Viral Video: ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಅಭ್ಯರ್ಥಿ; ಗೇಟ್ ಮುಚ್ಚಿರುವುದನ್ನು ನೋಡಿ ಮಾಡಿದ್ದೇನು?
ಬಿಹಾರದ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿದ ಮಹಿಳಾ ಅಭ್ಯರ್ಥಿಯೊಬ್ಬಳು ಗೇಟ್ ಮುಚ್ಚಿರುವುದನ್ನು ಕಂಡು ಆಕೆ ಧೃತಿಗೆಡದೆ ಗೇಟ್ ಕೆಳಗಿರುವ ಸಣ್ಣ ಅಂತರದಲ್ಲಿ ಮಲಗಿಕೊಂಡು ಒಳಗೆ ನುಸುಳಿದ್ದಾಳೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಪಾಟ್ನಾ: ಬಿಹಾರದ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿದ ಮಹಿಳಾ ಅಭ್ಯರ್ಥಿಯೊಬ್ಬಳು ಗೇಟ್ ಮುಚ್ಚಿರುವುದನ್ನು ಕಂಡು ಒಳಗೆ ಹೋಗಲು ಸಖತ್ ಆದ ಒಂದು ಫ್ಲ್ಯಾನ್ ಮಾಡಿದ್ದಾಳೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ.
ಆಕೆ ಪರೀಕ್ಷಾ ಸ್ಥಳಕ್ಕೆ ಬಂದಾಗ ಗೇಟ್ ಮುಚ್ಚಿತ್ತು. ಇದರಿಂದ ಆಕೆ ಕೋಪಗೊಳ್ಳಲಿಲ್ಲ, ಅಳಲಿಲ್ಲ. ಬದಲಾಗಿ ಅವಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ತನ್ನ ಬುದ್ದಿವಂತಿಕೆಯನ್ನು ಬಳಸಿದ್ದಾಳೆ. ವೈರಲ್ ವಿಡಿಯೊದಲ್ಲಿ ಅವಳು ಮಾಡಿದ ಉಪಾಯವನ್ನು ಸೆರೆಹಿಡಿಯಲಾಗಿದೆ. ಆಕೆ ನೆಲದ ಮೇಲೆ ಮಲಗಿ ಗೇಟಿನ ಕೆಳಗಿರುವ ಸಣ್ಣ ಅಂತರದ ಮೂಲಕ ಒಳಗೆ ನುಸುಳಿದ್ದಾಳೆ. ಈ ದೃಶ್ಯ ವಿಡಿಯೊದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಅಲ್ಲಿದ್ದ ಕೆಲವು ಜನರು ಆಕೆಗೆ ಗೇಟ್ ಕೆಳಗೆ ನುಸುಳಲು ಸಹಾಯ ಮಾಡಿದ್ದಾರೆ. ಅವರು ಅವಳನ್ನು ಬಿಡಲು ಬಂದ ಆಕೆಯ ಸಂಬಂಧಿಕರು ಎಂದು ಹೇಳಲಾಗಿದೆ.
ತಡವಾಗಿ ಬಂದರೂ, ಅವಳು ಕಷ್ಟಪಟ್ಟು ಪರೀಕ್ಷಾ ಆವರಣವನ್ನು ಪ್ರವೇಶಿಸಿದಳು. ಆದರೆ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆಯೇ ಎಂಬುದು ತಿಳಿದಿಲ್ಲ. ಈ ಘಟನೆಯು ರಾಜ್ಯದ ನವಾಡಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆದರೆ ಅವಳು ಯಾವ ಪರೀಕ್ಷೆ ಬರೆಯಲು ಹೋಗಿದ್ದಾಳೆ ಎಂಬ ಬಗ್ಗೆ ವಿವರಗಳು ತಿಳಿದಿಲ್ಲ.
ಗೇಟ್ ಮತ್ತು ನೆಲದ ನಡುವಿನ ಕಿರಿದಾದ ಅಂತರದ ಮೂಲಕ ಆಕೆ ದೇಹವನ್ನು ನುಗ್ಗಿಸಿದ್ದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಇದಕ್ಕೆ ಅನೇಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವಳು ಗೇಟ್ ಒಳಗೆ ನುಸುಳುವುದನ್ನು ನೋಡಿ ಕೆಲವರು ಜೋರಾಗಿ ನಕ್ಕರೆ, ಇತರರು ಒಳಗೆ ಹೋಗಿ ಪರೀಕ್ಷೆಗೆ ಹಾಜರಾಗಲು ಅವಳ ಮಾಡಿದ ಪ್ರಯತ್ನವನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Student Death: ಪರೀಕ್ಷೆ ಮುಗಿಸಿ ಬರುತ್ತಿದ್ದ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
"ಚೆನ್ನಾಗಿ ಓದಿ ಮುಂದೆ ಸಾಗಲು ಪ್ರಯತ್ನಿಸುತ್ತಿರುವವರನ್ನು ಯಾರೂ ಹಿಂದಕ್ಕೆ ಎಳೆಯಲು ಸಾಧ್ಯವಿಲ್ಲ. ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಪ್ರಗತಿ ಸಾಧಿಸುವವರು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾರೆ ಎಂದು ಒಬ್ಬರು ಬರೆದಿದ್ದಾರೆ. ಕೆಲವು ನೆಟ್ಟಿಗರು ಪ್ರತಿಕ್ರಿಯಿಸಿ, "ಇದು ಬಿಹಾರಕ್ಕೆ ಸ್ವಾಗತ... ಬಿಹಾರವು ಆರಂಭಿಕರಿಗಾಗಿ ಅಲ್ಲ" ಎಂದು ಬರೆದಿದ್ದಾರೆ.