ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದ್ವೆ ದಿರಿಸಿನಲ್ಲಿ ವಧುವಿನ ಸಖತ್‌ ಡಾನ್ಸ್‌- ವಿಡಿಯೊ ಫುಲ್‌ ವೈರಲ್‌

ಮದುವೆಯ ಡ್ರೆಸ್ ಧರಿಸಿ ಅಲಂಕರಿಸಿಕೊಂಡಿದ್ದ ವಧು ವೇದಿಕೆಯ ಹೊರಗೆ 'ಮೇ ಜಲೋ' ಹಾಡಿಗೆ ಮೂವರು ಹುಡುಗಿಯರೊಂದಿಗೆ ಹೆಜ್ಜೆ ಹಾಕಿದ್ದಾಳೆ. ಅವಳ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ನವದೆಹಲಿ: ಸೋಶಿಯಲ್ ಮೀಡಿಯಾಗಳಲ್ಲಿ ಮದುವೆ, ವಧು-ವರರಿಗೆ ಸಂಬಂಧಪಟ್ಟ ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಮದುವೆಯ ದಿನ ವಧು-ವರರ ನೃತ್ಯ, ಜಗಳ, ಹೊಡೆದಾಟಕ್ಕೆ ಸಂಬಂಧಪಟ್ಟ ಇಂತಹ ಹಲವಾರು ವಿಡಿಯೊಗಳು ಈ ಹಿಂದೆ
ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದ್ದವು. ಇದೀಗ ವಧು(Bride Dance)ವೊಬ್ಬಳು ಸಿಂಗಾರ ಮಾಡಿಕೊಂಡು ವೇದಿಕೆಯ ಹೊರಗೆ ನೃತ್ಯ ಮಾಡುವುದು ಸೆರೆಯಾಗಿದೆ. ಅವಳ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ನೆಟ್ಟಿಗರು ಈ ವಿಡಿಯೊ ನೋಡಿ ಫುಲ್‌ ಫಿದಾ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೊದಲ್ಲಿ ವಧು ತನ್ನ ಮದುವೆಯ ಲೆಹೆಂಗಾವನ್ನು ಧರಿಸಿ, 'ಮೇ ಜಲೋ' ಹಾಡಿಗೆ ಸಖತ್‌ ಆಗಿ ಸೊಂಟ ಬಳುಕಿಸಿದ್ದಾಳೆ. ವೈರಲ್ ಆದ ವಿಡಿಯೊದಲ್ಲಿ ವಧು ತನ್ನ ಕೆಂಪು ಲೆಹಂಗಾದಲ್ಲಿ ಮೂವರು ಹುಡುಗಿಯರೊಂದಿಗೆ ಹೆಜ್ಜೆ ಹಾಕಿದ್ದಾಳೆ.

ವಧುವಿನ ಡಾನ್ಸ್‌ ವಿಡಿಯೊ ಇಲ್ಲಿದೆ ನೋಡಿ...

ವಿಡಿಯೊದಲ್ಲಿ ವಧು ಕೆಂಪು ಮತ್ತು ಬಿಳಿ ಬಳೆಗಳು, ಹೂವಿನ ಹಾರಗಳಿಂದ ಅಲಂಕರಿಸಿಕೊಂಡಿದ್ದು, ತಲೆಗೆ ಮ್ಯಾಚ್‌ ಆಗುವ ದುಪಟ್ಟಾ ಧರಿಸಿದ್ದಾಳೆ. ಆದರೆ ಇಲ್ಲಿ ಎಲ್ಲರ ಗಮನ ಸೆಳೆದದ್ದು ಅವಳ ಡ್ರೆಸ್ಸಿಂಗ್ ಸ್ಟೈಲ್ ಮಾತ್ರವಲ್ಲ, ಅವಳ ನೃತ್ಯದ ಮೇಲಿನ ಪ್ರೀತಿ! ಈ ವಿಡಿಯೊ ಈಗ ವೈರಲ್ ಆಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ನೆಟ್ಟಿಗರು ಹಾರ್ಟ್‌ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಕೆಲವರು ಅವಳ ಡ್ಯಾನ್ಸ್‌ ನೋಡಿ "ಅದ್ಭುತ" ಎಂದು ಹಾಡಿ ಹೊಗಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನೀರಿನಲ್ಲಿ ಸಖತ್‌ ಆಗಿ ಸ್ವಿಮ್‌ ಮಾಡಿದ ಗೂಬೆ; ನೆಟ್ಟಿಗರು ಫುಲ್ ಶಾಕ್- ವಿಡಿಯೊ ನೋಡಿ

ಈ ಹಿಂದೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಧು ವರರು ಮದುವೆಯ ದಿನ ಡ್ಯಾನ್ಸ್ ಮಾಡಿದ ಹಲವು ವಿಡಿಯೊಗಳು ವೈರಲ್ ಆಗಿದ್ದವು. ಇತ್ತೀಚೆಗಷ್ಟೇ ಮದುವೆಯ ದಿನ ವರನೊಬ್ಬ ಖುಷಿಯಿಂದ ಕುಣಿದು ಕುಪ್ಪಳಿಸಿದ ವಿಡಿಯೊಂದು ಸಖತ್‌ ಸದ್ದು ಮಾಡಿತ್ತು. ವರನು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದಾನೆ.ಆದರೆ ಅದು ವಧುವನ್ನು ಮುಜುಗರಕ್ಕೀಡು ಮಾಡಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿತ್ತು. ವಿಡಿಯೊದಲ್ಲಿ ವರನು ವಧುವಿನ ಬಳಿಗೆ ಬಂದ ಕೂಡಲೇ ಡ್ಯಾನ್ಸ್ ಮಾಡುತ್ತಾ ವಧುವನ್ನು ಕೂಡ ಡ್ಯಾನ್ಸ್‌ವಂತೆ ಸನ್ನೆ ಮಾಡಿ ಕರೆದಿದ್ದಾನೆ. ಆದರೆ ಅವಳು ಡ್ಯಾನ್ಸ್‌ ಮಾಡದೇ ಸುಮ್ಮನಾಗಿದ್ದಾಳೆ. ವರ ಮಾತ್ರ ಇದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಅತಿಥಿಗಳ ಮನೋರಂಜನೆಗಾಗಿ ಸಖತ್‌ ಆಗಿ ಕುಣಿದಿದ್ದಾನೆ.