Viral News: ಬ್ರೇಕ್ ಅಪ್ ಮಾಡಿಕೊಂಡ ಪ್ರೇಯಸಿ... ಸಿಟ್ಟಿಗೆದ್ದ ಪಾಗಲ್ ಪ್ರೇಮಿ ಮಾಡಿದ್ದೇನು ಗೊತ್ತಾ?
ಮಾಜಿ ಸೈನಿಕನೊಬ್ಬ ಬ್ರೇಕ್ ಅಪ್ ಮಾಡಿಕೊಂಡ ತನ್ನ ಮಾಜಿ ಗೆಳತಿ ಮತ್ತು ಅವಳ ಸಂಗಾತಿಯನ್ನು ಎರಡು ವರ್ಷಗಳ ಕಾಲ ಹಿಂಬಾಲಿಸಿ, ಅವರ ಆಸ್ತಿಯನ್ನು ನಾಶ ಮಾಡಿ ಶಿಕ್ಷೆಗೆ ಒಳಗಾಗಿದ್ದಾನೆ. ಆದರೆ ಇದೀಗ ಆತ ಜೈಲಿನಿಂದ ತಪ್ಪಿಸಿಕೊಂಡಿದ್ದಾನಂತೆ. ಈ ವಿಚಾರ ಕೇಳಿ ಆತನ ಮಾಜಿ ಗೆಳತಿ ಮತ್ತು ಅವಳ ಸಂಗಾತಿ ತಮ್ಮ ಸುರಕ್ಷತೆಯ ಬಗ್ಗೆ ಭಯಭೀತರಾಗಿದ್ದಾರೆ. ಈ ಸುದ್ದಿ ವೈರಲ್(Viral News) ಆಗಿದೆ.

ಸಾಂದರ್ಭಿಕ ಚಿತ್ರ

ಪ್ರೀತಿಸಿ ಬ್ರೇಕಪ್ ಮಾಡಿಕೊಂಡ ಮಾಜಿ ಪ್ರೇಮಿಗೆ ಯುವತಿಯೊಬ್ಬಳು ಇತ್ತೀಚೆಗೆ 100 ಪಿಜ್ಜಾ ಕ್ಯಾಶ್ ಆನ್ ಡೆಲಿವೆರಿ ಕೊಟ್ಟು ಸೇಡು ತೀರಿಸಿಕೊಂಡ ಘಟನೆ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಈಗ ಅಂತಹದ್ದೇ ಮತ್ತೊಂದು ಸುದ್ದಿ ವೈರಲ್ ಆಗಿದೆ. ತನ್ನ ಮಾಜಿ ಗೆಳತಿ ಮತ್ತು ಅವಳ ಸಂಗಾತಿಯನ್ನು ಎರಡು ವರ್ಷಗಳ ಕಾಲ ಹಿಂಬಾಲಿಸಿ, ಮಾಜಿ ಸೈನಿನೋರ್ವ ಆಕೆಯ ಮನೆಯನ್ನು ಧ್ವಂಸಗೊಳಿಸಿದ್ದಾನೆ. ಇದೇ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯನ್ನೂ ವಿಧಿಸಲಾಗಿತ್ತು. ಆದರೆ ಇತ್ತೀಚೆಗೆ ಆತ ಜೈಲಿನಿಂದ ತಪ್ಪಿಸಿಕೊಂಡಿದ್ದಾನಂತೆ. ತನ್ನ ಮಾಜಿ ಗೆಳೆಯ ತಪ್ಪಿಸಿಕೊಂಡ ವಿಚಾರ ಕೇಳಿ ಗೆಳತಿ ಮತ್ತು ಅವಳ ಸಂಗಾತಿ ಇಬ್ಬರೂ ಶಾಕ್ ಆಗಿದ್ದಾರಂತೆ.
ಮಾಜಿ ಸೈನಿಕ ಸ್ಟುವರ್ಟ್ ಸ್ಪೈರ್ಸ್ (52) ಜೈಲಿನಿಂದ ತಪ್ಪಿಸಿಕೊಂಡ ನಂತರ ಆತನ ಮಾಜಿ ಗೆಳತಿ ಜೆಸ್ ಆಡಮ್ಸ್ (36) ಮತ್ತು ಅವಳ ಸಂಗಾತಿ ಜೋಡಿ ಹ್ಯಾರಿಸ್ (32) ಮನೆಯನ್ನು ಶಿಫ್ಟ್ ಮಾಡಲು ಮುಂದಾಗಿದ್ದಾರಂತೆ. ಆತ ಮಾಜಿ ಗೆಳತಿಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಆತ ಶಿಕ್ಷೆಗೊಳಗಾಗಿದ್ದು, ಇತ್ತೀಚೆಗೆ ಸ್ಪೈರ್ಸ್ ಜೈಲಿನಿಂದ ತಪ್ಪಿಸಿಕೊಂಡಿದ್ದಾನಂತೆ. ಜೆಸ್ ಸ್ಪೈರ್ಸ್ ಅವನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಆತ ಅವಳಿಗೆ ಕಿರುಕುಳ ನೀಡಲು ಶುರುಮಾಡಿದ್ದಾನಂತೆ. ಆಕೆ ಕೆಲಸಕ್ಕೆ ಹೋಗುವಾಗ ಹಿಂಬಾಲಿಸಿಕೊಂಡು ಬಂದು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೂ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನಂತೆ.
