ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕುಡಿದ ಮತ್ತಿನಲ್ಲಿ ಯುವತಿ ಪೊಲೀಸ್ ಜೊತೆ ಫುಲ್‌ ಕಿರಿಕ್‌! ವಿಡಿಯೊ ನೋಡಿದ್ರೆ ಶಾಕ್‌ ಆಗ್ತೀರಿ

23ವರ್ಷದ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಪೊಲೀಸ್ ವ್ಯಾನ್ ಗ್ಲಾಸ್‍ ಅನ್ನು ಒಡೆದ ಘಟನೆ ಕೊಚ್ಚಿಯ ಪಲರಿವಟ್ಟಂ ಬಳಿ ಮಧ್ಯರಾತ್ರಿ ವೇಳೆ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video)ಆಗಿದೆ.

ಕುಡಿದ ಮತ್ತಿನಲ್ಲಿ ಪೊಲೀಸ್‌ ವ್ಯಾನ್‌ ಪುಡಿಗಟ್ಟಿದ ಯುವತಿ!

ಸಾಂದರ್ಭಿಕ ಚಿತ್ರ

Profile pavithra Feb 14, 2025 11:21 AM

ಕೊಚ್ಚಿ: ಕುಡಿದ ಮತ್ತಿನಲ್ಲಿ ಗಾಡಿ ಓಡಿಸಿ ಅನೇಕ ಅವಾಂತರ ಮಾಡಿದ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಇದೀಗ ಅಂತಹದ್ದೇ ಪ್ರಕರಣ ಮತ್ತೊಂದು ನಡೆದಿದೆ. 23ವರ್ಷದ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿದೆ. ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಪೊಲೀಸ್ ವಾಹನವನ್ನು ಹಾನಿಗೊಳಿಸಿದ ಆರೋಪದ ಮೇಲೆ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಗುರುವಾರ (ಫೆಬ್ರವರಿ 13)ಬಂಧಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ, ಯುವತಿ ಪೊಲೀಸ್‌ ವ್ಯಾನ್‍ ಮೇಲೆ ದಾಳಿ ಮಾಡುವುದು ಸೆರೆಯಾಗಿದೆ. ಆಕೆ ವ್ಯಾನ್‍ನ ಗ್ಲಾಸ್‍ ಅನ್ನು ಒಡೆದಿದ್ದಲ್ಲದೇ ಪೊಲೀಸರ ಬಳಿ ವಾದಮಾಡಿದ್ದಾಳೆ. ಇದನ್ನು ದಾರಿಹೋಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ವರದಿಗಳ ಪ್ರಕಾರ, ಕೋಝಿಕೋಡ್‍ನ 23 ವರ್ಷದ ರೆಸ್ಲಿನ್ ಪೊಲೀಸ್ ವ್ಯಾನ್‍ ಅನ್ನು ಧ್ವಂಸಗೊಳಿಸಿ ವ್ಯಾನಿನ ಕಿಟಕಿಯನ್ನು ತನ್ನ ಮೊಬೈಲ್ ಫೋನ್‍ನಿಂದ ಒಡೆದಿದ್ದಾಳೆ. ಪಲರಿವಟ್ಟಂ ಬಳಿ ಈ ಘಟನೆ ನಡೆದಿದೆ. ಪಲರಿವಟ್ಟಂ ಸಂಸ್ಕಾರ ಜಂಕ್ಷನ್ ಬಳಿ ಯುವತಿ ಮತ್ತು ಆಕೆಯ ಸ್ನೇಹಿತ ದಾರಿಹೋಕರಿಗೆ ಚಾಕು ಹಿಡಿದು ಕಿರುಕುಳ ನೀಡುತ್ತಿದ್ದಾರೆ ಮತ್ತು ಬೆದರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ಇವರಿಬ್ಬರು ಮದ್ಯದ ಅಮಲಿನಲ್ಲಿದ್ದರಂತೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದಾಗ ಇಬ್ಬರೂ ಪೊಲೀಸರೊಂದಿಗೆ ವಾದಕ್ಕಿಳಿದಿದ್ದಾರಂತೆ. ಈ ಹಿನ್ನೆಲೆಯಲ್ಲಿ ರೆಸ್ಲಿನ್ ಸ್ನೇಹಿತ ಪಲರಿವಟ್ಟಂ ಮೂಲದ ಪ್ರವೀಣ್ ಎಂಬಾತನನ್ನು ಬಂಧಿಸಲಾಗಿದೆ. ಆದರೆ ಮಹಿಳಾ ಅಧಿಕಾರಿಯ ಅನುಪಸ್ಥಿತಿಯಿಂದಾಗಿ ರೆಸ್ಲಿನ್ ಅನ್ನು ಆ ಸಮಯದಲ್ಲಿ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ನಡುವೆ ಸ್ನೇಹಿತನನ್ನು ಬಂಧಿಸಿದ್ದಕ್ಕೆ ಕೋಪಗೊಂಡ ಯುವತಿ ತನ್ನ ಮೊಬೈಲ್ ಫೋನ್ ಬಳಸಿ ಪೊಲೀಸ್ ವ್ಯಾನ್‍ ಕಿಟಕಿಯನ್ನು ಒಡೆದು ಹಾಕಿದ್ದಾಳೆ.



