ಬೆಂಗಳೂರು, ಡಿ. 12: 2026ರ ಆರಂಭವಾಗುತ್ತಿದ್ದಂತೆಯೇ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹೊಸ ಟ್ರೆಂಡಿಂಗ್ ಹಾಡುಗಳು, ಅರ್ಥಪೂರ್ಣ ಘೋಷ ವಾಕ್ಯಗಳು, ಹಾಸ್ಯಭರಿತವಾದ ಮೀಮ್ಸ್ ಹೀಗೆ ಹಲವು ವುಚಾರಗಳು ವೈರಲ್ (Viral News) ಆಗುತ್ತಿವೆ. ಅದರಲ್ಲೂ ಅತ್ಯಂತ ಅರ್ಥಪೂರ್ಣವಾದ ಟ್ರೆಂಡ್ ಒಂದು ಸದ್ದು ಮಾಡುತ್ತಿದೆ. ಅದೇ 365 ಬಟನ್ಸ್. ಹೌದು, 365 ಬಟನ್ಸ್ ಸಂಗ್ರಹ ಮಾಡುವ ಮೂಲಕ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುವ ಈ ಹೊಸ ಟ್ರೆಂಡ್ ಲಕ್ಷಾಂತರ ಜನರ ಗಮನ ಸೆಳೆದಿದೆ.
365 ಬಟನ್‌ಗಳು ಹೆಸರಿನಿಂದ ಟ್ರೆಂಡ್ ಆಗಿರುವ ಇದು ಮೊದಲ ಬಾರಿಗೆ ಕೇಳುವಾಗ ಸಾಮಾನ್ಯ ಅಂತ ಎನಿಸಬಹುದು. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ವೈಯಕ್ತಿಕ ಬದಲಾವಣೆ ಮತ್ತು ಸ್ವಯಂ-ಜವಾಬ್ದಾರಿಯ ಬಗ್ಗೆ ಹೆಚ್ಚಿನ ಸಂದೇಶವನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈ ಟ್ರೆಂಡ್ ಜನ್ಮತಾಳಿದ್ದು ಟಿಕ್‌ಟಾಕ್ ಮೂಲಕ. 2025ರ ಡಿಸೆಂಬರ್ ಕೊನೆಯಲ್ಲಿ ಅಬ್ಬಿ ಕೀಲರ್ ಎಂಬವರು ಶೇರ್ ಮಾಡಿದ್ದ ವಿಡಿಯೊಗೆ 'ತಮಾರಾ' ಎಂಬ ಯುವತಿ ಒಂದು ಪ್ರತಿಕ್ರಿಯೆ ನೀಡುವ ಮೂಲಕ ಹೆಚ್ಚು ಸುದ್ದಿಯಾಯಿತು. ʼʼನಾನು 2026ರ ಪ್ರತಿ ದಿನಕ್ಕಾಗಿ ಒಟ್ಟು 365 ಬಟನ್‌ಗಳನ್ನು ಕೊಳ್ಳಲಿದ್ದೇನೆ. ನನ್ನ ಸಮಯವನ್ನು ನಾನು ಹೇಗೆ ಕಳೆಯಲಿದ್ದೇನೆ ಎಂಬ ಬಗ್ಗೆ ಅರಿವು ಮೂಡಿಸಿಕೊಳ್ಳಲು ಇದು ಸಹಕಾರಿʼʼ ಎಂದು ಅವರು ಬರೆದಿದ್ದರು.
ವಿಡಿಯೊ ನೋಡಿ:
ಅವರ ಕಮೆಂಟ್ ವೀಕ್ಷಕರ ಕುತೂಹಲ ಕೆರಳಿಸಿದೆ. ಅವರು ಈ ಬಟನ್ ಮೂಲಕ ಏನು ಮಾಡಲು ಯೋಜಿಸುತ್ತಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ನೀವು ಅವುಗಳನ್ನು ಸಂಗ್ರಹಿಸುತ್ತೀರಾ? ಅವುಗಳನ್ನು ಬಟ್ಟೆಗೆ ಜೋಡಿಸುತ್ತೀರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ತಮಾರಾ "ಅದು ನನಗೂ ಗೊತ್ತಿಲ್ಲ, ಅದರ ಬಗ್ಗೆ ಯಾರಿಗೂ ವಿವರಿಸುವ ಅಗತ್ಯ ಇಲ್ಲʼʼ ಎಂದು ಉತ್ತರಿಸಿದ್ದರು. ಅವರ ಈ ಪ್ರಾಮಾಣಿಕ ಉತ್ತರವನ್ನೇ ಜನರು ಒಪ್ಪಿಕೊಂಡಿದ್ದರು.
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಮುಂದೇನಾಯ್ತು? ಇಲ್ಲಿದೆ ಭಯಾನಕ ವಿಡಿಯೊ
ಈ ಟ್ರೆಂಡ್ ಇಷ್ಟೊಂದು ವೈರಲ್ ಆಗಲು ಕಾರಣಗಳೇನು?
ಇಂದಿನ ಕಾಲದಲ್ಲಿ ಎಲ್ಲರೂ ಪ್ರತಿಯೊಂದು ಸಣ್ಣ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈ ಟ್ರೆಂಡ್, "ನನ್ನ ಬದುಕು, ನನ್ನ ಸಿದ್ದಾಂತ...ಯಾರಿಗೂ ಹೇಳಿ ಕೊಳ್ಳುವ ಅಗತ್ಯ ಇಲ್ಲʼʼ ಎಂಬುದನ್ನು ಸೂಚಿಸುತ್ತದೆ.
ದಿನಕ್ಕೊಂದು ಬಟನ್ ಅನ್ನು ಇಟ್ಟುಕೊಳ್ಳುವುದು ಅಥವಾ ಕೆಲಸದ ಮೇಜಿನ ಮೇಲಿಡುವುದು, ಅಂದು ಕಳೆದ ಸಮಯದ ಬಗ್ಗೆ ಮೂಡಿಸುವ ಜವಾಬ್ದಾರಿ ಆಗಿದೆ. ಹಾಗೆಯೇ ನಮಗೆ ನಾವೇ ಕೊಟ್ಟುಕೊಳ್ಳುವ ಗೌರವದ ಸಂಕೇತ ಕೂಡ ಹೌದು. ತಮ್ಮ ವೈಯಕ್ತಿಕ ಗುರಿಗಳನ್ನು ಯಾರಿಗೂ ಹೇಳದೆ ಗುಟ್ಟಾಗಿಟ್ಟುಕೊಳ್ಳುವುದು ಮತ್ತು ಆ ಮೂಲಕ ತಾವೇ ಮಾನಸಿಕ ನೆಮ್ಮದಿ ಕಂಡುಕೊಳ್ಳುವುದು ಈ ಟ್ರೆಂಡ್‌ನ ಮುಖ್ಯ ಉದ್ದೇಶ. ಈಗಾಗಲೇ ಸಾವಿರಾರು ಜನರು ಈ ಬಣ್ಣಬಣ್ಣದ ಬಟನ್‌ಗಳನ್ನು ಖರೀದಿಸಿ ಫೋಟೊ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಇದನ್ನು ʼಮಾನಸಿಕ ಆರೋಗ್ಯದ ಸಂಕೇತʼ ಎಂದು ಕರೆದಿದ್ದಾರೆ.