ಜೆಸ್ ಮತ್ತು ಜೋಡಿ ಅವರು 2022 ರಲ್ಲಿ ಡೇಟಿಂಗ್ ಶುರು ಮಾಡಿದ ನಂತರ ಸ್ಪೈರ್ಸ್ ನಡವಳಿಕೆಯಲ್ಲಿ ಮತ್ತಷ್ಟೂ ಬದಲಾವಣೆ ಕಂಡುಬಂದಿತಂತೆ. ಇವರ ಕಾರುಗಳನ್ನೂ ಆತ ಹಾಳು ಮಾಡಿದ್ದಾನಂತೆ. ಕೊನೆಗೆ ಕ್ರಿಮಿನಲ್ ಹಾನಿ ಮತ್ತು ಗಾಂಜಾವನ್ನು ಹೊಂದಿದ್ದಕ್ಕಾಗಿ ಆತ ಶಿಕ್ಷೆಗೊಳಗಾದನಂತೆ. ಆದರೆ ಈಗ ಆತ ಮತ್ತೆ ತಪ್ಪಿಸಿಕೊಂಡು ಜೆಸ್ ಮತ್ತು ಜೋಡಿಗೆ ತಲೆನೋವು ತಂದಿದ್ದಾನಂತೆ.
ಈ ಸುದ್ದಿಯನ್ನೂ ಓದಿ:Viral Video: ಕ್ಯಾಶ್ ಆನ್ ಡೆಲಿವರಿ ಆಫ್ಶನ್ ಇಟ್ಟು ಎಕ್ಸ್ ಮನೆಗೆ 100 ಪಿಜ್ಜಾ ಕಳಿಸಿದ್ಳು... ಇದಪ್ಪಾ ರಿವೇಂಜ್ ಅಂದ್ರೆ!
ಪ್ರೀತಿಯಲ್ಲಿ ಜಗಳ, ಬ್ರೇಕ್ ಅಪ್ ಆಗುವುದೆಲ್ಲಾ ಕಾಮನ್ ಆಗಿದೆ. ಬ್ರೇಕ್ ಅಪ್ ಆದ ನಂತರ ಕೆಲವರು ತಮ್ಮ ಪಾಡಿಗೆ ತಾವಿರುತ್ತಾರೆ. ಆದರೆ ಕೆಲವರು ಮಾತ್ರ ಅದಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ. ಅದೇರೀತಿ ಇಲ್ಲೊಬ್ಬಳು ಯುವತಿ ಬ್ರೇಕ್ ಅಪ್ ಮಾಡಿಕೊಂಡ ಪ್ರಿಯಕರನಿಗೆ ಪ್ರೇಮಿಗಳ ದಿನದಂದು ಮರೆಯಲಾಗದ ಗಿಫ್ಟ್ ನೀಡಿದ್ದಾಳೆ. ಆಕೆ ತನ್ನ ಪ್ರಿಯಕರನ ಮನೆ ಬಾಗಿಲಿಗೆ 10 ಅಲ್ಲ, 100 ಪಿಜ್ಜಾ ಬಾಕ್ಸ್‌ಗಳನ್ನು ಕಳುಹಿಸಿದ್ದಾಳೆ ಅದು ಕ್ಯಾಶ್ ಆನ್ ಡೆಲಿವರಿಯಾಗಿಯಂತೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆ ಯುವತಿ ತನ್ನ ಮಾಜಿ ಗೆಳೆಯನ ವಿರುದ್ಧ ಸೇಡು ತೀರಿಸಿಕೊಳ್ಳಲು ಪಿಜ್ಜಾ ಆರ್ಡರ್ ಮಾಡಿದ್ದಾಳೆ ಎಂಬ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಯುವತಿ ಹಣವನ್ನು ಪಾವತಿಸದೆ ನೂರು ಪಿಜ್ಜಾಗಳನ್ನು ಆತನ ಮನೆಗೆ ತಲುಪುವಂತೆ ಆರ್ಡರ್ ಮಾಡಿ ಸೇಡು ತೀರಿಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
“ಕ್ಯಾಶ್ ಆನ್ ಡೆಲಿವರಿ ಆಯ್ಕೆಯ ಮೂಲಕ ಯುವತಿ ತನ್ನ ಮಾಜಿ ಸಂಗಾತಿಗೆ 100 ಪಿಜ್ಜಾಗಳನ್ನು ಕಳುಹಿಸಿದ್ದಾಳೆ” ಎಂದು ಈ ವಿಡಿಯೊದಲ್ಲಿ ಬರೆಯಲಾಗಿದೆ. ಫುಡ್ ಡೆಲಿವರಿ ಅಪ್ಲಿಕೇಶನ್ ಮ್ಯಾಜಿಕ್ಪಿನ್‍ಗೆ ಸಂಬಂಧಿಸಿದ ಡೆಲಿವರಿ ಬಾಯ್ ಪಿಜ್ಜಾಗಳನ್ನು ಗೆಳೆಯನ ಮನೆಯ ಬಾಗಿಲಿಗೆ ತೆಗೆದುಕೊಂಡು ಹೋಗುವುದು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಅದರಲ್ಲಿ ಡೆಲಿವರಿ ಬಾಯ್ ಪಿಜ್ಜಾ ಬಾಕ್ಸ್ ರಾಶಿಯನ್ನು ತೆಗೆದುಕೊಂಡು ಮೆಟ್ಟಿಲುಗಳನ್ನು ಹತ್ತುವುದು ಮತ್ತು ಅವುಗಳನ್ನು ಎಚ್ಚರಿಕೆಯಿಂದ ಆತನ ಮನೆ ಬಾಗಿಲಿನ ಬಳಿ ಇಟ್ಟಿರುವುದು ಸೆರೆಯಾಗಿತ್ತು.