ನಂತರ ಮಹಿಳಾ ಅಧಿಕಾರಿಗಳು ಯುವತಿಯನ್ನು ಸಹ ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕೂಡ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ‘ಮುನ್ನಾ ಲಾಲ್ ಫುಲ್ ಮಾಲ್... ಮಾಲ್..’ ಕುಡಿದು ತೂರಾಡುತ್ತಾ ಸ್ಕೂಲಿಗೆ ಬಂದ ಪ್ರಿನ್ಸಿಪಾಲ್; ವಿಡಿಯೋ ಇದೆ

ನಶೆಯಲ್ಲಿ ತೂರಾಡಿದ ಪ್ರಿನ್ಸಿಪಾಲ್‌

ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ನಶೆಯೇರಿಸಿಕೊಂಡು ತರಗತಿಗಳಿಗೆ ಬರುತ್ತಿರುವ ಸುದ್ದಿಗಳು ಸಾಮಾನ್ಯವೆಂಬಂತಾಗಿದೆ. ಅಂತಹದ್ದೇ ಒಂದು ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವರದಿಯಾಗಿದ್ದು, ಇಲ್ಲಿನ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ಮದ್ಯದ ನಶೆಯಲ್ಲಿ ತೂರಾಡುತ್ತಾ ಶಾಲೆಯ ಮೆಟ್ಟಿಲು ಹತ್ತಲು ಹರಸಾಹಸಪಡುತ್ತಿರುವ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದ ಹಾಗೆ ಈ ಘಟನೆ ರೇವಾ ಜಿಲ್ಲೆಯ ಜವಾಹ್ ಸರಕಾರಿ ಶಾಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದ್ದು, ಮದ್ಯದ ನಶೆಯಲ್ಲಿ ತೂರಾಡುತ್ತಾ ಶಾಲೆಗೆ ಬಂದು ವಿಡಿಯೋದಲ್ಲಿ ಸೆರೆಯಾದ ಪ್ರಾಂಶುಪಾಲರನ್ನು ಮುನ್ನಾ ಲಾಲ್ ಕೊಲ್ ಎಂದು ಗುರುತಿಸಲಾಗಿದೆ.

ಈ ವೈರಲ್ ವಿಡಿಯೋದಲ್ಲಿ ರೆಕಾರ್ಡ್ ಆಗಿರುವಂತೆ, ನಿವೃತ್ತಿ ಅಂಚಿನಲ್ಲಿರುವಂತೆ ತೋರುವ, ಸಾಂಪ್ರದಾಯಿಕ ಕುರ್ತಾ ಪೈಜಾಮದಲ್ಲಿರುವ ವ್ಯಕ್ತಿಯೊಬ್ಬ ತೂರಾಡಿಕೊಂಡು ಶಾಲೆಯ ಮೆಟ್ಟಿಲ ಬಳಿ ನಿಲ್ಲಲೂ ಆಗದ ಸ್ಥಿತಿಯಲ್ಲಿರುವುದು ಮತ್ತು ಬ್ಯಾಲೆನ್ಸ್ ತಪ್ಪಿ ಬೀಳುತ್ತಿರುವುದು, ಮತ್ತೆ ಕಷ್ಟಪಟ್ಟು ಎದ್ದೇಳುತ್ತಿರುವುದು ಮತ್ತೆ ಬೀಳುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.