ಪಟನಾ: ಇತ್ತೀಚೆಗೆ ಟ್ರಾಫಿಕ್ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಟ್ರಾಫಿಕ್ ಸಿಬ್ಬಂದಿಯೊಬ್ಬರು ಗರ್ಭಿಣಿ ಮಹಿಳೆಯೊಂದಿಗೆ ದರ್ಪ ಮೆರೆದ ವಿಡಿಯೋವೊಂದು ಭಾರೀ ವೈರಲ್ (Viral Video) ಆಗುತ್ತಿದೆ. ದಂಡ ಕಟ್ಟುವ ವಿಚಾರವಾಗಿ ವಾಗ್ವಾದಕ್ಕಿಳಿದ ಟ್ರಾಫಿಕ್ ಅಧಿಕಾರಿಯೊಬ್ಬರು ಗರ್ಭಿಣಿ ಮಹಿಳೆಯನ್ನು ಸ್ಕೂಟರ್ ನಲ್ಲಿ ಬಲವಂತವಾಗಿ ಎಳೆದೊಯ್ದ ಘಟನೆ ಬಿಹಾರದ ಪಟನಾದಲ್ಲಿ ನಡೆದಿದೆ. ಇದೀಗ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ನಡೆ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಹಿಳೆ ಮತ್ತು ಆಕೆಯ ಪತಿ ತಮ್ಮ ಸ್ಕೂಟರ್ ಅನ್ನು ರಾಂಗ್ ಸೈಡ್ ನಲ್ಲಿ ನೂಕಿಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಇಬ್ಬರನ್ನು ತಡೆದಿದ್ದಾರೆ. ಟ್ರಾಪಿಕ್ ಪೊಲೀಸ್ ಪ್ರಶ್ನಿಸಿದಾಗ ಸರಿಯಾದ ಯು-ಟರ್ನ್ ತುಂಬಾ ಮುಂದಿದೆ ಅದಕ್ಕಾಗಿ ಯೇ ವಾಹನವನ್ನು ಓಡಿಸುವ ಬದಲು ನಡೆದು ಹೋಗುತ್ತೇವೆ ಎಂದಿದ್ದಾರೆ. ಈ ಸಂದರ್ಭ ಅಧಿಕಾರಿ ದಾಖಲೆಗಳ ಪರಿಶೀಲನೆ ಮಾಡಿದ್ದು ಸ್ಕೂಟರ್ ಮೇಲೆ ಈಗಾಗಲೇ 12,000 ರೂಪಾಯಿ ಮೊತ್ತದ ಚಾಲನ್ ಬಾಕಿ ಉಳಿದಿರುವುದು ದೃಢಪಟ್ಟಿದೆ. ಚಲನ್ ಪಾವತಿಸದ ಕಾರಣ ಅಧಿಕಾರಿ ಸ್ಕೂಟರ್ ಅನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲು ಯೋಜಿಸಿದ್ದಾರೆ. ಸ್ಕೂಟರ್ ವಶಕ್ಕೆ ಪಡೆಯುವುದನ್ನು ತಡೆಯಲು ಗರ್ಭಿಣಿ ಮಹಿಳೆಯು ಸ್ಕೂಟರ್‌ನ ಮುಂಭಾಗದಲ್ಲಿ ನಿಂತಿರುವುದು ಕಂಡು ಬರುತ್ತದೆ.
ವಿಡಿಯೊ ವೀಕ್ಷಿಸಿ:
ವಿಡಿಯೋದಲ್ಲಿ ಗಮನಿಸಿದಾಗ ಅಧಿಕಾರಿ ವಾಹನವನ್ನು ನಿಧಾನವಾಗಿ ಮುಂದಕ್ಕೆ ಚಲಾಯಿಸಲು ಪ್ರಯತ್ನಿಸಿದ್ದಾರೆ.. ಮಹಿಳೆಯು ಸ್ಕೂಟರ್‌ನ ಮುಂದೆಯೇ ಇದ್ದಾಗ ವಾಹನವು ಆಕೆಯನ್ನು ಎಳೆ ದೊಯ್ದಂತೆ ಭಾಸವಾಗಿದೆ.. ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳೆಯು ಅಧಿಕಾರಿಯು ತನ್ನನ್ನು ತಳ್ಳಿದ್ದು ಮತ್ತು ಸ್ಕೂಟರ್‌ನ ಬಂಪರ್ ತನ್ನ ಗರ್ಭಕ್ಕೆ ತಾಕಿದೆ ಎಂದು ಆರೋಪಿಸಿದ್ದಾರೆ.
Viral Photo: ಸೂರ್ಯನನ್ನೇ ಹಾದು ಹೋದ ಸ್ಕೈಡೈವರ್- ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ!
ವಾಗ್ವಾದದ ನಡುವೆಯೇ , ಅಧಿಕಾರಿ ಸ್ಕೂಟರ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಂಪತಿಗಳು ತಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿದರು ಮತ್ತು ಬಾಕಿ ಉಳಿದಿರುವ ದಂಡವನ್ನು 15 ದಿನಗಳೊಳಗೆ ಪಾವತಿಸುವುದಾಗಿ ಪೊಲೀಸರಿಗೆ ಭರವಸೆ ನೀಡಿದರು. ನಂತರ, ಪೊಲೀಸರು ಅವರಿಗೆ ಸ್ಕೂಟರ್ ಅನ್ನು ಹಿಂತಿರುಗಿಸಿದ್ದಾರೆ.
ಈ ಘಟನೆಯಲ್ಲಿ ದಂಡ ಪವಾತಿಸದೇ ಇರುವುದು ತಪ್ಪು ಇದ್ದರೂ ಅಧಿಕಾರಿಗಳ ನಡವಳಿಕೆ ಕುರಿ ತಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸ್ ಅಧಿಕಾರಿಯ ಅಮಾನವೀಯ ವರ್ತನೆಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿಬಂದಿದೆ. ನೆಟ್ಟಿಗರೊಬ್ಬರು ಸಂಚಾರ ನಿಯಮಗಳು ಜನರನ್ನು ಕನಿಕಾರ ಇಲ್ಲದಂತೆ ನಡೆಸಿಕೊಳ್ಳುವ ಹಕ್ಕನ್ನು ಯಾರಿಗೂ ನೀಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇದು ಮಹಿಳೆಯದ್ದೇ ತಪ್ಪು, ಆದರೆ ಸ್ವಲ್ಪ ಕರುಣೆ ತೋರಿಸಿ ಅವರು ಗರ್ಭಿಣಿ" ಎಂದು ಬರೆದುಕೊಂಡಿದ್ದಾರೆ.