Viral Video: ನೀರಿನಲ್ಲಿ ಸಖತ್ ಆಗಿ ಸ್ವಿಮ್ ಮಾಡಿದ ಗೂಬೆ; ನೆಟ್ಟಿಗರು ಫುಲ್ ಶಾಕ್- ವಿಡಿಯೊ ನೋಡಿ
ಗೂಬೆಯೊಂದು ನೀರಿನಲ್ಲಿ ಸರಾಗವಾಗಿ ಈಜುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ಬೆರಗುಗೊಳಿಸಿದೆ. ಈ ವಿಡಿಯೊ ನೋಡಿ ಕೆಲವರು ಇದು ನಿಜವಾದ ವಿಡಿಯೊ ಅಲ್ಲ AI- ರಚಿತ ವಿಡಿಯೊವಾಗಿದೆ ಎಂದು ಹೇಳಿದ್ದಾರೆ.


ಇತ್ತೀಚೆಗೆ ಸಿಂಹವೊಂದು ಆಕಾಶದಲ್ಲಿ ಹಾರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ ಈಗ ಗೂಬೆ(Owl Swims)ಯೊಂದು ನೀರಿನಲ್ಲಿ ಈಜುತ್ತಿರುವ ದೃಶ್ಯವೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ಗೂಬೆಗಳು ರಾತ್ರಿಯ ವೇಳೆ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಗೂಬೆ ಹಗಲಿನ ವೇಳೆ ನೀರಿನಲ್ಲಿ ಸಖತ್ ಆಗಿ ಸ್ವಿಮ್ಮಿಂಗ್ ಮಾಡಿದೆ.. ಈ ವಿಷಯ ಕೇಳಿ ಆಶ್ಚರ್ಯವಾಯ್ತಾ...? ಹೌದು ಗೂಬೆಯೊಂದು ನೀರಿನಲ್ಲಿ ಈಜುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅವರಲ್ಲಿ ಹಲವರು ಇದು AI- ರಚಿತವಾಗಿದೆ ಎಂದು ಹೇಳಿದರೆ, ಇತರರು ರಾತ್ರಿಯಲ್ಲಿ ಮಾತ್ರ ಸಂಚರಿಸುವ ಪಕ್ಷಿ ನಿಜವಾಗಿಯೂ ಈಜುವ ಸಾಮರ್ಥ್ಯ ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇಂತಹ ಬಹಳ ಅಪರೂಪದ ದೃಶ್ಯವನ್ನು 'ಗೂಬೆ ಸ್ಯಾನಿಟಿ' ಎಂಬ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೊದಲ್ಲಿ ಗೂಬೆಯೊಂದು ರಕ್ಕೆಯ ಸಹಾಯದಿಂದ ಮನುಷ್ಯರಂತೆ ಮೇಲಕ್ಕೆ - ಕೆಳಕ್ಕೆ ಹೋಗುತ್ತಾ ಈಜುವುದು ಸೆರೆಯಾಗಿದೆ. ಆದರೆ ಇದು ನಿಜವಾದ ಘಟನೆಯಾ ಅಥವಾ AI ರಚಿಸಿದ ವಿಡಿಯೊ? ಎಂಬುದು ಸ್ಪಷ್ಟವಾಗಿಲ್ಲ!
ಗೂಬೆ ನೀರಿನಲ್ಲಿ ಈಜುತ್ತಿರುವ ವಿಡಿಯೊ ಇಲ್ಲಿದೆ ನೋಡಿ...
ವಿಡಿಯೊವನ್ನು ಕೂಲಂಕೂಷವಾಗಿ ನೋಡಿದ ನೆಟ್ಟಿಗರು ಗೂಬೆಯ ರೆಕ್ಕೆಗಳು ಒದ್ದೆಯಾಗಿ ಅಥವಾ ಭಾರವಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.ಇನ್ನು ಕೆಲವರು ಇದನ್ನು AI ರಚಿಸಿದ ವಿಡಿಯೊ ಎಂದು ಹೇಳಿದ್ದಾರೆ. ಒಬ್ಬ ನೆಟ್ಟಿಗರು, “ಇದು AI ರಚಿಸಿದ್ದು, ಗೂಬೆಗಳಿಗೆ ಈಜಲು ಬರುವುದಿಲ್ಲ, ಕಾರಣ ಅವುಗಳಿಗೆ ಜಲನಿರೋಧಕ ಗರಿಗಳಿಲ್ಲ ಮತ್ತು ಈಜಲು ಸಹಾಯ ಮಾಡಲು ಬೆರಳುಗಳ ನಡುವೆ ಪೊರೆಯಿಲ್ಲ, ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಎಲ್ಲವನ್ನೂ ನಂಬಬೇಡಿ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ರೆಕ್ಕೆ ಗಾಯಗೊಂಡಂತೆ ಕಾಣುತ್ತಿದೆ... ಅದು ಈಜುತ್ತಿದೆಯೇ ಎಂದು ನನಗೆ ಖಚಿತವಿಲ್ಲ" ಎಂದು ಹೇಳಿದ್ದಾರೆ."ಇದು AI ರಚಿಸಿದ ವಿಡಿಯೊ - ನೀರಿನ ವಿರುದ್ಧ ರೆಕ್ಕೆಗಳನ್ನು ಬಡಿಯುವುದರಿಂದ ನೀರು ಚಿಮ್ಮುವುದಿಲ್ಲ" ಎಂದು ಮೂರನೆಯವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಡಾಲಿ ಚಾಯ್‍ವಾಲಾಗೆ ಪ್ರತಿಸ್ಪರ್ಧಿ ಈ ಬಾದಾಮಿ ಹಾಲು ಮಾರಾಟಗಾರ; ವಿಡಿಯೊ ನೋಡಿ
ಆದರೆ ಈ ವಿಡಿಯೊವನ್ನು ಪೂರ್ತಿ ಸುಳ್ಳು ಎಂದು ನಂಬುವುದಕ್ಕೆ ಆಗುವುದಿಲ್ಲ.ಯಾಕೆಂದರೆ 2007ರಲ್ಲಿ ನ್ಯಾಷನಲ್ ಜಿಯಾಗ್ರಫಿಕ್‍ನ ವಿಡಿಯೊವೊಂದು ಗೂಬೆಗಳು ಈಜಬಲ್ಲವು ಎಂದು ಸೂಚಿಸಿದೆ. ಅದೇ ರೀತಿ, ಅಮೆರಿಕದ ಬ್ಯಾರಿಂಗ್ಟನ್‍ನಲ್ಲಿರುವ ಫ್ಲಿಂಟ್ ಕ್ರೀಕ್ ವನ್ಯಜೀವಿ ಪುನರ್ವಸತಿ ಸಂಸ್ಥೆಯ 2011 ರ ಬ್ಲಾಗ್ ಗ್ರೇಟ್ ಹಾರ್ನ್ಡ್ ಗೂಬೆಗಳು ನಿಜಕ್ಕೂ ಈಜುವ ಸಾಮರ್ಥ್ಯವನ್ನು ಹೊಂದಿವೆ ಎಂದು ದೃಢಪಡಿಸಿದೆ. ಆದರೆ ಅದು ಅಗತ್ಯವಿದ್ದಾಗ ಮಾತ್ರ ಈಜುತ್ತವೆ. ಆದರೆ ಅದು ಅವು ಸಾಮಾನ್ಯವಾಗಿ ಮಾಡುವ ಕೆಲಸವಲ್ಲ ಎಂದಿದೆ.