ಇಂದೋರ್: ಮನೆಯೊಳಗೆ ಕುಟುಂಬ ಸದಸ್ಯರು ಮಲಗಿದ್ದ ವೇಳೆ ಮುಸುಕುಧಾರಿ ಕಳ್ಳರು ಕಳವುಗೈದಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಮಧ್ಯಪ್ರದೇಶದ ಇಂದೋರ್ (Indore) ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಿಜಯ್ ನಗರ ಪ್ರದೇಶದ ನಿವೃತ್ತ ನ್ಯಾಯಮೂರ್ತಿ ರಮೇಶ್ ಗಾರ್ಗ್ ಅವರ ಮನೆಗೆ ನುಗ್ಗಿದ ಮೂವರು ಖದೀಮರು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ನಗದು ಮತ್ತು ಆಭರಣಗಳನ್ನು ಕದ್ದಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಮಾಧ್ಯಮ (Social media) ದಲ್ಲಿ ವೈರಲ್(Viral Video) ಆಗಿದೆ.
ಆಗಸ್ಟ್ 10 ರಂದು ಬೆಳಗಿನ ಜಾವ 3:30 ರ ಸುಮಾರಿಗೆ ಕುಟುಂಬ ಸದಸ್ಯರು ಮಲಗಿದ್ದಾಗ ಈ ಕಳ್ಳತನ ನಡೆದಿದೆ. ಖದೀಮರು ಬಂಗಲೆಯ ಮುಖ್ಯ ದ್ವಾರದ ಬೀಗವನ್ನು ಮುರಿದು ಕಬ್ಬಿಣದ ಕಿಟಕಿಯ ಗ್ರಿಲ್ ಅನ್ನು ಕತ್ತರಿಸಿ ಒಳಗೆ ನುಗ್ಗಿದ್ದು, ನಗದು ಹಾಗೂ ಚಿನ್ನವನ್ನು ದೋಚಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ, ನ್ಯಾಯಮೂರ್ತಿ ಗಾರ್ಗ್ ಅವರ ಮಗ ರಿತ್ವಿಕ್ ತಮ್ಮ ಕೋಣೆಯಲ್ಲಿ ನಿದ್ರಿಸುತ್ತಿದ್ದರು. ಈ ವೇಳೆ ಒಬ್ಬ ಕಳ್ಳ ಕಬ್ಬಿಣದ ರಾಡ್ ಹಿಡಿದು ಕಾವಲು ಕಾದಿದ್ದಾನೆ. ಒಂದು ವೇಳೆ ರಿತ್ವಿಕ್ ಎಚ್ಚರಗೊಳ್ಳುತ್ತಿದ್ದರೆ ಜೀವಕ್ಕೆ ಅಪಾಯವಾಗುತ್ತಿತ್ತು.
ವಿಡಿಯೊ ವೀಕ್ಷಿಸಿ:
🚨 Thieves in Indore robbed jewelry and cash from the locker while the family slept unaware 😨#indore #crime #robbery pic.twitter.com/FlMhwLJSE0
— Trolls Officials (@trollsofficials) August 13, 2025
ಒಬ್ಬ ಕಳ್ಳ ರಾಡ್ ಹಿಡಿದಿದ್ದರೆ, ಇನ್ನೊಬ್ಬ ಕಳ್ಳ ಕಬೋರ್ಡ್‌ನಲ್ಲಿರುವ ನಗದು, ಚಿನ್ನವನ್ನು ದೋಚಿದ್ದಾನೆ. ಮೂರನೇ ಕಳ್ಳ ಹೊರಗೆ ಕಾವಲು ಕಾಯುತ್ತಿದ್ದ. ಇನ್ನೊಂದು ಕೋಣೆಯಲ್ಲಿ ನಿದ್ರಿಸುತ್ತಿದ್ದ ರಿತ್ವಿಕ್ ಹೆಂಡತಿ ಮತ್ತು ಮಕ್ಕಳಿಗೆ ಪಕ್ಕದ ಕೋಣೆಯಲ್ಲಿ ನಡೆಯುತ್ತಿರುವ ಅಪರಾಧದ ಬಗ್ಗೆ ತಿಳಿದಿರಲಿಲ್ಲ.
ನಿವೃತ್ತ ನ್ಯಾಯಾಧೀಶರೊಬ್ಬರ ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಸ್ಥಳೀಯ ಭದ್ರತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ಅಪರಾಧಿಗಳನ್ನು ಹಿಡಿಯಲು ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದೆ. ವಿಜಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳ್ಳರನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: Viral Video: ಶಾಲೆಯ ಎಲ್‍ಇಡಿ ಸ್ಕ್ರೀನ್ ಮೇಲೆ ಅಶ್ಲೀಲ ಚಿತ್ರ ವೀಕ್ಷಿಸಿದ ವಿದ್ಯಾರ್ಥಿಗಳು; ಪೋಷಕರಿಂದ ಭಾರಿ ಆಕ್ರೋಶ