ನರಸಿಂಗ್‌ಪುರ,ಜ. 25: ಇತ್ತೀಚೆಗೆ ಮಹಿಳೆಯರ ರಕ್ಷಣೆ ಕುರಿತಂತೆ ಕಠಿಣ ಕಾನೂನು ಕ್ರಮಗಳನ್ನು ಜಾರಿ ಮಾಡಿದ್ರು ಮಹಿಳೆಯರ ಶೋಷಣೆ ಕಡಿಮೆಯಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯೊಬ್ಬಳನ್ನು ಇಬ್ಬರು ಯುವಕರು ಚುಡಾಯಿಸಿದ ಘಟನೆ ಕಂಡು ಬಂದಿದೆ. ಬಾಲಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಚಾರ ತಿಳಿದ ಮಧ್ಯಪ್ರದೇಶದ ನರಸಿಂಗ್‌ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬುದ್ಧಿ ಕಲಿಸಿದ್ದಾರೆ.ಆರೋಪಿಗಳಿಗೆ ಹೆಣ್ಣು ಮಕ್ಕಳಂತೆ ಜಡೆಯನ್ನು ಹಾಕಿಸಿ ಎಲ್ಲರ ಮುಂದೆ ಕ್ಷಮೆ ಕೇಳಿಸಿದ್ದು ಈ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.
ನರಸಿಂಗ್‌ಪುರದಲ್ಲಿ ಶಾಲೆಗೆ ಹೋಗುವ ಬಾಲಕಿಯನ್ನು ಇಬ್ಬರು ಪುರುಷರು 'ಮಾಲ್-ಮಾಲ್' ಎಂದು ಚುಡಾಯಿಸಿದ್ದಾರೆ. ಇದನ್ನು ತಿಳಿದ ಮಧ್ಯ ಪ್ರದೇಶ ಪೊಲೀಸರು ಅವರನ್ನು ಬಂಧಿಸಿ ಮಹಿಳೆಯರ ವಿರುದ್ದ ಜಾಗೃತಿ ಮೂಡಿಸುವ ಮತ್ತು ಸಾರ್ವಜನಿಕ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ವಿಡಂಬನಾತ್ಮಕ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಆರೋಪಿಗಳಿಗೆ ಹೆಣ್ಣು ಮಕ್ಕ ಳಂತೆ ಜಡೆ ಹಾಕಿಸಿ ಸಾರ್ವಜನಿಕವಾಗಿ ಕ್ಷಮೆ ಕೇಳಿಸಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಈ ವೀಡಿಯೊ 237,000 ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.
ವಿಡಿಯೋ ನೋಡಿ:
ಆರೋಪಿಗಳಿಬ್ಬರೂ ತಮ್ಮ ಮೋಟಾರ್‌ಬೈಕ್‌ನಲ್ಲಿ ಟೀಸಿಂಗ್ ಮಾಡಲು ಮಹಿಳೆಯರನ್ನು ಹುಡುಕುತ್ತಾ ಬಸ್ ನಿಲ್ದಾಣದ ಆವರಣಕ್ಕೆ ಪ್ರವೇಶಿಸುವುದನ್ನು ಕಾಣಬಹುದು. ವಿದ್ಯಾರ್ಥಿನಿ ಯೊಬ್ಬಳನ್ನು ಉದ್ದೇಶಿಸಿ ಈ ಐಟಂ ಹೇಗಿದೆ? ಎಂದು ಕೂಗುತ್ತಾ ಅವಮಾನ ಮಾಡಿದ್ದರು. ಪುರುಷರಲ್ಲಿ ಒಬ್ಬರು ನನ್ನೊಂದಿಗೆ ಡೇಟಿಂಗ್ ಮಾಡಲು ಬಾ ಎಂದು ತಿರಸ್ಕಾರ ಮಾಡಿದ್ದಾನೆ.
Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!
ಇವರ ಈ ಅಸಭ್ಯ ವರ್ತನೆಯ ದೃಶ್ಯಗಳು ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಮಧ್ಯಪ್ರದೇಶ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದು ಹೆಣ್ಣು ಮಕ್ಕಳಂತೆ ಜಡೆ ಹಾಕಿಸಿ ಕ್ಷಮೆಯಾಚಿಸುವ ವೀಡಿಯೊವನ್ನು ಬಿಡುಗಡೆ ಮಾಡಿದರು.
ಇಬ್ಬರೂ ಆರೋಪಿಗಳ ತಲೆಗೂದಲನ್ನು ಹೆಣ್ಣು ಮಕ್ಕಳಂತೆ ಎರಡು ಜಡೆ ಹಾಕಿಸಿ ಪೊಲೀಸರು ಸಿಂಗರಿಸಿದ್ದಾರೆ. ಇದೇ ಅವತಾರದಲ್ಲಿ ಆರೋಪಿಗಳು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಇಂತವರಿಗೆ ಹೀಗೆಯೇ ಶಿಕ್ಷೆ ನೀಡಬೇಕೆಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಟೀಸಿಂಗ್ ಮಾಡುವವರಿಗೆ ಇಂತಹ ಮಾನಸಿಕ ಶಿಕ್ಷೆಯೇ ಸರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.