Viral News: ಬ್ಯಾಂಕ್ ಹೊಂದಿರುವ ಒಟ್ಟು ಮೊತ್ತ ಬೇಕು ಎಂದು ಚೆಕ್‌ನಲ್ಲಿ ಬರೆದ ಮಹಿಳೆ: ಮುಂದೇನಾಯ್ತು?
ಬ್ಯಾಂಕಿನಿಂದ ಹಣವನ್ನು ಪಡೆಯಲು ಮಹಿಳೆಯೊಬ್ಬರು ಬರೆದ ಚೆಕ್‍ನಲ್ಲಿ ತಪ್ಪಾಗಿದ್ದು, ಆ ಚೆಕ್ ಪೋಟೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆ ಚೆಕ್ ನೋಡಿ ಅನೇಕರು ಬಿದ್ದು ಬಿದ್ದು ನಕ್ಕಿದ್ದಾರೆ. ಹಾಗಾದ್ರೆ ಅದರಲ್ಲಿ ಆ ಮಹಿಳೆ ಏನು ಬರೆದಿದ್ದಾಳೆ ಎಂಬುದನ್ನು ನೋಡಿ.
ಹೊಸದಿಲ್ಲಿ: ಬ್ಯಾಂಕಿಗೆ ಹೋದಾಗ ಹಣ ವಿತ್‍ಡ್ರಾ ಮಾಡಲು ಪ್ರತಿಯೊಬ್ಬರು ತಮ್ಮ ಚೆಕ್ ಬರೆದು ನೀಡಬೇಕು. ಆದರೆ ಬ್ಯಾಂಕಿನಿಂದ ಹಣವನ್ನು ಪಡೆಯಲು ಮಹಿಳೆಯೊಬ್ಬಳು ಬರೆದ ಚೆಕ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral News) ಆಗಿದೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಚೆಕ್ ನಿಜವಾದುದೇ ಎಂಬುದು ಸ್ಪಷ್ಟವಾಗಿಲ್ಲ. @smartprem19 ಎಂಬ ನೆಟ್ಟಿಗರು ಚೆಕ್‍ನ ಫೋಟೋದೊಂದಿಗೆ ವಿಡಿಯೊವನ್ನು ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿದಾಗ, ಇದು ಐಡಿಬಿಐ ಬ್ಯಾಂಕ್‍ನ ಚೆಕ್‍ನಂತೆ ಕಾಣುತ್ತದೆ. ಅಂದಹಾಗೇ, ಈ ಚೆಕ್ ಭರ್ತಿ ಮಾಡಿದ ಮಹಿಳೆಯ ಹೆಸರು ಸಂಗೀತಾ.
ಹೆಸರಿನ ಜಾಗದಲ್ಲಿ ಸಂಗೀತಾ ಎಂಬ ಮಹಿಳೆಯ ಹೆಸರನ್ನು ಸರಿಯಾಗಿಯೇ ಭರ್ತಿ ಮಾಡಿದ್ದಾಳೆ. ಆದರೆ ಮೊತ್ತವನ್ನು ಬರೆಯಬೇಕಾದ ಸ್ಥಳದಲ್ಲಿ, ಆಕೆ "ಬ್ಯಾಂಕ್ ಹೊಂದಿರುವ ಒಟ್ಟು ಹಣ" ಎಂದು ಬರೆದಿದ್ದಾಳೆ. ಮೇಲ್ನೋಟಕ್ಕೆ ಇದು ನಿಜವಾದ ಚೆಕ್‌ನಂತೆ ಕಾಣುತ್ತದೆ. ಈ ಪೋಸ್ಟ್ ಅನ್ನು ಹಂಚಿಕೊಂಡವರು, "ಸಂಗೀತಾ ಏನು ಮಾಡಿದಳು? ಅವಳು ಇಡೀ ಬ್ಯಾಂಕ್ ಅನ್ನು ಖಾಲಿ ಮಾಡಿದಳು!" ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೊಗೆ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಚೆಕ್ ನೋಡಿದ ಕ್ಯಾಷಿಯರ್ ಮೂರ್ಛೆ ಹೋಗಿರಬೇಕು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೊಬ್ಬರು ಈ ಚೆಕ್ ನೋಡಿದ ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಹೃದಯಾಘಾತವಾಗಿರಬಹುದು ಎಂದು ತಮಾಷೆ ಮಾಡಿದ್ದಾರೆ. ಕೆಲವರು ಚೆಕ್‍ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಇದು ನಕಲಿ ಎಂದು ಹೇಳಿದ್ದಾರೆ. ಇತರರು ಈ ಘಟನೆ ವೈರಲ್ ಆಗಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬಳು ಬರೆದ ಡೆಪಾಸಿಟ್ ಸ್ಲಿಪ್ ಪೋಟೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಮಹಿಳೆ ನಗದು/ಚೆಕ್ ವಿಭಾಗದಲ್ಲಿ, "ನಾನು ನನ್ನ ಗಂಡನೊಂದಿಗೆ ಜಾತ್ರೆಗೆ ಹೋಗಬೇಕಾಗಿದೆ" ಎಂದು ಬರೆದಿದ್ದಳು. ಇದಲ್ಲದೇ ಆಕೆ ಡೆಪಾಸಿಟ್ ಅಮೌಂಟ್ ಬದಲು "ಕುಂಭ" ಮತ್ತು ಒಟ್ಟು ಮೊತ್ತವನ್ನು "ಕುಂಭ ಮೇಳ!" ಎಂದು ಬರೆದಿದ್ದಳು.