ಲಖನೌ: ಹಾವು-ಮುಂಗುಸಿ ಕಿತ್ತಾಡಿಕೊಳ್ಳುವ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತವೆ. ಇದೀಗ ಹಾವು ಮತ್ತು ಮುಂಗುಸಿಯ ನಡುವಿನ ಭೀಕರ ಕಾದಾಟದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದೆ. ಜನರು ಈ ಇಬ್ಬರು ಶತ್ರುಗಳ ನಡುವಿನ ಹೋರಾಟವನ್ನು ನೋಡಲು ರಸ್ತೆಯ ಮಧ್ಯದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. ಈ ಭೀಕರ ಕಾದಾಟವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಔರೈಯಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈರಲ್ ಆದ ವಿಡಿಯೊದಲ್ಲಿ ಹಾವು ಮತ್ತು ಮುಂಗುಸಿ ಎರಡು ಪರಸ್ಪರ ಹಿಂಸಾತ್ಮಕವಾಗಿ ದಾಳಿ ಮಾಡುವುದು ಸೆರೆಯಾಗಿದೆ. ವಿಡಿಯೊದಲ್ಲಿ ಕರಿ ನಾಗರಹಾವು ತನ್ನ ಹೆಡೆಯನ್ನು ಬಿಚ್ಚಿ ಮುಂಗುಸಿ ಜತೆ ಹೋರಾಡುತ್ತಿತ್ತು. ಮುಂಗುಸಿ ಕೂಡ ಹೆದರದೇ ದಾಳಿ ಮಾಡಿ ಹಾವನ್ನು ರಸ್ತೆಯ ಪಕ್ಕದಲ್ಲಿರುವ ಹೊಲಕ್ಕೆ ಎಳೆದುಕೊಂಡು ಹೋಗಿತ್ತು.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನಸೆಳೆದು ವೈರಲ್ ಆಗಿದೆ ಹಾಗೂ ಅನೇಕರು ಈ ವಿಡಿಯೊ ಕಂಡು ಪ್ರತಿಕ್ರಿಯಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
#Auraiya
— News1India (@News1IndiaTweet) July 17, 2025
सड़क पर ब्लैक कोबरा व नेवले की फाइट देख ठहर गया आवागमन
कोबरा और नेवले की फाइट का वीडियो सोशल मीडिया पर वायरल#Wildlife #SnakeVsMongoose #ViralVideo #AuraiyaNews pic.twitter.com/RwJmIQ9upB
ಈ ಸುದ್ದಿಯನ್ನೂ ಓದಿ:Viral Video: ಸರ್ಕಾರದ ಪ್ರಧಾನ ಕಚೇರಿ ಎದುರೇ ರಾಜಾರೋಷವಾಗಿ ಹುಕ್ಕಾ ಸೇದಿದ ಕಿಡಿಗೇಡಿ; ವಿಡಿಯೋ ನೋಡಿ
ಬೆಕ್ಕು ಮತ್ತು ಹಾವಿನ ನಡುವಿನ ಕಾದಾಟದ ವಿಡಿಯೊವೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನೆಟ್ಟಿಗರ ಕುತೂಹಲವನ್ನು ಕೆರಳಿಸಿದ ಈ ಕಾದಾಟ ಕೊನೆಗೆ ಅನಿರೀಕ್ಷಿತ ತಿರುವು ಪಡೆದುಕೊಂಡು ಎಲ್ಲರನ್ನೂ ಬೆರಗಾಗುವಂತೆ ಮಾಡಿತ್ತು. ವೈರಲ್ ವಿಡಿಯೊದಲ್ಲಿ ಕಾಂಪೌಂಡ್ ಒಳಗೆ ಹಾವು ತೆವಳುತ್ತಾ ಬರುವುದನ್ನು ನೋಡಿದ ಬೆಕ್ಕು ಕುತೂಹಲದಿಂದ, ಹಾವನ್ನು ಹಿಂಬಾಲಿಸಿದೆ. ಆದರೆ ಗೋಡೆಯ ಕಡೆಗೆ ತೆವಳುತ್ತಿದ್ದ ಹಾವು ಇದ್ದಕ್ಕಿದ್ದಂತೆ ತನ್ನ ದಿಕ್ಕನ್ನು ಬದಲಾಯಿಸಿ ಬೆಕ್ಕಿನ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಿದೆ. ಹಾವು ಬೆಕ್ಕಿನ ಜತೆ ಸೆಣಸಾಡುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.