಪ್ರಯಾಣಿಕರು ಹತ್ತುವುದು ಅಥವಾ ಇಳಿಯುದನ್ನು ಮಾಡಬೇಕು‌‌. ಜನರಿಗೆ ರೈಲಿನ ಸಾಮಾನ್ಯ ನಿಯಮಗಳ ಬಗ್ಗೆ ಅರಿವಿರಬೇಕು‌. ಇಲ್ಲವಾದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ‌. ಚಲಿಸುವ ರೈಲಿನೊಡನೆ ದುಸ್ಸಾಹಸ ಮಾಡದಿರಿ.. ಪ್ರಾಣಾಪಾಯಕ್ಕೆ ಸಿಲುಕದಿರಿ ಎಂಬರ್ಥದಲ್ಲಿ ಪೋಸ್ಟ್ ಬರೆದು ಅದನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕರು ಅಂತಹ ಅಪಾಯಕಾರಿ ನಡವಳಿಕೆಯನ್ನು ತಪ್ಪಿಸುವಂತೆ ಕೂಡ ಒತ್ತಾಯಿಸಿದ್ದಾರೆ.

ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತರತರನಾಗಿ ಕಾಮೆಂಟ್ ವ್ಯಕ್ತವಾಗುತ್ತಿದೆ. ಮಹಿಳೆಯ ಪಾಲಿಗೆ ರಕ್ಷಣಾ ಸಿಬಂದಿ ರಿಯಲ್ ಹೀರೊ ಆಗಿದ್ದಾರೆ ಎಂದು ಬಳಕೆದಾರ ರೊಬ್ಬರು ಕಾಮೆಂಟ್ ಹಾಕಿದ್ದಾರೆ. ಮತ್ತೊಬ್ಬರು ಆರ್‌ಪಿಎಫ್ ಸಿಬಂದಿ ತನ್ನ ಪ್ರಾಣ ಲೆಕ್ಕಿಸದೆ ದೇವರಂತೆ ಆಕೆಯನ್ನು ಕಾಪಾಡಿದ್ದಾನೆ ಇನ್ನಾದರು ಜನ ಜಾಗೃತೆ ವಹಿಸಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.