ಬಾಲಕನ ತಟ್ಟೆಯಲ್ಲಿದ್ದ ರಸಗುಲ್ಲಾ ಕಸಿದ ವ್ಯಕ್ತಿ: ಛೀಮಾರಿ ಹಾಕಿದ ನೆಟ್ಟಿಗರು
Viral Video: ಮದುವೆ ಸಮಾರಂಭವೊಂದರಲ್ಲಿ ಬಾಲಕನೊಬ್ಬ ರಸಗುಲ್ಲಾ ಸವಿಯುತ್ತಿದ್ದಾಗ ವ್ಯಕ್ತಿಯೊಬ್ಬ ಕಿತ್ತುಕೊಂಡು ತಿಂದಿದ್ದಾನೆ. ಇದರಿಂದ ಬೇಸೆತ್ತ ಮಗು ಕಣ್ಣೀರಿಟ್ಟಿದೆ. ಆರಂಭದಲ್ಲಿ ನಗೆಪಾಟಲಿಗೆ ಈಡಾದ ಘಟನೆಯಂತೆ ಕಂಡರೂ ಮಗುವಿಗೆ ದುಃಖದ ಕ್ಷಣವಾಗಿ ಪರಿಣಮಿಸಿದೆ. ಈ ವಿಡಿಯೊ ನೋಡಿದ ಹಲವು ನೆಟ್ಟಿಗರು ವ್ಯಕ್ತಿಯ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸಗುಲ್ಲಾ ಕಳೆದುಕೊಂಡು ಬೇಸರ ವ್ಯಕ್ತಪಡಿಸಿದ ಬಾಲಕ -
ನವದೆಹಲಿ, ಮಾ. 23: ಭಾರತೀಯ ವಿವಾಹವೊಂದರಲ್ಲಿ ನಡೆದ ಘಟನೆಯೊಂದು ಭಾರೀ ಆಕ್ರೋಶಕ್ಕೆ ಕಾರಣವಾಗುವಂತೆ ಮಾಡಿದೆ. ಮದುವೆ ಸಮಾರಂಭವೊಂದರಲ್ಲಿ ಬಾಲಕನೊಬ್ಬ ರಸಗುಲ್ಲಾ ಸವಿಯುತ್ತಿದ್ದಾಗ ವ್ಯಕ್ತಿಯೊಬ್ಬ ಅದನ್ನು ಕಿತ್ತುಕೊಂಡು ತಿಂದಿದ್ದಾನೆ. ಇದರಿಂದ ಬೇಸತ್ತ ಮಗು ಕಣ್ಣೀರಿಟ್ಟಿದೆ. ಆರಂಭದಲ್ಲಿ ನಗೆಪಾಟಲಿಗೆ ಈಡಾದ ಘಟನೆಯಂತೆ ಕಂಡರೂ ಮಗುವಿಗೆ ದುಃಖದ ಕ್ಷಣವಾಗಿ ಪರಿಣಮಿಸಿತ್ತು. ಈ ವಿಡಿಯೊ (Viral News) ನೋಡಿದ ಹಲವು ನೆಟ್ಟಿಗರು ವ್ಯಕ್ತಿಯ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಮಗುವೊಂದು ತನ್ನ ತಟ್ಟೆಯಲ್ಲಿದ್ದ ರಸಗುಲ್ಲಾವನ್ನು ತಿನ್ನಲು ಸಿದ್ಧವಾಗಿತ್ತು. ಈ ವೇಳೆ ಎಂಟ್ರಿ ಕೊಟ್ಟ ವ್ಯಕ್ತಿ ಆ ಬಾಲಕನ ತಟ್ಟೆಯಿಂದ ರಸಗುಲ್ಲಾ ಕಸಿದು ಬಾಯಿಗೆ ಹಾಕಿಕೊಂಡಿದ್ದಾನೆ. ಇದನ್ನು ಕಂಡು ಬಾಲಕ ಕ್ಷಣಾರ್ಧದಲ್ಲಿ ಅಳಲು ಪ್ರಾರಂಭಿಸಿದ್ದಾನೆ. ರಸಗುಲ್ಲಾವನ್ನು ಕದ್ದ ನಂತರ ಪುಟ್ಟ ಮಗು ಅಳುತ್ತಿರುವುದನ್ನು ನೋಡುವಾಗ ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ. ಮಗುವಿನ ಅಸಹಾಯಕತೆ ನೋಡಿ ಇತರರು ಅಪಹಾಸ್ಯ ಮಾಡುತ್ತಿರುವುದು ಕಂಡು ಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೊ ನೋಡಿ:
ಈ ಘಟನೆಯ ನಂತರ ಅಲ್ಲಿದ್ದ ಅತಿಥಿಗಳು ಮಗುವನ್ನು ನೋಡಿ ನಗಲಾರಂಭಿಸಿದರು. ಮಗುವಿನ ಕಣ್ಣಲ್ಲಿ ಮೂಡಿದ ಭಾವನೆ ನೋಡುಗರ ಮನಸ್ಸು ಕರಗುವಂತೆ ಮಾಡಿದೆ. ಮಗುವಿನ ದುಃಖದ ಪ್ರತಿಕ್ರಿಯೆಯ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಜನರು ರಸಗುಲ್ಲಾವನ್ನು ಕದ್ದ ವ್ಯಕ್ತಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ʼʼನೆಟ್ಟಿಗರೊಬ್ಬರು ಇದು ತಮಾಷೆಯಲ್ಲ... ಪುರುಷರು ತುಂಬಾ ಅಪ್ರಬುದ್ಧವಾಗಿ ವರ್ತಿಸುತ್ತಿದ್ದಾರೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಮಗುವಿನ ಜತೆ ಹೇಗೆ ವರ್ತಿಸಬೇಕೆಂಬ ಸಾಮಾನ್ಯ ಜ್ಞಾನ ಇಲ್ಲʼʼ ಎಂದು ಎಂದು ಕಿಡಿ ಕಾರಿದ್ದಾರೆ.