#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ವಿದ್ಯಾರ್ಥಿಗಳನ್ನು ಕೋಣೆಗೆ ಕರೆದ ಪ್ರಾಂಶುಪಾಲನಿಂದ ಹೀನ ಕೃತ್ಯ

ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಮೆಡಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಡುಪ್ಪಲ್‍ನ ಶ್ರೀ ಬ್ರಿಲಿಯಂಟ್ ಟೆಕ್ನೋ ಹೈಸ್ಕೂಲ್‍ನ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿಗಳನ್ನು ಬೈಯುವ ನೆಪದಲ್ಲಿ ಅವರ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಪಟ್ಟ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು. ವೈರಲ್ ಆಗಿದೆ.

ಬೈಯುವ ನೆಪದಲ್ಲಿ ಹುಡುಗರ ಪ್ಯಾಂಟ್‌ ಬಿಚ್ಚಿಸಿದ ಪ್ರಾಂಶುಪಾಲ!

principal viral news

Profile pavithra Feb 11, 2025 11:39 AM

ಹೈದರಾಬಾದ್: ಗುರುವೆಂದರೆ ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರುವವನು. ಹಾಗಾಗಿ ಗುರುವನ್ನು ದೇವರಿಗೆ ಸಮಾನ ಎಂದು ಕರೆಯುತ್ತಾರೆ. ಆದರೆ ತೆಲಂಗಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿಗಳನ್ನು ತನ್ನ ಕಾಮಚಟಕ್ಕೆ ಬಳಸಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಈ ನೀಚ ಪ್ರಾಂಶುಪಾಲ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಖಾಸಗಿ ಭಾಗಗಳನ್ನು ಸ್ಪರ್ಶಿಸುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral News) ಆಗಿದೆ.

ಪ್ರಾಂಶುಪಾಲು ತನ್ನ ಎದುರು ನಿಂತ ವಿದ್ಯಾರ್ಥಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ಆತ ತನ್ನ ಕೈಯಿಂದ ಹುಡುಗನೊಬ್ಬನ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದು ಹಾಗೇ ವಿದ್ಯಾರ್ಥಿಯ ಪ್ಯಾಂಟ್ ತೆರೆಯಲು ಪ್ರಯತ್ನಿಸಿರುವುದು ಸೆರೆಯಾಗಿದೆ.

ವರದಿಗಳ ಪ್ರಕಾರ, ಮೆಡ್ಚಲ್ ಜಿಲ್ಲೆಯ ಮೆಡಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಡುಪ್ಪಲ್‍ನ ಶ್ರೀ ಬ್ರಿಲಿಯಂಟ್ ಟೆಕ್ನೋ ಹೈಸ್ಕೂಲ್‍ನ ಪ್ರಾಂಶುಪಾಲನ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳು ತಿಳಿಸಿದ ಪ್ರಕಾರ, ಪ್ರಾಂಶುಪಾಲ ರವೀಂದರ್ ರಾವ್ 9 ಮತ್ತು 10ನೇ ತರಗತಿಯ ಹುಡುಗರ ಖಾಸಗಿ ಭಾಗಗಳನ್ನು ಸ್ಪರ್ಶಿಸುತ್ತಿದ್ದಾನೆ ಎನ್ನಲಾಗಿದೆ.

ಈ ಆರೋಪಗಳ ನಂತರ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಗಳ ಸದಸ್ಯರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರಾಂಶುಪಾಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ರವೀಂದರ್ ರಾವ್ ಈ ಆರೋಪಗಳನ್ನು ನಿರಾಕರಿಸಿದ್ದಾನೆ. ವಿದ್ಯಾರ್ಥಿಗಳನ್ನು ಬೈಯುವಾಗ, ಟೈ ಮತ್ತು ಪ್ಯಾಂಟ್ ಹಿಡಿದಿದ್ದೇನೆ ಅಷ್ಟೇ. ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಆತ ಹೇಳಿದ್ದಾನೆ.

ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡ ವಿಡಿಯೊದಲ್ಲಿ ಅತ ವಿದ್ಯಾರ್ಥಿಯನ್ನು ಬೈಯುವಾಗ ಖಾಸಗಿ ಭಾಗಗಳನ್ನು ಸ್ಪರ್ಶಿಸಿರುವುದು ಸೆರೆಯಾಗಿದೆ. ಹೀಗಾಗಿ ರವೀಂದರ್ ರಾವ್ ವಿರುದ್ಧ ಸೋಶಿಯಲ್ ಮೀಡಿಯಾ ಬಳಕೆದಾರರು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Madhya Pradesh: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ 12ನೇ ತರಗತಿ ವಿದ್ಯಾರ್ಥಿ!

ಇತ್ತೀಚೆಗೆ ಪದೇ ಪದೆ ಶಾಲೆಗೆ ಗೈರಾಗಿದ್ದಕ್ಕೆ ವಿದ್ಯಾರ್ಥಿಗೆ ಪ್ರಾಂಶುಪಾಲರು ಛೀಮಾರಿ ಹಾಕಿದ್ದರು. ಇದರಿಂದ ಕೆರಳಿದ ಅಪ್ರಾಪ್ತ ವಿದ್ಯಾರ್ಥಿಯು ಕಂಟ್ರಿಮೇಡ್ ಪಿಸ್ತೂಲ್‌ನೊಂದಿಗೆ ಶಾಲೆಗೆ ನುಗ್ಗಿ ಶೌಚಾಲಯದಲ್ಲಿ ನಿಂತಿದ್ದ ಪ್ರಾಂಶುಪಾಲರ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ತಕ್ಷಣ ಪ್ರಾಂಶುಪಾಲರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಶಾಲಾ ಪ್ರಾಂಶುಪಾಲ ಸುರೇಂದ್ರ ಕುಮಾರ್ ಸಕ್ಸೇನಾ ಅವರಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರೀ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಂದ ಎಸ್‌ಪಿ ಮಾಹಿತಿ ಸಂಗ್ರಹಿಸಿದರು. ಓರ್ಚಾ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಧಮೋರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಪ್ರಿನ್ಸಿಪಾಲ್ ಕೊಲೆ ಪ್ರಕರಣದ ಆರೋಪಿಯ ಕೃತ್ಯ ಸೆರೆಯಾಗಿದೆ.